Latest Videos

ರೇಣುಕಾಸ್ವಾಮಿ ಪ್ರಕರಣದ ಅರೋಪಿಗಳಿಗೆ ಜೀವಾವಧಿ ಶಿಕ್ಷೆಯಿಂದ ಮರಣದಂಡನೆವರೆಗೂ ಶಿಕ್ಷೆ ಇರುತ್ತದೆ: ಬಿ.ಕೆ ಶಿವರಾಂ

By Vaishnavi ChandrashekarFirst Published Jun 15, 2024, 3:11 PM IST
Highlights

ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ಹೇಳಿಕೆ. 302 ಮತ್ತು 201 IPC ಆಗಲೇ ಬೇಕು..ಯಾಕೆ ಗೊತ್ತಾ......

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿದೆ. 17 ಆರೋಪಿಗಳನ್ನು ಈಗಾಗಲೆ ಪೊಲೀಸರು ಪಟ್ಟಿ ಮಾಡಿ ಸ್ಥಳ ಮಹಜರು ಮಾಡುತ್ತಿದ್ದಾರೆ. ಈಗಾಗಲೆ ಪೊಲೀಸರ ವಶದಲ್ಲಿ 14 ಮಂದಿ ಇದ್ದಾರೆ ಅವರಲ್ಲಿ ಚಿತ್ರನಟ ದರ್ಶನ್ ಹಾಗೂ ಮಾಡಲ್ ಪವಿತ್ರ ಗೌಡ ಕೂಡ ಇದ್ದಾರೆ. ಪವಿತ್ರ ಗೌಡ ಏ1 ಹಾಗೂ ದರ್ಶನ್ ಏ2. ಈ ವಿಚಾರವಾಗಿ ಬಿಕೆ ಶಿವರಾಂ ಮಾತನಾಡಿದ್ದಾರೆ. 

'ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರವಾಗಿ ಮೊದಲು ಪ್ರಥಮ ವರ್ತಮಾನ ವರದಿ ದಾಖಲಾಗುತ್ತದೆ. ಶವಕ್ಕೆ ಪರಿಚಯವೇ ಇಲ್ಲದ ವ್ಯಕ್ತಿ ದೂರು ನೀಡದಾಗ ಅಲ್ಲಿಂದ ತನಿಖೆಗೆ ಚಾಲನೆ ಸಿಗುತ್ತದೆ ಅಲ್ಲದೆ ದೇಹದ ಮೇಲೆ ಗಾಯದ ಗುರುತು ಇದ್ದ ಕಾರಣ ಯಾರೋ ಹೊಡೆದು ತಂದು ಹಾಕಿರಬಹುದು ಎಂಬ ಸಂಶಯದ ಮೇಲೆ ಕೊಲೆ ಪ್ರಕರಣ ಅಂತ ದಾಖಲಾಗುತ್ತದೆ. ನಾನು  FIR ನೋಡಿಲ್ಲ ಆದರೆ ನನ್ನ ಪೊಲೀಸ್‌ ಸೇವಾ ಅವಧಿಯಲ್ಲಿ ಸೆಕ್ಷನ್ 302 IPC ಮತ್ತು 201 IPC ಪ್ರಮುಖವಾಗಿ ಹಾಕಿರುತ್ತಾರೆ, ಹಾಕಿರಲೇ ಬೇಕು ಏಕೆಂದರೆ ಎಲ್ಲೋ ಕೊಲೆ ಮಾಡಿ ಮೃತದೇಹವನ್ನು ತಂದು ಬಿಸಾಡಿ ಸಾಕ್ಷಿಗಳನ್ನು ನಾಶ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗುತ್ತದೆ' ಎಂದು ಖಾಸಗಿ ಯೂಟ್ಯೂನ್‌ ಚಾನೆಲ್‌ನಲ್ಲಿ ಬಿ.ಕೆ ಶಿವರಾಂ ಮಾತನಾಡಿದ್ದಾರೆ.

ಪವಿತ್ರಾ ಗೌಡ ತುಂಬಾ ಕೋಪಿಷ್ಠೆ, ಕೋಪ ಬಂದ್ರೆ ಏನ್ ಮಾಡ್ತಾಳೆ ಅವಳಿಗೂ ಗೊತ್ತಿಲ್ಲ: ಮಾಜಿ ಪತಿ ಸಂಜಯ್ ಹೇಳಿಕೆ ವೈರಲ್

