ಪುಟ್ಟಣ್ಣ-ವಿಷ್ಣುವರ್ಧನ್ ಜೋಡಿ ಸೂಪರ್ ಹಿಟ್ ಚಿತ್ರಕ್ಕೆ 'ನಾಗರಹಾವು' ಹೆಸರಿಡಲು ಕಾರಣವೇನು?

By Shriram Bhat  |  First Published Apr 14, 2024, 5:33 PM IST

ನಟಿ ಕಲ್ಪನಾ ಜತೆ ಅಷ್ಟರಲ್ಲಾಗಲೇ ಪುಟ್ಟಣ್ಣ ಅವರ ಸಂಬಂಧ ಹಳಸಿತ್ತು. ಹೀಗಾಗಿ ಅವರು ಕಲ್ಪನಾ ಬದಲು ಆರತಿಗೆ ಮಣೆ ಹಾಕಿ ಕಲ್ಪನಾ ವಿರುದ್ಧ ಈ ರೀತಿಯಲ್ಲಿ ಸೇಡು ತೀರಿಸಿಕೊಂಡರು ಎನ್ನಲಾಗಿದೆ. ನಾಯಕಿ ಪಾತ್ರವನ್ನು ಆರತಿಗೆ ಕೊಟ್ಟ ಪುಟ್ಟಣ್ಣ ಅವರು, ಜಯಂತಿ ಮಾಡಿದ್ದ ಒನಕೆ ಓಬವ್ವನ..


ಸ್ಯಾಂಡಲ್‌ವುಡ್ ಸಿನಿಮಾರಂಗದಲ್ಲಿ 1972ರಲ್ಲಿ ಬಂದ 'ನಾಗರಹಾವು' ಸಿನಿಮಾ ಒಂದು ಮೈಲಿಗಲ್ಲು ಎನ್ನಬಹುದು. ಅಲ್ಲಿಯವರೆಗೂ ಮಹಿಳಾ ಪ್ರಧಾನ ಸಿನಿಮಾಗಳನ್ನೇ ಮಾಡಿ ಯಶಸ್ಸು ಗಳಿಸಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್ (Puttanna Kanagal) ಅವರು ಮೊಟ್ಟಮೊದಲ ಬಾರಿಗೆ ತಮ್ಮ ಝೋನರ್ ಬದಲಾಯಿಸಿ ಆಕ್ಷನ್ ಹಾಗೂ ಸೆಂಟಿಮೆಂಟ್ ಸಂಗಮದ ಮಾಸ್ ಅಪೀಲ್ ಒಳಗೊಂಡಿರುವ ವಿಭಿನ್ನ ಕಥೆಯೊಂದನ್ನು ತೆರೆಮೇಲೆ ತಂದು ಯಶಸ್ವಿಯಾದರು. 'ನಾಗರಹಾವು (Nagarahavu)' ಮೂಲಕ ನಟ ಕುಮಾರ್ ಅವರು ವಿಷ್ಣುವರ್ಧನ್ (Vishnuvardhan) ಆಗಿ ಹೆಸರು ಬದಲಾಗಿ ಕನ್ನಡಕ್ಕೆ ಮೊತ್ತೊಬ್ಬರು ಸ್ಟಾರ್ ಆಗಿ ಜನ್ಮತಾಳಿದರು. 

