ವಿಷ್ಣುವರ್ಧನ್-ಸುಹಾಸಿನಿ ಜೋಡಿ 'ಬಂಧನ' ಚಿತ್ರದಲ್ಲಿ ಆರತಿ, ಅಂಬರೀಷ್ ನಟಿಸಿಲ್ಲ ಯಾಕೆ?

Published : Aug 28, 2024, 06:22 PM ISTUpdated : Aug 28, 2024, 07:07 PM IST
ವಿಷ್ಣುವರ್ಧನ್-ಸುಹಾಸಿನಿ ಜೋಡಿ 'ಬಂಧನ' ಚಿತ್ರದಲ್ಲಿ ಆರತಿ, ಅಂಬರೀಷ್ ನಟಿಸಿಲ್ಲ ಯಾಕೆ?

ಸಾರಾಂಶ

ಬಂಧನ ಬಿಡುಗಡೆಯಾಗಿ ಸೂಪರ್ ಹಿಟ್ ದಾಖಲಿಸಿತು. ವಿಷ್ಣುವರ್ಧನ್-ಸಹಾಸಿನಿ ಜೋಡಿಯ ಅಮೋಘ ಅಭಿನಯಕ್ಕೆ, ಜೈಜಗದೀಶ್ ಪಾತ್ರ ಪೋಷಣೆಗೆ ಬೆರಗಾಗದವರೇ ಇಲ್ಲ. ಆದರೆ, ಜೈಜಗದೀಶ್ ಮಾಡಿದ್ದ ಪಾತ್ರವನ್ನು ನಟ ಅಂಬರೀಷ್ ಮಾಡದೇ ಇದ್ದಿದ್ದು ಒಳ್ಳೆಯದಾಯ್ತು..

ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು 'ಬಂಧನ'. ಡಾ ವಿಷ್ಣುವರ್ಧನ್ (Vishnuvardhan) ಅಭಿನಯದ ಬಂಧನ (Bandhana) ಚಿತ್ರವು ನಟ ವಿಷ್ಣು ಅವರ ವೃತ್ತಿ ಜೀವನದಲ್ಲಿ ಹೊಸ ಮೇಲಿಗಲ್ಲು ಸ್ಥಾಪಿಸಿದ ಸಿನಿಮಾ. ಏಕೆಂದರೆ, ನಾಗರಹಾವು ಸೇರಿದಂತೆ ಅಲ್ಲಯವರೆಗೂ ಆಂಗ್ರಿ ಯಂಗ್‌ಮ್ಯಾನ್ ಲುಕ್‌ನಲ್ಲೆ ನಟಿಸಿ ಕನ್ನಡ ಸಿನಿಪ್ರೇಕ್ಷಕರ ಮನಸ್ಸು ಗೆದ್ದಿದ್ದ ನಟ ವಿಷ್ಣುವರ್ಧನ್ ಅವರು, ಬಂಧನ ಚಿತ್ರದ ಮೂಲಕ ಅದೇ ಮೊದಲ ಬಾರಿಗೆ ಭಾವನಾತ್ಮಕ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. 

ಬಂಧನ ಚಿತ್ರದಲ್ಲಿ ನಟ ವಿಷ್ಣುವರ್ಧನ್ ಅವರಿಗೆ ಜೋಡಿಯಾಗಿ ನಟಿಸಿದ್ದು ಸುಹಾಸಿನಿ (Suhasini) ಎಂಬುದು ಎಲ್ಲರಿಗೂ ಗೊತ್ತು. ಆದರೆ, ಬಂಧನ ಚಿತ್ರದ ನಿರ್ದೇಶಕರಾಗಿರುವ ಡಾ ರಾಜೇಂದ್ರಸಿಂಗ್ ಬಾಬು ಅವರು ಸುಹಾಸಿನಿ ಅವರಿಗಿಂತ ಮೊದಲು ನಟಿ ಆರತಿ ಕಾಲ್‌ಶೀಟ್‌ಗೆ ಕಾದಿದ್ದರು. ಆದರೆ ಅಂದು ಬಹಳಷ್ಟು ಬ್ಯುಸಿ ಇದ್ದ ಆರತಿ (Aarathi) ಅವರು ಬಂಧನ ಚಿತ್ರಕ್ಕೆ ಡೆಟ್ಸ್‌ ಕೊಡಲು ಸಾಧ್ಯವಾಗಲೇ ಇಲ್ಲ ಎನ್ನಲಾಗಿದೆ. 

ಅಣ್ಣಾವ್ರು 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಹಣವನ್ನು ಮನೆಗೆ ತೆಗೆದುಕೊಂಡು ಹೋಗ್ಲೇ ಇಲ್ಲ!

