ಕಾಂತಾರ ಹಿಂದಿ ಸಂದರ್ಶನದಲ್ಲಿ ಸಮಂತಾ ಅಥವಾ ರಶ್ಮಿಕಾ ಮಂದಣ್ಣ ಎಂದು ಪ್ರಶ್ನೆ ಮಾಡಿದ್ದಾಗ ರಿಷಬ್ ಕೊಟ್ಟ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ....
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯಿಸಿರುವ ಕಾಂತಾರ ಸಿನಿಮಾ ವಿಶ್ವಾದ್ಯಂತ ಹೆಸರು ಮಾಡುತ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಧೂಳ್ ಎಬ್ಬಿಸುತ್ತಿರುವ ಕಾರಣ ರಿಷಬ್ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. 1.13 ಮಿಲಿಯನ್ ಯೂಟ್ಯೂಬ್ ಫಾಲೋವರ್ಸ್ ಹೊಂದಿರುವ ಸಿದ್ಧಾರ್ಥ್ ಕಣ್ಣನ್ ಚಾನೆಲ್‌ನಲ್ಲಿ ರಿಷಬ್ ಶೆಟ್ಟಿ ಸಮಂತಾ ರುತ್ ಪ್ರಭು ಪ್ರತಿಭೆಯನ್ನು ಹೊಗಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿತ್ತು ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಕಾಂತಾರ ಯಶಸ್ಸು, ಕೆಲೆಕ್ಷನ್ ಬಗ್ಗೆ ಮಾತನಾಡಿದ ನಂತರ Rapid Fire ಗೇಮ್ ನಡೆದಿದೆ. ಈ ವೇಳೆ ಕೆಜಿಎಫ್ 3, ಸುದೀಪ್ ಮತ್ತು ಯಶ್ ಬಗ್ಗೆ ಪ್ರಶ್ನಿಸಲಾಗಿತ್ತು.
KGF 3 ಸಿನಿಮಾ ಮಾಡ್ತಾರೆ ಅಂದ್ರೆ ನೀವು ನಟಿಸುತ್ತೀರಾ?
ಗೊತ್ತಿಲ್ಲ ನಾನು ಹೆಚ್ಚಿಗೆ ಯೋಚನೆ ಮಾಡುವುದಿಲ್ಲ. ಆಫರ್ ಬಂದ್ರೂನೂ ಪ್ರಶಾಂತ್ ನೀಲ್ ಆಫರ್ ಅಥವಾ ಹೊಂಬಾಳೆ ಆಫರ್ ಆ? ನಾಳೆ ಬಗ್ಗೆ ಹೆಚ್ಚಿಗೆ ಯೋಚನೆ ಮಾಡುವುದಿಲ್ಲ ನಾನು ಇಂದು ನಿಮ್ಮ ಜೊತೆ ಮಾತನಾಡುತ್ತೀರುವ ಇಂದು ಸಂಜೆ ಬಗ್ಗೆ ಮಾತ್ರ ಯೋಚನೆ ಮಾಡುವುದು ಅಷ್ಟೆ.
ರಶ್ಮಿಕಾ ಮಂದಣ್ಣ ಅಥವಾ ಸಮಂತಾ, ಇವರಿಬ್ಬರ ಯಾರ ಜೊತೆ ನಟಿಸಲು ಇಷ್ಟ ಪಡುತ್ತೀರಾ?
ಸಮಂತಾ ಪರ್ಫಾರ್ಮೆನ್ಸ್ ನನಗೆ ತುಂಬಾನೇ ಇಷ್ಟ ಆಗುತ್ತದೆ. ಹೊಸ ಹೊಸ ಕಲಾವಿದರನ್ನು ಕರೆತಂದು ಕೆಲಸ ಮಾಡುವುದಕ್ಕೆ ತುಂಬಾ ಇಂಟ್ರೆಸ್ಟ್ ಇದೆ. ವಿಭಿನ್ನ ಕ್ಯಾರೆಕ್ಟ್‌ಗಳಿರುತ್ತದೆ ಯಾವುದೇ ಬ್ಯಾಗೇಜ್ ಹೊತ್ತಿಕೊಂಡು ಬರುವುದಿಲ್ಲ ನಮಗೂ ಯಾವ ಬ್ಯಾಗೇಜ್ ಇರುವುದಿಲ್ಲ.
ಸುದೀಪ್ ಅಥವಾ ಯಶ್, ಯಾರನ್ನು ಹೆಚ್ಚಿಗೆ admire ಮಾಡುತ್ತೀರಾ?
ಇಬ್ಬರನ್ನೂ ನಾನು admire ಮಾಡುತ್ತೀನಿ. ಸುದೀಪ್ ಸರ್ ದೊಡ್ಡ ಅಭಿಮಾನಿ ನಾನು. ಯಶ್ ಅವರ ಜರ್ನಿ ತುಂಬಾ ಸ್ಫೂರ್ತಿ ಕೊಡುತ್ತದೆ ಏಕೆಂದರೆ ನಮ್ಮ ಜರ್ನಿ ಏನಂದ್ರೆ ಏನೂ ಇಲ್ಲ ಸುದೀಪ್ ಸರ್ ಅವರದ್ದು ಕೂಡ ಇದೇ ತರ ಜರ್ನಿ ಹೀಗಾಗಿ ಇಬ್ಬರೂ ಅಚ್ಚುಮೆಚ್ಚು. ಸುದೀಪ್ ಸರ್ ಕೂಡ ಆರಂಭದಲ್ಲಿ ತುಂಬಾ ಕಷ್ಟ ಪಟ್ಟಿದ್ದಾರೆ ಅವರ ಜರ್ನಿಯನ್ನು ನೋಡಿಕೊಂಡು ಬಂದಿದ್ದೀನಿ.
