ಅಪ್ಪು ಪುಣ್ಯಸ್ಮರಣೆ: ಅಭಿಮಾನಿಗಳಿಂದ ಬಿರಿಯಾನಿ, ಬಾಡೂಟ ಸೇವೆ

By Kannadaprabha News  |  First Published Oct 30, 2022, 7:42 AM IST
  • ಅಪ್ಪು ಪುಣ್ಯಸ್ಮರಣೆ: ಅಭಿಮಾನಿಗಳಿಂದ ಬಿರಿಯಾನಿ, ಬಾಡೂಟ ಸೇವೆ
  • ಚಾನಲ್‌ ಪಕ್ಕದ ರಸ್ತೆಯಲ್ಲಿ ಪುನೀತ್‌ ಭಾವಚಿತ್ರಕ್ಕೆ ಅಭಿಮಾನಿಗಳಿಂದ ಪುಷ್ಪಾರ್ಚನೆ

ಶಿವಮೊಗ್ಗ (ಅ.30) : ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ನಿಧನರಾಗಿ ಒಂದು ವರ್ಷ ಗತಿಸಿದೆ. ಆದರೂ, ಅವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಅಭಿಮಾನಿಗಳು ಅಪ್ಪುವಿನ ಮೊದಲ ವರ್ಷದ ಪುಣ್ಯಸ್ಮರಣೆಯನ್ನು ಶನಿವಾರ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.

Puneeth Rajkumar: ಮೊದಲ ದಿನವೇ 5.28 ಕೋಟಿ ಗಳಿಸಿದ ಅಪ್ಪು ‘ಗಂಧದ ಗುಡಿ’

Tap to resize

Latest Videos

ಶರಾವತಿ ನಗರದ ಚಾನಲ್‌ ಪಕ್ಕದ ರಸ್ತೆಯಲ್ಲಿ ಅಭಿಮಾನಿಗಳು ಪುನೀತ್‌ ರಾಜ್‌ಕುಮಾರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಸಾರ್ವಜನಿಕರಿಗೆ ಬಿರಿಯಾನಿ, ಬಾಡೂಟ ಹಾಕಿದರು. ಈ ವೇಳೆ ಸಾವಿರಕ್ಕೂ ಹೆಚ್ಚು ಜನ ಬಾಡೂಟ ಸವಿದರು.

ಪುನಿತ್‌ ಪುತ್ಥಳಿಗೆ ಸಹಿ ಸಂಗ್ರಹ:

ಶಿವಮೊಗ್ಗದ ಶರಾವತಿ ನಗರದ ಚಾನಲ್‌ ಪಕ್ಕದ ರಸ್ತೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ಪುನೀತ್‌ ರಾಜ್‌ಕುಮಾರ್‌ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಈ ಜಾಗದಲ್ಲಿ ಪುನೀತ್‌ ರಾಜ್‌ಕುಮಾರ್‌ ಪುನೀತ್‌ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಸಹಿ ಸಂಗ್ರಹ ಅಭಿಯಾನ ನಡೆಸಿದರು. ಈ ವೇಳೆ ಬಡಾವಣೆಯ ಪ್ರಮುಖರಾದ ಬಸವಣ್ಣ, ನವೀನ್‌, ಹನುಮಂತ, ಮೊದಲಾದವರಿದ್ದರು.

ಇನ್ನು, ಸಾಗರ ರಸ್ತೆಯ ಎಪಿಎಂಸಿ ಆಟೋ ಸ್ಟ್ಯಾಂಡ್‌ ಬಳಗದಿಂದ ಅಪ್ಪು ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿತ್ತು. ಪುನೀತ್‌ ರಾಜ್‌ಕುಮಾರ್‌ ಘೋಷಣೆಗಳನ್ನು ಕೂಗಿ, ಅಪ್ಪುವಿಗೆ ನಮನ ಸಲ್ಲಿಸಿದರು. ಅನ್ನ ಸಂತರ್ಪಣೆಯಲ್ಲಿ ಸಾರ್ವಜನಿಕರಿಗೆ ಮೊಸರನ್ನ, ಚಿತ್ರನ್ನ ವಿತರಿಸಲಾಯಿತು. ಜತೆಗೆ ಡ್ರೈವರ್‌ಗಳಿಗೆ ಸಮವಸ್ತ್ರವನ್ನೂ ವಿತರಣೆ ಮಾಡಲಾಯಿತು. ಈ ವೇಳೆ ಆಟೋ ಸ್ಟ್ಯಾಂಡ್‌ ಬಳಗದ ಅಧ್ಯಕ್ಷ ಚಂದ್ರಪ್ಪ, ಪ್ರಮುಖರಾದ ವಾಟಾಳ್‌ ಮುಂಜುನಾಥ್‌, ಲೋಕೇಶ್‌, ನಾಗೇಶ್‌, ಶ್ರೀನಿವಾಸ್‌ ಕುಟ್ಟಿಸೇರಿದಂತೆ ಮೊದಲಾದವರಿದ್ದರು.

ಡಾ.ಪುನೀತ್‌ ರಾಜ್‌ಕುಮಾರ್‌ ಪುಣ್ಯಸ್ಮರಣೆ ಅಂಗವಾಗಿ ನಗರದ ದುರ್ಗಿಗುಡಿ ಕನ್ನಡ ಸಂಘದಿಂದ ಅನ್ನದಾಸೋಹ ನಡೆಸಲಾಯಿತು. ಸಂಘದ ಅಧ್ಯಕ್ಷ ಗಿರೀಶ್‌ ಕುಮಾರ್‌, ಪ್ರಧಾನ ಕಾರ್ಯದರ್ಶಿ ಸ.ನ.ಮೂರ್ತಿ, ಗೌರವ ಕಾರ್ಯದರ್ಶಿ ವಿ.ರಾಜು, ನಿರ್ದೇಶಕರಾದ ಎಂ.ಮನೋಜ್‌ಕುಮಾರ್‌, ಎಸ್‌.ಸಿ. ಸುಧೀರ್‌, ಎಸ್‌.ಡಿ.ಗುರುಮೂರ್ತಿ ಇದ್ದರು.

Puneeth Rajkumar: ಪರಮಾತ್ಮನಿಲ್ಲದ ಒಂದು ವರುಷ: ಅಭಿಮಾನಿಗಳಿಂದ ಅಪ್ಪು ಪುಣ್ಯಸ್ಮರಣೆ

‘ಅಪ್ಪು’ ಪುನರ್ಜನ್ಮೋತ್ಸವ:

ಶಿವಮೊಗ್ಗ ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಶನಿವಾರ ಸಂಜೆ ಸ್ಟೈಲ್‌ ಡ್ಯಾನ್ಸ್‌ ಕ್ರಿವ್‌ ಸಂಸ್ಥೆಯಿಂದ ಅಪ್ಪು ಪುನರ್‌ ಜನ್ಮೋತ್ಸವ ಕಾರ್ಯಕ್ರಮ ಅಂಗವಾಗಿ ಅಪ್ಪು ಹಾಡಿಗೆ ಸಾಮೂಹಿಕ ನೃತ್ಯ ನಡೆಯಿತು.

click me!