ವಿಜಯದಶಮಿ ಹಬ್ಬದ ಪ್ರಯುಕ್ತ ಮಗಳ ಫೋಟೋ ಮತ್ತು ಹೆಸರು ಹಂಚಿಕೊಂಡ ರಿಷಬ್ ಶೆಟ್ಟಿ...
ಸ್ಯಾಂಡಲ್‌ವುಡ್ ಡಿಫರೆಂಟ್ ಡೈರೆಕ್ಟರ್ ಕಮ್ ನಟ ರಿಷಬ್ ಶೆಟ್ಟಿ ಕಾಂತಾರಾ ಸಿನಿಮಾ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಕಾಂತಾರ ಸಿನಿಮಾ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದೆ ಆದರೆ ಚಿತ್ರಕಥೆ ಮತ್ತು ಮೇಕಿಂಗ್‌ನಿಂದ ಪರ ಭಾಷಯವರು ಕೂಡ ಸಿನಿಮಾ ನೋಡುತ್ತಿದ್ದಾರೆ. ಹೀಗಾಗಿ ಒಂದು ಶೋ ಟಿಕೆಟ್ ಸಿಗುವುದು ಕೂಡ ಕಷ್ಟವಾಗಿದೆ ಎನ್ನಬಹುದು. ಈ ಸಂಭ್ರಮದಲ್ಲಿರುವ ಶೆಟ್ರು ಫ್ಯಾಮಿಲಿ ಅಭಿಮಾನಿಗಳ ಜೊತೆ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಹೌದು! ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ಮಾರ್ಚ್ 4ರಂದು ಹೆಣ್ಣು ಮಗುವನ್ನು ಬರ ಮಾಡಿಕೊಂಡರು. 'ಇಷ್ಟೇ ಚೆಂದದ ಮಗಳು ಹುಟ್ಟಿದ್ದಾಳೆ. ತಾಯಿ ಮಗಳು ಆರೋಗ್ಯವಾಗಿದ್ದಾರೆ' ಎಂದು ಬರೆದುಕೊಂಡಿದ್ದರು. ಆದರೆ ಫೋಟೋ ಮತ್ತು ಹೆಸರು ರಿವೀಲ್ ಮಾಡಿರಲಿಲ್ಲ. ಕಾಂತಾರ ಯಶಸ್ಸಿನಲ್ಲಿರುವ ರಿಷಬ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಗಳ ಫೋಟೋ ರಿವೀಲ್ ಮಾಡಿದ್ದಾರೆ.
undefined
‘ಕಾಂತಾರ’ ನಾಲ್ಕು ಭಾಷೆಗಳಿಗೆ ಡಬ್‌ಗೆ ಶೀಘ್ರ ತೀರ್ಮಾನ: ನಿರ್ದೇಶಕ ರಿಷಬ್ ಶೆಟ್ಟಿ
ರಿಷಬ್ ಪೋಸ್ಟ್:
'ಎಲ್ಲರಿಗೂ ನವರಾತ್ರಿಯ ಶುಭಾಶಯಗಳು. ನಾಡಹಬ್ಬಕ್ಕೆ ಕಾಂತಾರದ ಯಶಸ್ಸು, ನಾಡಿನ ಜನರ ಪ್ರೀತಿ ಮತ್ತಷ್ಟು ಸಂಭ್ರಮವನ್ನು ತಂದಿವೆ. ಇದಕ್ಕೆ ಕಲಶಪ್ರಾಯವಾಗಿ, ಮಗಳು ರಾಧ್ಯಾಳ ಮುಗ್ಧ ನಗುವೂ ಜೊತೆಯಾಗಿದೆ.. ನಿಮ್ಮೆಲ್ಲರ ಹಾರೈಕೆಗಳಿರಲಿ' ಎಂದು ಬರೆದುಕೊಂಡಿದ್ದಾರೆ.
1 ತಿಂಗಳು Non Veg ತಿಂದಿಲ್ಲ, ಚಪ್ಪಲಿ ಹಾಕುತ್ತಿರಲಿಲ್ಲ: ಕಾಂತಾರ ಕಷ್ಟ ಬಿಚ್ಚಿಟ್ಟ ರಿಷಬ್ ಶೆಟ್ಟಿ
ಮಗಳಿಗೆ ರಾಧ್ಯಾ ಎಂದು ಹೆಸರಿಟ್ಟಿದ್ದಾರೆ. Meaning of Radhya is worshipped. ಚಂದ್ರನ ಚಿಹ್ನೆ ಆಧಾರಿತ ವೈದಿಕ ಜ್ಯೋತಿಷ್ಯದಲ್ಲಿ ರಾಧುವಾ ಎಂಬ ಹೆಸರಿನ ವ್ಯಕ್ತಿಯು ಎಲ್ಲವನ್ನೂ ಸುಲಭವಾಗಿ ತೆಗೆದುಕೊಳ್ಳುವ ಅಂತರ್ಗತ ಗುಣವನ್ನು ಹೊಂದಿರುತ್ತಾನೆ.ಈ ಜನರು ಸುಲಭವಾಗಿ ಪ್ರೀತಿಸುತ್ತಾರೆ ಮತ್ತು ಇತರ ಜನರಿಂದ ಆದ್ಯತೆ ಪಡೆಯುತ್ತಾರೆ. ಈ ನಿರ್ದಿಷ್ಟ ಜನರು ತಮ್ಮ ಗುರಿಯಿಂದ ದೂರ ಸರಿಯಲು ಇಷ್ಟಪಡುವುದಿಲ್ಲ.