ಕಲೆಕ್ಷನ್:
ಕಾಂತಾರ ಇದೀಗ 300 ಕೋಟಿ ಕ್ಲಬ್ ಸೇರಿದೆ ಎಂದು ವರದಿಯಾಗಿದೆ. ಒಂದೇ ತಿಂಗಳ ಅವಧಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕಾಂತಾರ ಸಾಧನೆ ಮಾಡಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಓವರ್‌ಸೀಸ್ ಗಳಿಕೆಯ ಒಟ್ಟು ಮೊತ್ತ 300 ಕೋಟಿ ದಾಟಿದೆ. ಈ ಮೊತ್ತದಲ್ಲಿ ಕನ್ನಡದ ಗಳಿಕೆ ರು.150 ಕೋಟಿಯಾದರೆ ತೆಲುಗಿನಿಂದ ಬಂದದ್ದು .50 ಕೋಟಿ. ಹಿಂದಿ ಅವತರಣಿಕೆಯ ಗಳಿಕೆ 50 ರೂ. ಕೋಟಿ ದಾಟಿದೆ.
Kantara Review: ಕಾಂತಾರ ಒಂದು ವಿಶಿಷ್ಟ ಅನುಭೂತಿ
ಕಾಂತಾರ ಬಗ್ಗೆ
ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆ ಖ್ಯಾತ ನಟ ಕಿಶೋರ್ ಕುಮಾರ್ ಸಹ ನಟಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕಿಯಾಗಿ ಸಪ್ತಮಿ ಗೌಡ ಮಿಂಚಿದ್ದಾರೆ. ಅಚ್ಯುತ್ ಕುಮಾರ್ ಪಾತ್ರ ಎಲ್ಲರ ಹೃದಯ ಗೆದ್ದಿದೆ. ಅನೇಕರಂಗಭೂಮಿ ಕಲಾವಿದರೂ ಕಾಂತಾರ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬಂಡಾವಳ ಹೂಡಿದೆ.
ಸೀಮಿತ ಪ್ರದೇಶದ ಸಂಸ್ಕೃತಿ, ಕಥೆಯನ್ನು ಜಗತ್ತಿಗೆ ದಾಟಿಸುವಾಗಿನ ಸವಾಲು?
ನಾನು ಯಾವತ್ತೂ ನಂಬೋದು ಮೋರ್ ರೀಜನಲ್, ಮೋರ್ ಯೂನಿವರ್ಸಲ್ ಅನ್ನೋದನ್ನು. ಹೆಚ್ಚು ಸ್ಥಳೀಯವಾಗಿಯೇ ನಮ್ಮೊಳಗೆ ಇರುವ ‘ಕೋರ್’ ಅಂತೀವಲ್ವಾ, ಆ ಕೋರ್ ಕಂಟೆಂಟ್ ಯಾವತ್ತೂ ಯೂನಿವರ್ಸಲ್ ಆಗಿರುತ್ತೆ.ನನ್ನ ಲಿಸ್ಟ್‌ನಲ್ಲಿ ಇಲ್ಲದೇ ಇದ್ದಿದ್ದ ಸಿನಿಮಾ ಈ ಕಾಂತಾರ. ಅದು ಸೆಕೆಂಡ್ ಲಾಕ್‌ಡೌನ್ ಸಮಯ. ಊರಲ್ಲಿದ್ದೆ. ಗೆಳೆಯರ ಜೊತೆಗೆ ಯಾವುದೋ ವಿಷಯ ಚರ್ಚಿಸುತ್ತಿದ್ದಾಗ ಸಡನ್ನಾಗಿ ಒಂದು ಥಾಟ್ ಬಂತು. ಮಾತಾಡ್ತಾ ಮಾತಾಡ್ತಾ ಕಥೆಯ ರೂಪ ಪಡೆಯಿತು. ಅರ್ಧ ಗಂಟೆಯಲ್ಲಿ ಫಸ್ಟ್ ಹಾಫ್ ಕಥೆ ಕಂಪ್ಲೀಟ್ ಆಗೋಯ್ತು! ಸೆಕೆಂಡ್ ಹಾಫ್ ಮಾಡುವಾಗ ಒಂದಿಷ್ಟುರೀಸಚ್‌ರ್, ಚರ್ಚೆಗಳೆಲ್ಲ ನಡೆದು ಟೈಮ್ ತಗೊಳ್ತು.ಅದೊಂದು ಅದ್ಭುತ ಅನುಭವ. ನನ್ನೂರಿನ ಕಥೆ ಹೇಳುವಾಗ ಅದು ನನಗೆ ಬರೀ ಸಿನಿಮಾ ಅಷ್ಟೇ ಆಗಿರಲ್ಲ, ಅದು ಎಮೋಶನ್. ಅಲ್ಲಿ ತೋರಿಸಿರುವ ಸಂಸ್ಕೃತಿ ನಾವು ನಡೆದುಕೊಳ್ಳೋದು, ಆರಾಧಿಸೋದು, ನಮ್ಮ ಜನ ಜೀವನ ಎಲ್ಲವೂ ಆಗಿರುವಾಗ ಇದು ಭಾವನಾತ್ಮಕವಾಗಿ ನನಗೆ ಹೆಚ್ಚು ಕನೆಕ್ಟೆಡ್.