ಇವೆಲ್ಲ ಇತಿಹಾಸ ಬಹತೇಕ ಎಲ್ಲರಿಗೂ ಗೊತ್ತಿದೆ. ಆದರೆ, ಆ ಸಿನಿಮಾಕ್ಕೆ ಪುಟ್ಟಣ್ಣ ಕಣಗಾಲ್ ಅವರು 'ನಾಗರಹಾವು' ಎಂದೇ ಹೆಸರಿಟ್ಟಿದ್ದು ಯಾಕೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ತರಾಸು ಅವರ ಮೂರು ಕಾದಂಬರಿಗಳನ್ನು ಸೇರಿಸಿ ಒಟ್ಟಾಗಿ ಚಿತ್ರಕಥೆ ಬರೆದು ಅದಕ್ಕೆ 'ನಾಗರಹಾವು' ಎಂದು ಹೆಸರು ಇಟ್ಟರು ಪುಟ್ಟಣ್ಣ ಕಣಗಾಲ್. ಚಿ ಉದಯಶಂಕರ್ ಅವರು ಸಂಭಾಷಣೆ ಬರೆದ ಈ ಚಿತ್ರಕ್ಕೆ 'ನಾಗರಹಾವು' ಎಂದು ಹೆಸರಿಡಲು ಮುಖ್ಯ ಕಾರಣ, ಆ ಮೂರು ಕಾದಂಬರಿಗಳಲ್ಲಿ ಒಂದರ ಹೆಸರು 'ಸರ್ಪ ಮತ್ಸರ' ಎಂದಿರುವುದು. 

Latest Videos

undefined

ನಟನಟಿಯರೆಲ್ಲ ಶ್ರೀಮಂತರಲ್ಲ, ಸ್ಟಾರ್‌ಗಳ ಬಗ್ಗೆ ನನಗೆ ಗೊತ್ತಿಲ್ಲ; ಹೀಗ್ ಹೇಳ್ಬಿಟ್ರು ರಂಜನಿ ರಾಘವನ್!

ಸರ್ಪ ಮತ್ಸರ ಎನ್ನುವ ಹೆಸರಿಗೆ ಹತ್ತಿರದ ಹೆಸರು ಹಾಗೂ ಅದೇ ಅರ್ಥಕ್ಕೂ ಹತ್ತಿರವಿದೆ ಎಂಬ ಕಾರಣಕ್ಕೆ 'ನಾಗರಹಾವು' ಎಂದು ಹೆಸರಿಡಲಾಯಿತು ಎಂಬ ಮಾಹಿತಿ ಸತ್ಯ ಸಂಗತಿ ಎನ್ನಲಾಗಿದೆ. ಇನ್ನು ಈ ಸಿನಿಮಾಕ್ಕೆ ನಟ ವಿಷ್ಣುವರ್ಧನ್ ಅವರನ್ನೇ ಆಯ್ಕೆ ಮಾಡಲು ಕಾರಣ, ಅವರ ಕಣ್ಣಿನಲ್ಲಿದ್ದ ಶಾರ್ಪ್‌ನೆಸ್‌ ಹಾಗು ಅವರು ನಾಗರಹಾವಿನಂತೆ ಕತ್ತನ್ನು ತಿರುಗಿಸುವ ರೀತಿ ಎಂಬುದನ್ನು ಸಹ ಸ್ವತಃ ಪುಟ್ಟಣ್ಣ ಅವರೇ ಈ ಮೊದಲು ಒಂದು ಕಡೆ ಹೇಳಿದ್ದಾರೆ. ಇನ್ನು ಪುಟ್ಟಣ್ಣನವರ ಅಚ್ಚುಮೆಚ್ಚಿನ ನಟಿ ಕಲ್ಪನಾ ಬದಲು ಈ ಚಿತ್ರಕ್ಕೆ ಆರತಿ ನಾಯಕಿಯಾಗಿದ್ದು ಹೇಗೆ ಎಂಬುದು ಕೂಡ ರಿವೀಲ್ ಆಗಿದೆ. 

ಮೃಣಾಲ್ ಸಿನಿಮಾಗಳೆಂದ್ರೆ ಒಳ್ಳೆಯ ಕಥೆಗಳು ಅಂತಾರೆ ಪ್ರೇಕ್ಷಕರು; ಹೀಗಂದಿದ್ದು ಯಾರಿರಬಹುದು ನೋಡಿ!