'ಮಗಳು ತುಂಬಾ ಮುದ್ದಾಗಿದ್ದಾಳೆ. ಅಣ್ಣನ ಲುಕ್ ಬಂದಿದೆ. ಮಗಳು ಕೂಡ ಫಾರಿನ್ ಬೇಬಿ ರೀತಿ ಹುಟ್ಟಿದ್ದಾಳೆ. ಮಕ್ಕಳಿಬ್ಬರ ಫೋಟೋವನ್ನು ಒಟ್ಟಿಗೆ ಅಪ್ಲೋಡ್ ಮಾಡಿ. ಮಗ ನಿಮ್ಮ ಸಿನಿಮಾ ಮೂಲಕ ಆಗಲೇ ಸ್ಟಾರ್ ಆಗಿದ್ದಾನೆ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಪುತ್ರ ಕೂಡ ಸ್ಟಾರ್:
ಏಪ್ರಿಲ್ 7, 2019ರಲ್ಲಿ ರಿಷಬ್ ಮತ್ತು ಪ್ರಗತಿ ಪುತ್ರ ರಣ್ವಿತ್ ಶೆಟ್ಟಿನ ಬರ ಮಾಡಿಕೊಂಡರು. ಮಕ್ಕಳ ದಿನಾಚರಣೆಯಂದು ಮಗನ ಹೆಸರು ಮತ್ತು ಫೋಟೋ ರಿವೀಲ್ ಮಾಡಿದ್ದರು. ಪ್ರತಿ ವರ್ಷವೂ ರಣ್ವಿತ್ ಹುಟ್ಟುಹಬ್ಬವನ್ನು ಡಿಫರೆಂಟ್ ಆಗಿ ಆಚರಿಸಲಾಗುತ್ತದೆ. ರಣ್ವಿತ್ ಮೊದಲ ಹುಟ್ಟುಹಬ್ಬದ ದಿನ ವಿಶ್ವ ಪರಿಸರ ದಿನವಿತ್ತು ಹೀಗಾಗಿ ರಿಷಬ್ ತಮ್ಮ ಹುಟ್ಟೂರಿನಲ್ಲಿ ಪರಿಸರ ಸಮ್ಮುಖದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಬರ್ತಡೇ ಥೀಮ್ ಸಖತ್ ವೈರಲ್ ಅಗಿತ್ತು.
ರಣ್ವಿತ್ ಎರಡನೇ ಹುಟ್ಟುಹಬ್ಬವನ್ನು ಇನ್ನಷ್ಟು ಜೋರಾಗಿ ಆಚರಿಸಿದ್ದರು. 'ನಮ್ಮನ್ನು ನಿಮ್ಮ ಪೋಷಕರಾಗಿ ಆಯ್ಕೆ ಮಾಡಿರುವುದಕ್ಕೆ ನಾವು ಗ್ರೇಟ್. ನೀನು ಕೊಟ್ಟಿರುವ ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಅಗುವುದಿಲ್ಲ. ನೀನು ಬರುವ ಮುಂಚೆ ನನ್ನ ಜೀವನ ಹೇಗಿತ್ತು ಈಗ ಹೇಗಿದೆ ಎಂದು ಕಲ್ಪನೆ ಮಾಡಿಕೊಳ್ಳಲು ಆಗುತ್ತಿಲ್ಲ' ಎಂದು ಪ್ರಗತಿ ಬರೆದುಕೊಂಡಿದ್ದರು.
ಕಾಂತಾರ:
ಹೊಂಬಾಳೆ ಫಿಲ್ಮ್ಸ್ದ ಸಿನಿಮಾ ಮಾಡಿರುವ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಷಬ್ ಶೆಟ್ಟಿಗೆ ಜೋಡಿಯಾಗಿ ಸಪ್ತಮಿ ಗೌಡ ಮಿಂಚಿದ್ದಾರೆ. ಬಿಡುಗಡೆಯಾದ ದಿನದಿಂದಲ್ಲೂ ಸೂಪರ್ ಹಿಟ್ ಕಂಡಿರುವ ಸಿನಿಮಾದಲ್ಲಿ ರಿಷಬ್ ಪತ್ನಿ ಪ್ರಗತಿ ಮತ್ತು ಪುತ್ರ ರಣ್ವಿತ್ ಅಭಿನಯಿಸಿದ್ದಾರೆ. ಪ್ರಗತಿ ಪಾತ್ರ ಚಿಕ್ಕದಾಗಿದ್ದರೂ ಅದ್ಭುತವಾಗಿತ್ತು ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ.