ಪವಿತ್ರಾ ಗೌಡ ಇದೇ ಸೆಕ್ಷನ್ ಅಡಿ ಬೇಲ್ ನೀಡಿ ಅಂತ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ದರ್ಶನ್ ಮಾತ್ರ ಚಾರ್ಜ್ ಶೀಟ್ ಸಲ್ಲಿಸೋ ವರೆಗೂ ಜಾಮೀನು ಪಡೆಯೋ ಬಗ್ಗೆ ಯೋಚ್ನೇ ಮಾಡ್ತಿಲ್ಲ. ನಟ ದರ್ಶನ್ ಜೈಲು ಪಾಲಾಗಿ ಬರೋಬ್ಬರಿ 60 ದಿನ ಕಳೆಯುತ್ತಿದೆ.
ಹೊಟ್ಟೆ ತುಂಬಾ ರುಚಿ ರುಚಿಯಾದ ಮನೆ ಊಟ. ಗಡದ್ ನಿದ್ದೆ, ಜಿಮ್ನಲ್ಲಿ ದೇಹ ದಂಡನೆ, ಪಾರ್ಟಿ, ಟ್ರೀಪ್ ಇದೆಲ್ಲಾ ದರ್ಶನ್ ಲೈಫ್ ಸ್ಟೈಟ್ನ ಒಂದು ಭಾಗ ಆಗಿದ್ವು. ಆದ್ರೆ ಅದೆಲ್ಲಾ ಕಣ್ಮರೆ ಆಗಿ 60 ದಿನ ಆಗ್ತಾ ಬಂತು. ಮನೆ ಊಟ ಬೇಕೇ ಬೇಕು ಅಂತ ಕೋರ್ಟ್ ಮೆಟ್ಟಿಲೇರಿರೋ ದಾಸನಿಗೆ ನಿರಾಸೆ ಮೇಲೆ ನಿರಾಸೆ. ಹಾಗಾದ್ರೆ ದಚ್ಚು ಮನೆ ಊಟದ ಕಥೆ ಏನಾಯ್ತು.? ದರ್ಶನ್ ಕೇಸ್ನಲ್ಲಿ ಹೊಸ ಅಪ್ಡೇಟ್ ಏನಿದೆ ಅಂತ ನೋಡೋಣ ಈ ಎಕ್ಸ್ಕ್ಲ್ಯೂಸೀವ್ ಸ್ಟೋರಿಯಲ್ಲಿ. ದರ್ಶನ್ಗೆ ಮನೆ ಊಟದ ಹಾಹಾಕಾರ ಶುರುವಾಗಿ ತಿಂಗಳುಗಳೇ ಕಳೆದಿವೆ. ಮನೆ ಊಟ, ಹಾಸಿಗೆ ಬಟ್ಟೆ ಕೊಡಿ ಪ್ಲೀಸ್ ಅಂತ ಕೋರ್ಟ್ ಮೆಟ್ಟಿಲೇರಿರೋ ದಾಸನಿಗೆ ಮತ್ತೆ ಮತ್ತೆ ನಿರಾಸೆ ಆಗ್ತಿದೆ.
ಇಂದು ದಚ್ಚು ಮನೆ ಊಟದ ಅರ್ಜಿ ವಿಚಾರಣೆ ಮಾಡಿರೋ ಕೋರ್ಟ್ ಸೆಪ್ಟೆಂಬರ್ 5ಕ್ಕೆ ವಿಚಾರಣೆ ಮುಂದೂಡಿದೆ. ಇದು ದರ್ಶನ್ ಮನೆ ಊಟದ ಆಸೆಗೆ ಮತ್ತೆ ತಣ್ಣೀರು ಬಿದ್ದಿದೆ. ಜುಲೈ 31 ರಂದು ದರ್ಶನ್ ಕೋರಿದ್ದ ಮನೆ ಊಟದ ಅರ್ಜಿ ವಿಚಾರಣೆ ಮಾಡಿದ್ದ ಕೋರ್ಟ್, ಈ ಸಂಬಂಧ ಜೈಲು ಅಧಿಕಾರಿಗಳಿಗೆ ವರಧಿ ನೀಡುವಂತೆ ಕೇಳಿತ್ತು. ಆಗಸ್ಟ್ 14 ರಂದು ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ದರ್ಶನ್ ಅರ್ಜಿ ತಿರಸ್ಕರಿಸಿದ್ರು. ದರ್ಶನ್ ಜೈಲು ಊಟ ವಿಷಕಾರಿ ಅಥವಾ ಪ್ರೋಟಿನ್ ಯುಕ್ತವಾಗಿಲ್ಲ ಎಂದು ಉಲ್ಲೇಖಿಸಿಲ್ಲ. ಜೊತೆಗೆ ದರ್ಶನ್ಗೆ ಹೊರಗಿನ ಊಟ ನೀಡುವಂತಹ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರ ವರದಿ ಕೊಟ್ಟಿದ್ದಾರೆ.
