
ಈಗ ಆ್ಯಕ್ಷನ್ ಪ್ರಿನ್ಸ್ ಜತೆಗೆ ಹೆಜ್ಜೆ ಹಾಕುವ ಅವಕಾಶಕ್ಕೆ ಪಾತ್ರರಾಗಿದ್ದಾರೆ. ಉದಯ್ ಕೆ ಮೆಹ್ತಾ ನಿರ್ಮಾಣ, ನಂದ ಕಿಶೋರ್ ನಿರ್ದೇಶನದ ಚಿತ್ರ ಇದು.
ಧ್ರುವ ಸರ್ಜಾ 'ದುಬಾರಿ' ಚಿತ್ರಕ್ಕೆ ಆಯ್ಕೆ ಆದ ಪಕ್ಕಾ ಕನ್ನಡತಿ ಈ ಚೆಲುವೆ!
‘ಗ್ಲಾಮರ್ ಜತೆಗೆ ನಟನೆಗೆ ಮಹತ್ವ ಇರುವ ಪಾತ್ರ ನಾಯಕಿಯದ್ದು. ಈಗಾಗಲೇ ಎರಡು ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದ ನಟಿ. ಯಾವುದೇ ಪಾತ್ರ ಕೊಟ್ಟರೂ ನ್ಯಾಯ ಸಲ್ಲಿಸುವ ಪ್ರತಿಭಾವಂತೆ. ಈ ಕಾರಣಕ್ಕೆ ನಮ್ಮ ‘ದುಬಾರಿ’ ಚಿತ್ರಕ್ಕೆ ಶ್ರೀಲೀಲಾ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದೇವೆ. ಧ್ರುವ ಸರ್ಜಾ ಹಾಗೂ ಶ್ರೀಲೀಲಾ ಅವರದ್ದು ತೆರೆ ಮೇಲೆ ಜೋಡಿ’ ಎನ್ನುತ್ತಾರೆ ನಿರ್ಮಾಪಕ ಉದಯ್ ಕೆ ಮೆಹ್ತಾ. ಅಂದಹಾಗೆ ಚಿತ್ರಕ್ಕೆ ಇದೇ ತಿಂಗಳು ಮೂರನೇ ವಾರದಿಂದ ಶೂಟಿಂಗ್ ಆರಂಭವಾಗುತ್ತಿದೆ. ಚಿತ್ರದ ಶೀರ್ಷಿಕೆಗೆ ತಕ್ಕಂತೆ ಅದ್ದೂರಿಯಾಗಿ ಮೇಕಿಂಗ್ ಮಾಡುವುದಕ್ಕೆ ನಂದ ಕಿಶೋರ್ ಮತ್ತು ಅವರ ತಂಡ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ.
ಅಣ್ಣನ ಮನನಿಗೆ ಬೆಳ್ಳಿ ತೊಟ್ಟಿಲ ಜೊತೆ ಮತ್ತೊಂದು ದುಬಾರಿ ಉಡುಗೊರೆ ಕೊಂಡ ಧ್ರುವ!
ಇನ್ನೂ ನಟ ಧ್ರುವ ಕೂಡ ‘ಪೊಗರು’ ಚಿತ್ರ ಶೂಟಿಂಗ್ ಮುಗಿಸಿ, ಆ ಚಿತ್ರವನ್ನು ಬಿಡುಗಡೆ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಹೀಗಾಗಿ ನಂದ ಕಿಶೋರ್ ಹಾಗೂ ಧ್ರುವ ಸರ್ಜಾ ಜೋಡಿ ‘ದುಬಾರಿ’ ಚಿತ್ರವನ್ನು ಶೂಟಿಂಗ್ ಫೀಲ್ಡ್‌ಗೆ ಎಂಟ್ರಿ ಕೊಡಿಸುತ್ತಿದ್ದಾರೆ. ಸದ್ಯಮೊದಲ ಹಂತದಲ್ಲಿ 12 ದಿನ ಕಾಲ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.