ರಶ್ಮಿಕಾ ಮಂದಣ್ಣ ಡಯಟ್ ಸೀಕ್ರೆಟ್ ಬಯಲಾಯ್ತು, ನಟಿ ಏನೇನೆಲ್ಲ ತಿಂತಾರೆ ನೋಡಿ!

By Shriram Bhat  |  First Published Aug 21, 2024, 12:10 PM IST

ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಯಾರಿಗೂ ಹೆಚ್ಚೇನೂ ಹೇಳಬೇಕಿಲ್ಲ. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಅವರು ಬಳಿಕ ಗೀತ ಗೋವಿಂದಂ ತೆಲುಗು ಚಿತ್ರದ ಮೂಲಕ ಟಾಲಿವುಡ್ ಸಿನಿಉದ್ಯಮದಲ್ಲಿ ಫೇಮಸ್ ಆದರು. ಆ ಬಳಿಕ..


ನಟಿ ರಶ್ಮಿಕಾ (Rashmika Mandanna) 'ನನ್ನ ಫೇವರೆಟ್ ಫುಡ್ ಅಂದ್ರೆ ಅದು ಅವಕಾಡೋ ತೋಸ್ಟ್. ಆದರೆ ನನ್ನ ಡಯಟೀಶಿಯನ್ ಅದನ್ನು ನಾನು ತಿನ್ನಲು ಬಿಡುವುದಿಲ್ಲ. ನಾನು ಸೌತ್ ಇಂಡಿಯನ್ ಊಟ ಮಾಡುವ ಅಭ್ಯಾಸ ಇರುವವಳು. ಆದರೆ ನಾನು ಹೆಚ್ಚು ರೈಸ್ ತಿನ್ನೋದಿಲ್ಲ. ಬಟ್, ಅದೂ ಇದೂ ಎಲ್ಲವನ್ನೂ ಸೇರಿಸಿಕೊಂಡು ಕರಿ ಮಾಡಿ ತಿನ್ನುವ ಅಭ್ಯಾಸ ಇದೆ ನನಗೆ. ನಾನು ಹೆಚ್ಚು ವೆಜಿಟೆಬಲ್ಸ್‌ ತಿನ್ನುವ ಅಭ್ಯಾಸ ಕೂಡ ಮಾಡಿಕೊಂಡಿದ್ದೇನೆ. ಜೊತೆಗೆ, ನಾನು ಎಲ್ಲವನ್ನೂ ಟೇಸ್ಟ್ ಮಾಡುತ್ತೇನೆ' ಎಂದಿದ್ದಾರೆ.

ಹೀಗೆ ತಮ್ಮ ಆಹಾರ ಪದ್ಧತಿ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ. ರಶ್ಮಿಕಾ ಅವರು ಆಗಾಗ ಕೆಲವು ಸಂದರ್ಶನಗಳು ಹಾಗೂ ಟಾಕ್‌ಗಳ ಮೂಲಕ ತಮ್ಮ ಆಹಾರ, ಹವ್ಯಾಸಗಳು ಹಾಗೂ ಟೇಸ್ಟ್‌ಗಳ ಬಗ್ಗೆ ಮಾತನಾಡುತ್ತಾರೆ. ಅವರು ಆಡಿರುವ ಮಾತುಗಳನ್ನು ರೀಲ್ಸ್ ಮೂಲಕವೋ ಅಥವಾ ಸಣ್ಣ ವಿಡಿಯೋ ಕ್ಲಿಪ್ಪಿಂಗ್ಸ್ ಮೂಲಕವೋ ಜಗತ್ತಿಗೆ ರೀಚ್ ಆಗುವಂತೆ ಸೋಷಿಯಲ್ ಮೀಡಿಯಾ ಮೂಲಕ ಹರಿಬಿಡುತ್ತಾರೆ. ಅದನ್ನು ನೋಡಿ ಹಲವರು ಮೆಚ್ಚಿಕೊಂಡು ಕಾಮೆಂಟ್ ಮಾಡುತ್ತಾರೆ. 

