
ರಿಷಬ್ ಶೆಟ್ಟಿನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾ 300 ಕೋಟಿ ಗಳಿಕೆಯತ್ತ ಮುಖ ಮಾಡುವ ಮೂಲಕ ಕನ್ನಡದ್ದೇ ಮತ್ತೊಂದು ಸಿನಿಮಾ ‘ಕೆಜಿಎಫ್ 2’ ಚಿತ್ರದ ದಾಖಲೆಯನ್ನು ಮುರಿಯಲಿದೆ ಎಂಬುದು ಸಿನಿಮಾ ಬಾಕ್ಸ್ ಅಫೀಸ್ ಪಂಡಿತರ ಭವಿಷ್ಯದ ಲೆಕ್ಕಾಚಾರಗಳು. ಸದ್ಯಕ್ಕೆ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು ಮುಗಿಯುತ್ತಿದ್ದು, ಈಗಾಗಲೇ ಕರ್ನಾಟಕ, ಹೊರ ರಾಜ್ಯಗಳು ಹಾಗೂ ವಿದೇಶಗಳು ಸೇರಿದಂತೆ ವಿಶ್ವಾದ್ಯಂತ ಒಟ್ಟಾರೆ 250 ಕೋಟಿ ಗಳಿಕೆ ಮಾಡಿದ್ದು, ಈ ಪೈಕಿ ಕರ್ನಾಟಕ ಹಾಗೂ ಹೊರ ರಾಜ್ಯಗಳಲ್ಲಿ 200 ಕೋಟಿ ಗಳಿಸಿದೆ.
‘ಕಾಂತಾರ’ ಚಿತ್ರದ ಗಳಿಕೆ ಹೀಗೆ ಮುಂದುವರಿದರೆ ವಿಶ್ವಾದ್ಯಂತ 300 ಕೋಟಿ ಗಳಿಸುವ ಮೂಲಕ ಕನ್ನಡ ಚಿತ್ರವೊಂದು ಐತಿಹಾಸಿಕ ದಾಖಲೆಗೆ ನಾಂದಿ ಆಡಲಿದೆ. ಅಲ್ಲದೆ ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಂದು ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ‘ಕೆಜಿಎಫ್ 2’ ಚಿತ್ರದ ಗಳಿಕೆಯ ದಾಖಲೆ ಮುರಿಯಲಿದೆ ಎನ್ನಲಾಗುತ್ತಿದೆ. ಸಿನಿಮಾ ತೆರೆಗೆ ಬಂದ 28 ದಿನಗಳಲ್ಲೇ ಭಾರತದಲ್ಲಿ 201 ಕೋಟಿ, ಹೊರ ದೇಶಗಳಲ್ಲಿ 49 ಕೋಟಿ ಗಳಿಸಿದ್ದು, ಸದ್ಯದ ಬಾಕ್ಸ್ ಅಫೀಸ್ ಭವಿಷ್ಯದ ಲೆಕ್ಕಾಚಾರಗಳ ಪ್ರಕಾರ 300 ಕೋಟಿ ಗಳಿಸಿದರೆ ಯಶ್ ನಟನೆಯ ‘ಕೆಜಿಎಫ್ 2’ ಚಿತ್ರದ ನಂತರ ಅತೀ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ‘ಕಾಂತಾರ’ ಸಿನಿಮಾ ಪಾತ್ರವಾಗಲಿದೆ.
ವಿಶೇಷ ಎಂದರೆ ಈ ವರ್ಷ ತೆರೆಕಂಡ ಬಹು ಕೋಟಿ ವೆಚ್ಚದ ಚಿತ್ರಗಳಾದ ‘ಕೆಜಿಎಫ್ 2’, ‘ಆರ್‌ಆರ್‌ಆರ್’, ‘ಪೊನ್ನಿಯಿನ್ ಸೆಲ್ವನ್ 1’, ‘ಬ್ರಹ್ಮಾಸ್ತ್ರ’, ‘ವಿಕ್ರಮ್’, ‘ದಿ ಕಾಶ್ಮೀರ್ ಫೈಲ್’, ‘ಭೂಲ್ ಭುಲೈಯಾ’ ಅತೀ ಹೆಚ್ಚು ಗಳಿಕೆ ಮಾಡಿದ 2022ನೇ ಸಾಲಿನ ಭಾರತೀಯ ಸಿನಿಮಾಗಳ ಪಟ್ಟಿಗೆ ಸೇರಿದ್ದು, ಈಗ ಇದೇ ಪಟ್ಟಿಗೆ ರಿಷಬ್ ಶೆಟ್ಟಿಅವರ ‘ಕಾಂತಾರ’ ಎಂಟನೇ ಚಿತ್ರವಾಗಿ ಸೇರುತ್ತಿರುವುದು ಕನ್ನಡ ಚಿತ್ರರಂಗದ ಮತ್ತೊಂದು ಹೆಮ್ಮೆಯ ಸಂಗತಿ.
ರಿಷಬ್‌ಗೆ ಅಭಿಮಾನಿಯಾದೆ, ಸಪ್ತಮಿ ಮುಗ್ಧತೆ ಇಷ್ಟವಾಯಿತು; 'ಕಾಂತಾರ' ನೋಡಿ ಹೊಗಳಿದ ಧನಂಜಯ್
ಅಚ್ಯುತ್ ಕುಮಾರ್, ಕಿಶೋರ್, ಸಪ್ತಮಿಗೌಡ ಮುಂತಾದವರು ನಟಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲಮ್ಸ್ ನಿರ್ಮಿಸಿದ್ದು, ಇದರ ಓಟಿಟಿ ಹಕ್ಕುಗಳು ಅಮೆಜಾನ್ ಪ್ರೈಮ್ ವಿಡಿಯೋಗೆ ಮಾರಾಟ ಆಗಿವೆ. ನವೆಂಬರ್ ತಿಂಗಳಲ್ಲಿ ‘ಕಾಂತಾರ’ ಓಟಿಟಿಯಲ್ಲಿ ಪ್ರಸಾರಗೊಳ್ಳುವ ನಿರೀಕ್ಷೆ ಇದೆ.
