
ಹೀಗೆಂದು ಸ್ಯಾಂಡಲ್‌ವುಡ್ ಮಂದಿಯನ್ನು ಯರ್ರಾಬಿರ್ರಿ ತರಾಟೆಗೆ ತೆಗೆದುಕೊಂಡವರು ಮಾಜಿ ಬಿಗ್‌ಬಾಸ್ ನಟಿ ಸೋನು ಪಾಟೀಲ್. ‘ಯರ್ರಾಬಿರ್ರಿ’ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಅಪ್ಪಟ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡಿದ ಸೋನು, ‘ನಮ್ಮ ಭಾಷೆ ಒರಟಾಗಿರಬಹುದು, ಆದರೆ ಮನಸ್ಸು ಬೆಣ್ಣೆಯಂತೆ ಮೃದು’ ಎಂದರು. ‘ಟಿಆರ್‌ಪಿಗೋಸ್ಕರ ಮಾತ್ರ ಉತ್ತರ ಕರ್ನಾಟಕಕ್ಕೆ ಬರಬೇಡಿ. ಇಲ್ಲಿನ ಪ್ರತಿಭೆಗಳು ಬೆಳೆಯೋದಕ್ಕೂ ಅವಕಾಶ ಕೊಡಿ’ ಎಂದೂ ಹೇಳಿದರು.
ನಾಯಕ ಅಂಜನ್ ಮಾತನಾಡಿ, ‘ಧಾರವಾಡ ಕುಂದಗೋಳದ ರೈತ ಕುಟುಂಬದಿಂದ ಬಂದವನು ನಾನು. ಇವತ್ತಿಗೂ ಗುಡಿಸಲಲ್ಲೇ ವಾಸ. ಈ ಹಿಂದೆ ಶಾರ್ಟ್ ಫಿಲ್ಮಂ ಮಾಡಿದ್ದೆ. ಅದಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂತು. ಯರ್ರಾಬಿರ್ರಿ ಪಕ್ಕಾ ಮಾಸ್ ಎಂಟರ್‌ಟೈನರ್. ಹೊಡೆದಾಟದ ಜೊತೆಗೆ ಮೆಸೇಜೂ ಇದೆ’ ಎಂದರು.
ಉತ್ತರ ಕರ್ನಾಟಕದ ಖಡಕ್ ಮಿರ್ಚಿ ಸೋನು ಪಾಟೀಲ್ ಬಿಚ್ಚಿಟ್ರು ಬಿಗ್‌ಬಾಸ್ ಅನುಭವ
ನಿರ್ದೇಶಕ ಗೋವಿಂದ ದಾಸರ್ ಅವರಿಗಿದು ಮೊದಲ ಸಿನಿಮಾ. ಸಂಕಲನದ ಜವಾಬ್ದಾರಿಯೂ ಇವರದೇ. ಹೆಚ್‌ಜಿ ದಾಸ್ ಚಿತ್ರ ನಿರ್ಮಿಸಿದ್ದಾರೆ. ತಾಯಿ, ಸ್ನೇಹಿತರು ಹಾಗೂ ಪ್ರೇಯಸಿಗಾಗಿ ನಾಯಕ ಹೇಗೆ ಅಡೆತಡೆಗಳನ್ನು ಎದುರಿಸಿ ಹೋರಾಡುತ್ತಾನೆ ಎಂಬುದು ಕಥೆ. ಧಾರವಾಡ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಆನಂದ್, ಶಿಲ್ಪಾ ಶೈಲೇಶ್ ಮತ್ತಿತರರು ನಟಿಸಿದ್ದಾರೆ. ಹರೀಶ್ ಜಿಂಧೆ ಸಿನಿಮಟೋಗ್ರಫಿ, ರಾಘವ ಮಹರ್ಷಿ ಸಂಭಾಷಣೆ ಚಿತ್ರಕ್ಕಿದೆ. ಶಿವು ಭೈರಗಿ ಸಂಗೀತ ಸಂಯೋಜಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.