ಸಿನಿಮಾ, ಸೀರಿಯಲ್ ಅಂತ ಬಂದಾಗ ಸ್ಟಾರ್ ನಟನಟಿಯರು ಎಷ್ಟು ಜನ ಇದಾರೆ ಹೇಳಿ? ಅವರಿಗಿಂತ ಮಿಕ್ಕವರೇ ಜಾಸ್ತಿ ಇದ್ದಾರೆ. ಕಾಮನ್ ಸೆನ್ಸ್ ಇಂದ ಹೇಳ್ಬೇಕು ಅಂದ್ರೆ ಯಾರೂ ನಟನೆ ಮಾಡಿ ಬಹಳ ದುಡ್ಡು ತೆಗೆದುಕೊಳ್ಳೋದಕ್ಕೆ ಆಗಲ್ಲ..
ನಟಿ, ಬರಹಗಾರ್ತಿ ಹಾಗೂ ಸಿಂಗರ್ ರಂಜನಿ ರಾಘವನ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ಹಲವು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. 'ಒಂದು ಹೇಳ್ತೀನಿ, ಆಕ್ಟಿಂಗ್‌ನಿಂದ ದುಡಿದು ಶ್ರೀಮಂತರಾಗೋಕೆ ಆಗಲ್ಲ. ಶುರುವಿನಲ್ಲಿ ಯಾರಾಗಾದ್ರೂ ಎಷ್ಟು ಕೊಡ್ತಾರೆ ಹೇಳಿ? ನಾನಲ್ಲ, ಶಾರುಖ್ ಖಾನ್ ಕೂಡ ನಟನೆಯನ್ನೇ ನಂಬಿ ಶ್ರೀಮಂತರಾಗೋಕೆ ಆಗಲ್ಲ. ನಮಗೆ ಸಿನಿಮಾದಲ್ಲಿ ಕೋಟ್ಯಾಂತರ ರೂಪಾಯಿ ಕೊಡ್ತಾರೆ ಅನ್ನೋದೆಲ್ಲ ಹೈಪ್ ಮಾಡಿರೋದು.. ಇವತ್ತು ಶಾರುಖ್ ಖಾನ್ ಒಬ್ಬ ಸ್ಟಾರ್, ಅವ್ರಿಗೆ ಕೋಟಿಗಟ್ಟಲೆ ಕೊಡಬಹುದು. ಬೇರೆ ಕೆಲವು ಸ್ಟಾರ್‌ಗಳಿಗೂ ಕೊಡಬಹುದು. ಅದ್ರ ಟ್ರಾನ್ಪರಸಿ ಬಗ್ಗೆ ನಂಗೆ ಗೊತ್ತಿಲ್ಲ.
ಆದ್ರೆ ಸಿನಿಮಾ, ಸೀರಿಯಲ್ ಅಂತ ಬಂದಾಗ ಸ್ಟಾರ್ ನಟನಟಿಯರು ಎಷ್ಟು ಜನ ಇದಾರೆ ಹೇಳಿ? ಅವರಿಗಿಂತ ಮಿಕ್ಕವರೇ ಜಾಸ್ತಿ ಇದ್ದಾರೆ. ಕಾಮನ್ ಸೆನ್ಸ್ ಇಂದ ಹೇಳ್ಬೇಕು ಅಂದ್ರೆ ಯಾರೂ ನಟನೆ ಮಾಡಿ ಬಹಳ ದುಡ್ಡು ತೆಗೆದುಕೊಳ್ಳೋದಕ್ಕೆ ಆಗಲ್ಲ. ನಾವೆಲ್ಲ ಮಾಡ್ತಾ ಇರೋದು ನಟನೆ ಅಷ್ಟೇ, ಹಣ ಅಲ್ಲ. ಯಾಕಂದ್ರೆ ಹಣ ಅನ್ನೋ ಯೋಚ್ನೆ ಮೊದ್ಲೇ ನಮ್ ತಲೆನಲ್ಲಿ ಬಂದ್ರೆ ನಾವ್ಯಾರೂ ಆಕ್ಟರ್ ಆಗೋದಕ್ಕೆ ಆಗೋದೇ ಇಲ್ಲ. ನಟನೆ ಮಾತ್ರ ನಮ್ಮ ತಲೆನಲ್ಲಿ ಇದ್ರೆ ನಾವು ಸ್ಟಾರ್ ನಟರಾಗಬಹುದು, ಆಗ ಕೋಟಿಗಟ್ಟಲೆ ಹಣ ನೋಡಬಹುದು.
ಮೃಣಾಲ್ ಸಿನಿಮಾಗಳೆಂದ್ರೆ ಒಳ್ಳೆಯ ಕಥೆಗಳು ಅಂತಾರೆ ಪ್ರೇಕ್ಷಕರು; ಹೀಗಂದಿದ್ದು ಯಾರಿರಬಹುದು ನೋಡಿ!