ಕಾಂತಾರ ಬಗ್ಗೆ ಸೆಲೆಬ್ರಿಟಿಗಳ ಟ್ವೀಟ್:
'ನಾವು ತಿಳಿದಿರುವುದಕ್ಕಿಂತ ತಿಳಿಯದಿರುವುದೇ ಹೆಚ್ಚಿದೆ' ಹೊಂಬಾಳೆ ಫಿಲ್ಮ್ಸ್‌ನ ಕಾಂತರ ಚಿತ್ರಕ್ಕಿಂತ ಅದ್ಬುತವಾಗಿ ಇದನ್ನು ಯಾರೂ ಹೇಳಿರಲಿಲ್ಲ. ರಿಷಭ್ ಶೆಟ್ಟಿ ನೀವು ನನಗೆ ಮೈನವಿರೇಳಿಸುವಂಥ ಚಿತ್ರ ನೀಡಿದ್ದೀರಿ. ರಿಷಬ್ ಒಬ್ಬ ರೈಟರ್, ನಟ ಹಾಗೂ ನಿರ್ದೇಶಕರಾಗಿ ನಾನು ನಿಮಗೆ ಹ್ಯಾಟ್ಸ್‌ಆಫ್ ಹೇಳುತ್ತಿದ್ದೇವೆ. ಭಾರತೀಯ ಚಿತ್ರರಂಗದಲ್ಲಿ ಇರುವ ಮಾಸ್ಟರ್‌ಪೀಸ್ ಇದರ ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಅಭಿನಂದನೆಗಳು' ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.
ಕರಾವಳಿ ದೀಪಾವಳಿಯಲ್ಲೂ ಕಾಂತಾರದ್ದೇ ಹವಾ!
ದೇವಾನು ದೇವತೆಗಳ ಕಾಲದಿಂದಲೂ ವಿರೋಧಿಸುವವರು ಇದ್ದಾರೆ. ದೇವತೆಗಳಿಗೆ ರಾಕ್ಷಸರು, ಅಸುರ ಶಕ್ತಿಗಳಿದ್ದವು. ಹಾಗೆ ಎಲ್ಲ ಕಾಲದಲ್ಲೂ ಇದು ಇದ್ದದ್ದೆ. ಅದರ ನಿಗ್ರಹಕ್ಕೆ ದೈವೀಶಕ್ತಿ ಇರೋದು ಎಂದು ಶಾಸಕ ಸಿ.ಟಿ.ರವಿ ಹೇಳಿದರು. .ಕಾಂತಾರ’ ಚಿತ್ರ ವಿರೋಧ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂತಾರ’ ತುಳುನಾಡು, ಮಲೆನಾಡಿನ ಭಾಗದ ಜಾನಪದ ದೇವತೆಯ ಸಂಬಂಧಿಸಿದ ಸಂಸ್ಕೃತಿಯ ಹಿನ್ನೆಲೆ ಹೊಂದಿರುವ ಚಿತ್ರವಾಗಿದೆ. ಕಥೆ ಹಿನ್ನೆಲೆ, ನಟ ರಿಷಬ್ ಶೆಟ್ಟಿ ಅವರು ಆ ಪಾತ್ರಕ್ಕೆ ಜೀವ-ಭಾವ ತುಂಬಿ ಅಭಿನಯಿಸಿರುವುದು ಹಾಗೂ ಸಹಜವಾಗಿ ನಮಗಿರುವ ನಂಬಿಕೆ ಕಾರಣಕ್ಕೂ ಕೂಡ ಚಿತ್ರ ಜನಾಕರ್ಷಣೆ ಮಾಡಿದೆ. ಈ ಮೂಲಕ ದೇವರ ಮೇಲಿನ ಶ್ರದ್ಧೆ , ಭಕ್ತಿ ಭಾವವನ್ನು ಗಟ್ಟಿಗೊಳಿಸಿದೆ ಎಂದರು.
ತೆಲುಗಿನಲ್ಲಿ ಕಾಂತಾರ ವೀಕ್ಷಿಸಿದ ಪೂಜೆ ಹೆಗ್ಡೆ ಸಿನಿಮಾ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಹಾಕಿದ್ದಾರೆ. 'ನಿಮಗೆ ತಿಳಿದಿದ್ದನ್ನು ಬರೆಯಿರಿ. ನಿಮ್ಮ ಹತ್ತಿರದ ಹೃದಯಕ್ಕೆ ಹೃಯದಿಂದ ಕಥೆ ಹೇಳಿ. ಚಿತ್ರದ ಕೊನೆಯ ಇಪ್ಪತ್ತು ನಿಮಿಷಗಳು ನನಗೆ ನಡುಕ ಹುಟ್ಟಿಸಿತು. ನಾನು ದಿಗ್ಭ್ರಮೆಗೊಂಡೆ ಮತ್ತು ಸಂಪೂರ್ಣವಾಗಿ ವಿಸ್ಮಯಗೊಂಡಿದ್ದೇನೆ. ರಿಷಬ್ ಶೆಟ್ಟಿ ಅವರ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ನೋಡಿ ಹೆಮ್ಮೆಯಾಗುತ್ತಿದೆ' ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.