Tap to resize

Latest Videos

undefined

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಶೂಟಿಂಗ್ ಸೆಟ್‌ಗೆ ರಾಕಿಂಗ್ ಸ್ಟಾರ್ ಯಶ್ ಸರ್‌ಪ್ರೈಸ್ ಭೇಟಿ..!

ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಯಾರಿಗೂ ಹೆಚ್ಚೇನೂ ಹೇಳಬೇಕಿಲ್ಲ. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಅವರು ಬಳಿಕ ಗೀತ ಗೋವಿಂದಂ ತೆಲುಗು ಚಿತ್ರದ ಮೂಲಕ ಟಾಲಿವುಡ್ ಸಿನಿಉದ್ಯಮದಲ್ಲಿ ಫೇಮಸ್ ಆದರು. ಆ ಬಳಿಕ ನಟಿ ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು ಸೇರಿದಂತೆ ತಮಿಳು, ಮಲಯಾಳಂ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾದರು. ರಶ್ಮಿಕಾ ಮಂದಣ್ಣ ನಟನೆಯ ಪುಷ್ಪಾ ಚಿತ್ರ ಅವರಿಗೆ ಬಹಳಷ್ಟು ಜನಪ್ರಿಯತೆ ತಂದುಕೊಟ್ಟಿದೆ. 

ಈಗಂತೂ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ಹಿರಿಯ ನಟ ಸಲ್ಮಾನ್ ಖಾನ್ ಜತೆಗೆ ನಟಿಸುತ್ತಿದ್ದಾರೆ. ಈ ಮೊದಲು ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಜೋಡಿಯಾಗಿ 'ಆನಿಮಲ್' ಚಿತ್ರದಲ್ಲಿ ನಟಿಸಿದ್ದರು ರಶ್ಮಿಕಾ ಮಂದಣ್ಣ. ಆ ಚಿತ್ರವು ಸೂಪರ್ ಹಿಟ್ ಆಗುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿರಂಗದಲ್ಲಿ ಕೂಡ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡರು. 

ಹೃದಯಗೀತೆ ಚಿತ್ರ ಶುರುವಾಗಿದ್ದು ಯಾಕೆ, ನಟ ವಿಷ್ಣುವರ್ಧನ್ ಸ್ವೀಕರಿಸಿದ್ದ ಚಾಲೆಂಜ್ ಎಂಥದ್ದು?

ಈಗಂತೂ ಯಾವುದೇ ಭಾಷೆಯ ಸ್ಟಾರ್ ನಟರ ಚಿತ್ರವಿರಲಿ, ಮೊದಲು ಕೇಳಿ ಬರುವುದು ರಶ್ಮಿಕಾ ಹೆಸರು. ಆದರೆ, ಎಲ್ಲಾ ಚಿತ್ರಗಳಿಗೆ ಅವರೊಬ್ಬರೇ ಕಾಲ್‌ಶೀಟ್ ಕೊಡಲು ಸಾಧ್ಯವಿಲ್ಲ. ಹೀಗಾಗಿ ಅವರ ಡೇಟ್ಸ್‌ಗೆ ಕಾದು ಕೆಲವರು ಕಾಲ್‌ಶೀಟ್ ಪಡೆದುಕೊಂಡರೆ, ಹಲವರು ಬೇರೆ ನಟಿಯರನ್ನು ತಮ್ಮ ಚಿತ್ರಗಳಿಗೆ ನಾಯಕಿಯನ್ನರಾಗಿ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ, ಕನ್ನಡದ ಕವರಿಯೊಬ್ಬರು ನ್ಯಾಷನಲ್ ಸ್ಟಾರ್ ಪಟ್ಟದಲ್ಲಿ ಮೆರೆಯುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯೇ ಸರಿ!

click me!