ನಮಗೆ ಹಣ ಅನ್ನೋದೇ ಮೊದ್ಲು ಅಂತ ಆಗ್ಬಿಟ್ರೆ, ಆಗ ನಾವ್ಯಾರೂ ಆಕ್ಟರ್, ಡೈರೆಕ್ಟರ್ ಅಥವಾ ಇನ್ನೇನೋ ಆಗೋದಕ್ಕೆ ಆಗೋದೇ ಇಲ್ಲ. ಇದು ಕಲೆ, ಇದನ್ನು ನಂಬಿ ತುಂಬಾ ಜನರು ಈ ಕ್ಷೇತ್ರಕ್ಕೆ ಬರಬಹುದು. ಆದ್ರೆ ಸಕ್ಸಸ್ ಆಗೋರು ಎಷ್ಟು ಜನ ಹೇಳಿ? ಜನ ನಮ್ಮನ್ನ ಕೆಲವೊಮ್ಮೆ ಗೆಲ್ಲಿಸ್ತಾರೆ. ಇದು ತುಂಬಾ ಕಮ್ಮಿ ಸಕ್ಸಸ್ ರೇಟ್ ಇರೋ ಇಂಡಸ್ಟ್ರಿ. ಈಗ, ಸಿಎ ಮಾಡೋದಕ್ಕೆ 4% ಸಕ್ಸಸ್ ರೇಟ್ ಅಂತಂದ್ರೆ, ಈ ಸಿನಿಮಾ ಉದ್ಯಮ ಅಥವಾ ಕಲೆ ಉದ್ಯಮದಲ್ಲಿ ಅದ್ರ ರೇಟ್ ತುಂಬಾ ಕಮ್ಮಿ ಇದೆ. ಬಹುಶಃ, 0.10. 0.20 ಇರಬಹುದು ಅಷ್ಟೇ. ಅದ್ರಲ್ಲಿ ಕೂಡ ಮತ್ತೆ ಕೆಟಗರಿ ಇರುತ್ತೆ, ಎಲ್ರಿಗೂ ಕೋಟಿ ಸಿಗಲ್ಲ'
ಧನಂಜಯ್ ಮುಂದಿಟ್ಟು 'ಕೋಟಿ'ಗೆ ಕೈ ಹಾಕಿದ ಪರಮ್, ಸಿನಿಮಾ ರಿಲೀಸ್ ಡೇಟ್ ಫಿಕ್ಸ್!
ನಮ್ಮಲ್ಲಿ ಒಂದು ಹೇಳಬಹುದು, 'ಬೇಕು ಅನ್ನೋನು ಬಡವ,ಸಾಕು ಅನ್ನೋನು ಶ್ರೀಮಂತ' ಎಂಬ ಮಾತು' ಎಂದಿದ್ದಾರೆ ರಂಜನಿ ರಾಘವನ್. ಒಟ್ಟಿನಲ್ಲಿ, ಸಿನಿಮಾದವ್ರು ಅಂದ್ರೆ ಶ್ರೀಮಂತರು ಎಂಬ ಮಾತು ಸುಳ್ಳು ಎಂಬುದನ್ನು ಪರೋಕ್ಷವಾಗಿ ನಟಿ ರಂಜನಿ ರಾಘವನ್ ಅವರು ಹೇಳಿದ್ದಾರೆ. ಸಿನಿಮಾದವರಲ್ಲಿ ಕೆಲವೇ ಕೆಲವರು ಶ್ರೀಮಂತರು ಇರಬಹುದು ಅಷ್ಟೇ. ಮಿಕ್ಕವರು ಕಲೆಯನ್ನು ನಂಬಿ, ಅದನ್ನೇ ಪ್ರೀತಿಸುತ್ತ, ಅದಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟು, ನಟನೆಯಿಂದ ತಾವೂ ಖುಷಿಪಟ್ಟು ಬೇರೆಯವರನ್ನೂ ಖುಷಿಯಲ್ಲಿಟ್ಟು ಜೀವನ ನಡೆಸುತ್ತಾರೆ ಅಷ್ಟೇ. ಅದು ರಿಯಾಲಿಟಿ ಎಂಬುದು ನಟಿ ರಂಜನಿಯವರ ಮಾತಿನಲ್ಲಿರುವ ಸಾರಾಂಶ ಎನ್ನಬಹುದೇ?
ವಿಷ್ಣುವರ್ಧನ್ ಅವರನ್ನೇ 'ನಾಗರಹಾವು'ಗೆ ಪುಟ್ಟಣ್ಣ ಕಣಗಾಲ್ ಆಯ್ಕೆ ಮಾಡಿದ್ದೇಕೆ? ಭಾರೀ ಗುಟ್ಟು ರಟ್ಟಾಯ್ತು!
ಅಂದಹಾಗೆ, ನಟಿ ರಂಜನಿ ರಾಘವನ್ ಅವರು 'ಪುಟ್ಟಗೌರಿ ಮದುವೆ' ಹಾಗೂ 'ಕನ್ನಡತಿ' ಸೀರಿಯಲ್ ಮೂಲಕ ಕರ್ನಾಟಕದ ಮನೆಮನೆಗಳ ಜನರ ಮನಸ್ಸಿನಲ್ಲಿ ನೆಲೆಯೂರಿರುವ ನಟಿ. ಅವರು ರೈಟರ್ ಹಾಗೂ ಸಿಂಗರ್ ಆಗಿಯೂ ಗುರುತಿಸಿಕೊಂಡಿದ್ದಾರೆ.