ದರ್ಶನ್ಗೆ ಮೊಟ್ಟೆ, ಬ್ರೆಡ್, ಹಾಲು, ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ3 ಮಾತ್ರೆಗಳನ್ನ ನೀಡಲಾಗಿದೆ. ಇಷ್ಟೆಲ್ಲಾ ವ್ಯವಸ್ಥೆ ಮಾಡಿರೋದ್ರಿಂದ ಮನೆಯೂಟದ ಅವಶ್ಯಕತೆ ಇರುವುದಿಲ್ಲ ಎಂದು ಕಾರಾಗೃಹ ಇಲಾಖೆ ಮುಖ್ಯಸ್ತೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ವರಧಿ ಸಲ್ಲಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನ ಎ1 ಆರೋಪಿ ಪವಿತ್ರಾ ಗೌಡಗೆ ಜೈಲು ವಾಸ ಸಾಕಾಗಿದೆ. ಪೊಲೀಸರು ಇನ್ನೂ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಅಲ್ಲಿ ವರೆಗೂ ಕಾಯೋಕೂ ಕಷ್ಟ ಪಡುತ್ತಿರೋ ಪವಿತ್ರಾ ಗೌಡ ದರ್ಶನ್ಗಿಂತ ಮೊದಲೇ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಾಮಾನ್ಯವಾಗಿ ಕಾನೂನಿನಲ್ಲಿ ಮಹಿಳೆಯರಿಗೆ ಸ್ಪೆಷಲ್ ಕನ್ಸೆಷನ್ ಇದೆ, CRPC ಸೆಕ್ಷನ್ 437 ಪ್ರಕಾರ ಸಿರಿಯಸ್ ಅಪೆನ್ಸ್ ಇದ್ದರು ಜಾಮೀನು ನೀಡಲು ಅವಕಾಶವಿದೆ.
ಇದು ಕೊಲೆ ಆರೋಪಿ ದರ್ಶನ್ ಕೈ ಕಡಗದ ರಹಸ್ಯ: ನಾಲ್ಕು ದಶಕದಿಂದ ಕೈಯಿಂದ ಕಳಚಿರಲಿಲ್ಲ ಈ ಕಡಗ!
ಪವಿತ್ರಾ ಗೌಡ ಇದೇ ಸೆಕ್ಷನ್ ಅಡಿ ಬೇಲ್ ನೀಡಿ ಅಂತ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ದರ್ಶನ್ ಮಾತ್ರ ಚಾರ್ಜ್ ಶೀಟ್ ಸಲ್ಲಿಸೋ ವರೆಗೂ ಜಾಮೀನು ಪಡೆಯೋ ಬಗ್ಗೆ ಯೋಚ್ನೇ ಮಾಡ್ತಿಲ್ಲ. ನಟ ದರ್ಶನ್ ಜೈಲು ಪಾಲಾಗಿ ಬರೋಬ್ಬರಿ 60 ದಿನ ಕಳೆಯುತ್ತಿದೆ. ದರ್ಶನ್ಗೆ ಕಾನೂನು ಕುಣಿಕೆ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ. ಪ್ರಕರಣದಲ್ಲಿ ಒಂದ್ಕಿಂತ ಒಂದು ಸಾಕ್ಷಿಗಳು ಸ್ಟ್ರಾಂಗ್ ಆಗ್ತಿವೆ. ಎಷ್ಟೇ ಹೆಸರು, ಎಷ್ಟೆ ಹಣ ಮಾಡಿದ್ರು ಏನು ಮಾಡದ ಪರಿಸ್ಥಿತಿ ದಾಸನದ್ದು, ದರ್ಶನ್ ಕೃತ್ಯದಲ್ಲಿ ಭಾಗಿಯಾಗಿರೋದನ್ನ ಸಾಭೀತುಪಡಿಸುವಂತಹ ಎವಿಡೆನ್ಸ್ ಗಳಿವೆಯಂತೆ. ಎಫ್ ಎಸ್ ಎಲ್ ವರದಿಗಳಲ್ಲಿ 70% ಮ್ಯಾಚ್ ಆಗಿವೆ. ಕೆಲವೇ ದಿನದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದ್ದು, ಆಗ ಬೇಲ್ಗೆ ದರ್ಶನ್ ಅರ್ಜಿ ಸಲ್ಲಿಸಿದ್ರೂ ಬೇಲ್ ಸಿಗೋದು ಡೌಟ್ ಎನ್ನಲಾಗ್ತಿದೆ. ಹೀಗಾಗಿ ದಾಸನ ಜೈಲು ವಾಸ ಇನ್ನೆಷ್ಟು ದಿನ.? ಆ ರೇಣುಕಾ ಸ್ವಾಮಿಗೇ ಗೊತ್ತು.