ನಟಿ ಕಲ್ಪನಾ ಜತೆ ಅಷ್ಟರಲ್ಲಾಗಲೇ ಪುಟ್ಟಣ್ಣ ಅವರ ಸಂಬಂಧ ಹಳಸಿತ್ತು. ಹೀಗಾಗಿ ಅವರು ಕಲ್ಪನಾ ಬದಲು ಆರತಿಗೆ ಮಣೆ ಹಾಕಿ ಕಲ್ಪನಾ ವಿರುದ್ಧ ಈ ರೀತಿಯಲ್ಲಿ ಸೇಡು ತೀರಿಸಿಕೊಂಡರು ಎನ್ನಲಾಗಿದೆ. ನಾಯಕಿ ಪಾತ್ರವನ್ನು ಆರತಿಗೆ ಕೊಟ್ಟ ಪುಟ್ಟಣ್ಣ ಅವರು, ಜಯಂತಿ ಮಾಡಿದ್ದ ಒನಕೆ ಓಬವ್ವನ ಪಾತ್ರವನ್ನು ಸ್ಟಾರ್ ನಟಿ ಕಲ್ಪನಾಗೆ ಅವಮಾನ ಮಾಡಲೆಂದೇ ಆಫರ್ ಮಾಡಿದ್ದರು ಎನ್ನಲಾಗಿದೆ. ಅದನ್ನು ಕಲ್ಪನಾ ತಿರಸ್ಕರಿಸಿ ನಾಗರಹಾವು ಸಿನಿಮಾದಿಂದಲೇ ದೂರ ಉಳಿದುಬಿಟ್ಟರು. 

ಧನಂಜಯ್ ಮುಂದಿಟ್ಟು 'ಕೋಟಿ'ಗೆ ಕೈ ಹಾಕಿದ ಪರಮ್, ಸಿನಿಮಾ ರಿಲೀಸ್ ಡೇಟ್ ಫಿಕ್ಸ್!

ಒಟ್ಟಿನಲ್ಲಿ, 1972ರಲ್ಲಿ ತೆರೆಗೆ ಬಂದು ಸೂಪರ್ ಹಿಟ್ ದಾಖಲಿಸಿ ಬರೋಬ್ಬರಿ ಒಂದು ವರ್ಷಗಳಿಗೂ ಹೆಚ್ಚು ಕಾಲ ತೆರೆಯ ಮೇಲೆ ರಾರಾಜಿಸುತ್ತಿತ್ತು ನಾಗರಹಾವು ಸಿನಿಮಾ. ಆ ಸಿನಿಮಾ ಮೂಲಕ ಪುಟ್ಟಣ್ಣ ಅವರಿಗೆ ಹೊಸದೊಂದು ಐಡೆಂಟಿಟಿ ಸಿಕ್ಕರೆ, ನಟ ಕುಮಾರ್ ವಿಷ್ಣುವರ್ಧನ್ ಆಗಿ ಸೂಪರ್ ಸ್ಟಾರ್ ಆಗಿಬಿಟ್ಟರು. ಇನ್ನು ನಟಿ ಜಯಂತಿ ಒನಕೆ ಓಬವ್ವನ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರೂ ಸಜನಮೆಚ್ಚುಗೆ ಗಳಿಸಿ ಆ ಮೂಲಕ ಬಳಿಕ ನಾಯಕಿಯಾಗಿ ಮೆರೆದು ಸ್ಟಾರ್ ನಟಿಯೂ ಆಗಿಬಿಟ್ಟರು. ಹೀಗೆ, ತರಾಸು ಅವರ 'ಸರ್ಪ ಮತ್ಸರ' ಕಾದಂಬರಿ 'ನಾಗರಹಾವು' ಆಗಿ ಸೂಪರ್ ಹಿಟ್ ಸಿನಿಮಾ ಆಗಿ ಸ್ಯಾಂಡಲ್‌ವುಡ್‌ನಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿತು. 
 

click me!