ಅಣ್ಣಾವ್ರು 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಹಣವನ್ನು ಮನೆಗೆ ತೆಗೆದುಕೊಂಡು ಹೋಗ್ಲೇ ಇಲ್ಲ!

By Shriram Bhat  |  First Published Aug 28, 2024, 4:39 PM IST

ದಾದಾಸಾಹೇಬ್ ಪ್ರಶಸ್ತಿ ಪಡೆದ ಏಕೈಕ ಕನ್ನಡಿಗ ನಟ ಡಾ ರಾಜ್‌ಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ. ಆದರೆ, ಅವರ ಸವಿನೆನಪು ಸದಾ ಕನ್ನಡನಾಡಿನ ಸಿನಿಪ್ರೇಕ್ಷಕರು ಸೇರಿದಂತೆ ಎಲ್ಲರ ಹೃದಯದಲ್ಲಿ ರಾರಾಜಿಸುತ್ತಲೇ ಇರುತ್ತದೆ. ಸಿನಿಮಾರಂಗದ ಉತ್ಯುನ್ನತ..


ಭಾರತೀಯ ಸಿನಿರಂಗದಲ್ಲಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (The Dadasaheb Phalke Award) ಕೂಡ ಒಂದು. ಈ ಪ್ರಶಸ್ತಿ ಪಡೆಯಬೇಕು ಎಂಬುದು ಸಿನಿರಂಗದಲ್ಲಿ ಕಲಾವಿದರಾಗಿರುವ ಎಲ್ಲರ ಕನಸು ಎಂದೂ ಹೇಳಬಹುದು. ಇದನ್ನು ಸಿನಿಮಾರಂಗದ ಅತ್ಯುನ್ನತ ಸನ್ಮಾನ ಎಂದೂ ಕೂಡ ಕರೆಯಯಾಗುವುದು. ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಅವರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ. 

1995ರಲ್ಲಿ 43ನೆಯ ಪ್ರಶಸ್ತಿ ವಿಜೇತರಾಗಿ ಡಾ ರಾಜ್‌ಕುಮಾರ್ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಪ್ರಶಸ್ತಿಯ ನಗದು ಮೊತ್ತ 1,00,00/- (ಒಂದು ಲಕ್ಷ ರೂಪಾಯಿ) ಆಗಿದೆ. ಈ ಪ್ರಶಸ್ತಿಯನ್ನು ಪಡೆದಿರುವ ಕನ್ನಡದ ಏಕೈಕ ನಟ ಡಾ ರಾಜ್‌ಕುಮಾರ್. ಹಾಗಿದ್ದರೆ, ಈ ಪ್ರಶಸ್ತಿಯ ಹಣವನ್ನು ಡಾ ರಾಜ್‌ಕುಮಾರ್ ಅವರು ಏನು ಮಾಡಿದ್ದಾರೆ? ಯಾವ ಕೆಲಸಕ್ಕೆ ಅದನ್ನು ಬಳಸಿದ್ದಾರೆ ಗೊತ್ತೇ?

Tap to resize

Latest Videos

'ಭೈರತಿ ರಣಗಲ್' ಶಿವಣ್ಣ ಭೇಟಿಯಾದ ಟಾಲಿವುಡ್ ನಟ ನಾನಿ; ಸ್ಟಾರ್ಸ್ ಫ್ಯಾನ್ಸ್‌ಗಳಲ್ಲಿ ಕುತೂಹಲ!

ಹೌದು, ದಾದಾಸಾಹೇಬ್ ಪ್ರಶಸ್ತಿಯನ್ನು ಪಡೆದಿರುವ ಏಕೈಕ ಕನ್ನಡಿಗರಾಗಿರುವ ನಟ ಡಾ ರಾಜ್‌ಕುಮಾರ್ ಅವರು, ತಾವು ಆ ಪ್ರಶಸ್ತಿಯನ್ನು ಮನೆಗೆ ತೆಗದುಕೊಂಡು ಹೋಗಿವುದಿಲ್ಲ ಎಂದಿದ್ದರಂತೆ. ಅದರಂತೆ, ಪ್ರಶಸ್ತಿ ಪಡೆದು ಹಿಂತಿರುಗಿದ ಅಣ್ಣಾವ್ರು, ಆ ಒಂದು ಲಕ್ಷ ರೂಪಾಯಿಗಳನ್ನು ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ಗೆ ಬಂದು ಅಲ್ಲಿ ಅದನ್ನು 'ದತ್ತಿ'ಯಾಗಿ ನೀಡಿದ್ದಾರಂತೆ. ಆ ಹಣ ಸಾರ್ವಜನಿಕ ಸೇವೆಗೆ ಲಭ್ಯವಾಗಲಿ ಎಂದಿದ್ರಂತೆ ಡಾ ರಾಜ್‌ಕುಮಾರ್!