'ಸೆಕ್ಷನ್ 302 IPC ಪ್ರಕಾರ ಇದಕ್ಕೆ ಜೀವಾವಧಿ ಶಿಕ್ಷೆಯಿಂದ ಹಿಡಿದು ಮರಣದಂಡನೆವರೆಗೂ ಶಿಕ್ಷೆ ಇರುತ್ತದೆ ಅದು ಕೇಸ್‌ನ ಗ್ರಾಮಿಟಿ ಮೇಲೆ ಹೋಗುತ್ತದೆ. Disappearing of Evidence ಅಂತ ಏನಿದೆ ಸಾಕ್ಷಿಗಳನ್ನು ನಾಶ ಮಾಡುವುದಕ್ಕೂ ಶಿಕ್ಷೆ ಇರುತ್ತದೆ ಆದರೆ ಕೇಸ್‌ನ ಮೂಲಕ ಏನಿರುತ್ತದೆ 302 ಹೀಗಾಗಿ ಅದಕ್ಕೆ ಏನು ಶಿಕ್ಷೆ ಇರುತ್ತದೆ ಅದೇ ಶಿಕ್ಷೆ ಆಗುತ್ತದೆ. ಈ ವಿಚಾರಣೆ ಸಾಮಾನ್ಯವಾಗಿ ಸೆಷನ್ಸ್  ನ್ಯಾಯಲಯದಲ್ಲಿ ನಡೆಯುವುದು. ಪ್ರಥಮ್ ವರ್ತಮಾನ ವರದಿ ಮೊದಲು ಮ್ಯಾಜಿಸ್ಟ್ರೇಕ್‌ ಕೋರ್ಟ್‌ಗೆ ಹೋಗುತ್ತದೆ ಆಮೇಲೆ ಅದು ಕಮಿಟ್ ಆಗುತ್ತದೆ. ಈ ಕೆಳ ಹಂತದ ಅವಧಿಯಲ್ಲಿ ಅರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗುವುದಿಲ್ಲ ಇದು ದೇಶದ ಪ್ರತಿಷ್ಠಿ ವ್ಯಕ್ತಿ ಆಗಿರಬಹುದು ಯಾರೇ ಆಗಿರಬಹುದು' ಎಂದು ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಹೇಳುತ್ತಾರೆ. 

ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ದರ್ಶನ್ ಎರಡನೇ ಪತ್ನಿ ಪವಿತ್ರಾ ಗೌಡ ಯಾರು

'ಈ ಕೃತ್ಯಯಲ್ಲಿ ಯಾರೆಲ್ಲಾ ಭಾಗಿಯಾಗಿರುತ್ತಾರೆ ಅವರು ಹೀಗೆ ಮಾಡಿದ್ದೀವಿ ಎಂದು ಒಪ್ಪಿಕೊಳ್ಳುವುದಿಲ್ಲ. ಈ ಕೇಸ್‌ನ ತನಿಖೆ ಪೊಲೀಸ್‌ ಇಲಾಖೆಗೆ ಹೆಮ್ಮೆ ತರುವಂತ ಕೆಲಸ ಏಕೆಂದರೆ ಯಾವುದೇ ಆಮಿಷಕ್ಕೆ ಬಲಿ ಬಿದ್ದಿಲ್ಲ ಅನ್ನೋದು ಸ್ಪಷ್ಟವಾಗಿದೆ. ಟೆಕ್ನಿಕಲ್‌ ಏವಿಡೆನ್ಸ್‌ಗಳಿಂದ ತನಿಖೆ ಮುಂದುವರೆಯುತ್ತದೆ ಇದರಲ್ಲಿ ಸಿಸಿವಿಟಿ,ಮೊಬೈಲ್ ಕವರೇಜ್‌ ಪ್ರತಿಯೊಂದು ಗೊತ್ತಾಗುತ್ತದೆ ಆಮೇಲೆ ಅಲ್ಲಿಂದ ಮತ್ತೊಂದು ಪೊಲೀಸ್‌ ಠಾಣೆಗೆ ಹೋಗುತ್ತದೆ. ಕಾಮಾಕ್ಷಿ ಪಾಳ್ಯ ಠಾಣೆಯಿಂದ ರಾಜ ರಾಜೇಶ್ವರಿ ನಗರ ಠಾಣೆ ಸೇರುತ್ತದೆ ಅಲ್ಲಿಂದ ಚಿತ್ರದುರ್ಗ ಠಾಣೆವರೆಗೂ ವಿಚಾರಣೆ ನಡೆಯುತ್ತದೆ. ಯಾರು ಒಬ್ಬ ಆರೋಪಿ ಚಿತ್ರನಟ ದರ್ಶನ್ ಪರವಾಗಿ ಧ್ವನಿ ಎತ್ತುತ್ತಿದ್ದಾರೆ ಅವರು ಮನಸ್ಸಿನ ಒಳಗೆ ಕೊಳೆತು ನಾರುತ್ತಿದ್ದಾರೆ ಅವರು ಮಾನಸಿಕವಾಗಿ ಗುಲಾಮಿತನಕ್ಕೆ ಬಲಿಯಾಗಿದ್ದಾರೆ' ಎಂದು ಶಿವರಾಂ ಹೇಳಿದ್ದಾರೆ. 

click me!