ವಿಜಯಲಕ್ಷ್ಮಿ ಸಿಂಗ್ ಅವರು ಬಳಿಕ ಸುಹಾಸಿನಿ ಅವರನ್ನು ರಾಜೇಂದ್ರ ಸಿಂಗ್ ಬಾಬು ಅವರಿಗೆ ಪರಿಚಯಿಸಿದರು ಎನ್ನಲಾಗಿದೆ. ಹೀಗೆ ನಟಿ ಸುಹಾಸಿನಿ ಅವರು ಆರತಿ ಮಾಡಬೇಕಿದ್ದ ಪಾತ್ರಕ್ಕೆ ಬಂದರು. ಹಾಗೇ, ನಟ ಜೈಜಗದೀಶ್ ಮಾಡಿದ್ದ ವಿನಲ್ ರೋಲ್‌ಗೆ ಕೂಡ ನಟ ಅಂಬರೀಷ್(Ambareesh) ಮೊದಲ ಆಯ್ಕೆ ಆಗಿದ್ದರು. ಆದರೆ, ವಿಷ್ಣುವರ್ಧನ್ ಎದುರು ಖಳನಾಯಕನಾಗಿ ನಟಿಸಲು ನಟ ಅಂಬರೀಷ್ ಒಪ್ಪಲಿಲ್ಲ. ಬಳಿಕ, ಆ ಜಾಗಕ್ಕೆ ಜೈಜಗದೀಶ್ ಬಂದರು ಎನ್ನಲಾಗಿದೆ. 

ಬಂಧನ ಬಿಡುಗಡೆಯಾಗಿ ಸೂಪರ್ ಹಿಟ್ ದಾಖಲಿಸಿತು. ವಿಷ್ಣುವರ್ಧನ್-ಸಹಾಸಿನಿ ಜೋಡಿಯ ಅಮೋಘ ಅಭಿನಯಕ್ಕೆ, ಜೈಜಗದೀಶ್ ಪಾತ್ರ ಪೋಷಣೆಗೆ ಬೆರಗಾಗದವರೇ ಇಲ್ಲ. ಆದರೆ, ಜೈಜಗದೀಶ್ ಮಾಡಿದ್ದ ಪಾತ್ರವನ್ನು ನಟ ಅಂಬರೀಷ್ ಮಾಡದೇ ಇದ್ದಿದ್ದು ಒಳ್ಳೆಯದಾಯ್ತು ಎಂದೇ ಅಂದು ಎಲ್ಲರೂ ಮಾತನಾಡಿಕೊಂಡಿದ್ದರು ಎನ್ನಲಾಗಿದೆ. ಕಾರಣ, ಅಷ್ಟೊತ್ತಿಗಾಗಲೇ ನಟರಾದ ಅಂಬರೀಷ್ ಹಾಗು ವಿಷ್ಣುವರ್ಧನ್ ಆತ್ಮೀಯ ಸ್ನೇಹಿತರಾಗಿದ್ದರು.

'ಭೈರತಿ ರಣಗಲ್' ಶಿವಣ್ಣ ಭೇಟಿಯಾದ ಟಾಲಿವುಡ್ ನಟ ನಾನಿ; ಸ್ಟಾರ್ಸ್ ಫ್ಯಾನ್ಸ್‌ಗಳಲ್ಲಿ ಕುತೂಹಲ! 

ಸಿನಿಮಾದಲ್ಲಿ ಕೂಡ ಅಂಬರೀಷ್ ಹಾಗು ವಿಷ್ಣುವರ್ಧನ್ ಜೋಡಿ ಹೀರೋ-ವಿಲನ್ ಆಗಿ ಅಭಿನಯಿಸಿದ್ರೆ ಖಮಡಿತ ಪ್ರೇಕ್ಷಕರು ಇಷ್ಟಪಡುತ್ತಿರಲಿಲ್ಲ. ಅಂದು ಅಂತಹ ಮನೋಭಾವನೆ ಸಿನಿಪ್ರೇಕ್ಷಕರಲ್ಲಿ ಇತ್ತು. ಈಗಲೂ ಕೂಡ ಅದು ಹೆಚ್ಚೇನೂ ಬದಲಾಗಿಲ್ಲ ಎನ್ನಬಹುದು. ಒಟ್ಟಿನಲ್ಲಿ, ತಮ್ಮ ಪ್ರೀತಿಯ ಸ್ನೇಹಿತ ವಿಷ್ಣು ಎದುರು ವಿಲನ್ ಆಗಿ ನಟಿಸಲೂ ಕೂಡ ಅಂಬಿ ಕೊನೆಗೂ ಒಪ್ಪಲಿಲ್ಲ. ಸಾಯುವವರೆಗೂ ಅವರಿಬ್ಬರೂ ಆತ್ಮೀಯ ಸ್ನೇಹಿತರಾಗಿಯೇ ಇದ್ದರು ಎಂಬುದು ಗಮನಾರ್ಹ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