ಹೀಗೆ, 1995ರಲ್ಲಿ ತಾವು ಪಡೆದ ಒಂದು ಲಕ್ಷ ರೂಪಾಯಿಗಳನ್ನು ಸ್ವಂತಕ್ಕೆ ಬಳಸಿಕೊಳ್ಳದೇ ಅದನ್ನು ಸಾಹಿತ್ಯ ಸೇವೆಗಾಗಿ ಮೀಸಲಾಗಿಟ್ಟರು ಡಾ ರಾಜ್‌ಕುಮಾರ್. ಅಂದು, 1995ರಲ್ಲಿ ಡಾ ರಾಜ್‌ಕುಮಾರ್ ಅವರು ದಾದಾಸಾಹೇಬ್ ಪ್ರಶಸ್ತಿ ಪಡೆಯುತ್ತಿದ್ದಂತೆ, ಇಡೀ ಕರುನಾಡಿನಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಕರುನಾಡಿದ ಕಣ್ಮಣಿ ಡಾ ರಾಜ್‌ಕುಮಾರ್ ಆ ಪ್ರಶಸ್ತಿ ಪಡೆಯುತ್ತಿದ್ದಂತೆ, ಇಡೀ ಕರುನಾಡು ಸಂಭ್ರಮದಲ್ಲಿ ತೇಲಾಡಿತ್ತು. 

ಒಟ್ಟಿನಲ್ಲಿ, ದಾದಾಸಾಹೇಬ್ ಪ್ರಶಸ್ತಿ ಪಡೆದ ಏಕೈಕ ಕನ್ನಡಿಗ ನಟ ಡಾ ರಾಜ್‌ಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ. ಆದರೆ, ಅವರ ಸವಿನೆನಪು ಸದಾ ಕನ್ನಡನಾಡಿನ ಸಿನಿಪ್ರೇಕ್ಷಕರು ಸೇರಿದಂತೆ ಎಲ್ಲರ ಹೃದಯದಲ್ಲಿ ರಾರಾಜಿಸುತ್ತಲೇ ಇರುತ್ತದೆ. ಸಿನಿಮಾರಂಗದ ಉತ್ಯುನ್ನತ ಎನ್ನುವ ಎಲ್ಲಾ ಪ್ರಶಸ್ತಿಗಳನ್ನು ಪಡೆದಿದ್ದಾರೆ ಡಾ ರಾಜ್‌ಕುಮಾರ್. ಆದರೆ, ದೇಶದಲ್ಲಿ ಕೊಡಲಾಗುವ ಶ್ರೇಷ್ಠ ನಟ 'ರಾಷ್ಟ್ರ ಪ್ರಶಸ್ತಿ' ಅಣ್ಣಾವ್ರಿಗೆ ಸಿಗಲಿಲ್ಲ. 

ನಟ ರವಿಚಂದ್ರನ್ ತೆಲುಗು ಮೆಗಾ ಸ್ಟಾರ್‌ಗೆ ದೇವನಹಳ್ಳಿಯಲ್ಲಿ ಜಮೀನು ಕೊಟ್ಟಿರೋದು ನಿಜವೇ?

ಆದರೆ, ಶ್ರೇಷ್ಠ ನಟ ಪ್ರಶಸ್ತಿ ಸಿಗದಿದ್ದರೂ, 'ಜೀವನ ಚೈತ್ರ' ಚಿತ್ರದಲ್ಲಿ ಅವರು ಹಾಡಿರುವ 'ನಾದಮಯ, ಈ ಲೋಕವೆಲ್ಲಾ..'ಹಾಡಿಗೆ ಶ್ರೇಷ್ಠ ಹಿನ್ನಲೆ ಗಾಯಕ ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ ಡಾ ರಾಜ್. ಈ ಮೂಲಕ ಶ್ರೇಷ್ಠ ನಟ ಪ್ರಶಸ್ತಿ ಪಡೆಯಲಾಗದ ಕೊರತೆಯನ್ನು ಶ್ರೇಷ್ಠ ಹಿನ್ನೆಲೆಗಾಯಕ ಪ್ರಶಸ್ತಿ ಪಡೆಯುವ ಮೂಲಕ ನೀಗಿಸಿಕೊಂಡಿದ್ದಾರೆ ಎಂದು ಕನ್ನಡಿಗರು ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಅದೇನೇ ಇರಲಿ, ಇಂದು 'ಕಾಂತಾರ' ಚಿತ್ರದ ನಟನೆಗಾಗಿ ಕನ್ನಡದ ರಿಷಬ್ ಶೆಟ್ಟಿ ಅವರು ಶ್ರೇಷ್ಠ ನಟ ರಾಷ್ಟ್ರ ಪ್ರಶಸ್ತಿ ಪಡೆದು ಕನ್ನಡಿಗರಿಗೆ ಹೆಮ್ಮೆ ಮೂಡಿಸಿದ್ದಾರೆ. 

click me!