ಪ್ರಿಯಾಂಕ ಉಗ್ರಾವತಾರ ಇಲ್ಲೀವರೆಗೂ ನಾನೊಬ್ಬನೇ ನೋಡಿದ್ದೆ: ಉಪೇಂದ್ರ

By Kannadaprabha News  |  First Published Oct 11, 2024, 1:59 PM IST

ಜನ ಥಿಯೇಟರ್‌ಗೆ ಬಂದು ಆಶೀರ್ವಾದ ಮಾಡಿದರೆ ನೂರಾರು ಹೊಸ ಕಲಾವಿದರು ಹುಟ್ಟಿಕೊಳ್ಳುತ್ತಾರೆ. ಹತ್ತಾರು ಕುಟುಂಬಗಳ ದೀಪ ಬೆಳಗುತ್ತದೆ. ಸಿನಿಮಾದಂಥಾ ಬೃಹತ್‌ ಪ್ರಾಜೆಕ್ಟ್‌ನಲ್ಲಿ ಸಣ್ಣ ಪುಟ್ಟ ತಪ್ಪುಗಳು ಇರುತ್ತೆ. 
 


‘ಪ್ರಿಯಾಂಕಾ ಉಗ್ರಾವತಾರವನ್ನು ಇಲ್ಲೀವರೆಗೆ ನಾನೊಬ್ಬನೇ ನೋಡಿದ್ದೆ. ಈಗ ಇಡೀ ಕರ್ನಾಟಕ ನೋಡ್ತಿದೆ. ಒಂದು ವೇಳೆ ನಾನು ಈ ಸಿನಿಮಾ ನಿರ್ದೇಶನ ಮಾಡ್ತಿದ್ರೆ ಪ್ರಿಯಾಂಕಾ ಮುಖ ಡಲ್‌ ಕಾಣೋ ಹಾಗೆ ಮಾಡ್ತಿದ್ದೆ. ಹಿಂಗೆ ಗ್ಲಾಮರಸ್‌ ಪೊಲೀಸ್‌ ಆದ್ರೆ ಹೊಡಿಯಮ್ಮ ಪರ್ವಾಗಿಲ್ಲ ಅನ್ನಲ್ವಾ ರೌಡಿಗಳು. ಆದರೂ ಆಕೆಯದು ಯಾವತ್ತಿಗೂ ಕಡಿಮೆ ಆಗದಿರೋ ಗ್ಲಾಮರ್‌.’ - ಹೀಗಂದಿದ್ದು ರಿಯಲ್‌ ಸ್ಟಾರ್ ಉಪೇಂದ್ರ. ಪ್ರಿಯಾಂಕಾ ಉಪೇಂದ್ರ ನಟನೆಯ ‘ಉಗ್ರಾವತಾರ’ ಸಿನಿಮಾದ ಟ್ರೇಲರನ್ನು ಅವರು ಅನಾವರಣಗೊಳಿಸಿದರು.

‘ಜನ ಥಿಯೇಟರ್‌ಗೆ ಬಂದು ಆಶೀರ್ವಾದ ಮಾಡಿದರೆ ನೂರಾರು ಹೊಸ ಕಲಾವಿದರು ಹುಟ್ಟಿಕೊಳ್ಳುತ್ತಾರೆ. ಹತ್ತಾರು ಕುಟುಂಬಗಳ ದೀಪ ಬೆಳಗುತ್ತದೆ. ಸಿನಿಮಾದಂಥಾ ಬೃಹತ್‌ ಪ್ರಾಜೆಕ್ಟ್‌ನಲ್ಲಿ ಸಣ್ಣ ಪುಟ್ಟ ತಪ್ಪುಗಳು ಇರುತ್ತೆ. ಅದನ್ನು ಕ್ಷಮಿಸುವಂಥಾ ದೊಡ್ಡ ಗುಣ ನಮ್ಮ ಕನ್ನಡಿಗರಲ್ಲಿ ಇದೆ’ ಎಂದೂ ಉಪೇಂದ್ರ ಹೇಳಿದರು. ಪ್ರಿಯಾಂಕಾ ಉಪೇಂದ್ರ, ‘ನಮ್ಮ ದೇಶದಲ್ಲಿ 16 ನಿಮಿಷಕ್ಕೊಂದು ಅತ್ಯಾಚಾರ ಸಂಭವಿಸುತ್ತಿದೆ. 

Tap to resize

Latest Videos

undefined

ನಾಗ ಚೈತನ್ಯ ರಹಸ್ಯ ಪ್ರೇಯಸಿಗಾಗಿ 6 ತಿಂಗಳು ನಿಗಾವಹಿಸಿದ್ದ ನಾಗಾರ್ಜುನ: ಆದರೆ ವಾಚ್‌ಮ್ಯಾನ್‌ ಹೇಳಿದ ಸತ್ಯವೇನು?

ಕಳೆದ ವರ್ಷ 2000 ರೇಪ್‌ ಕೇಸ್‌ಗಳಾಗಿದ್ದವು. ನಮ್ಮ ಸಿನಿಮಾದಲ್ಲಿ ಈ ಬಗ್ಗೆ ಜಾಗೃತಿ, ಸಂದೇಶ ಇದೆ. ಹೆಣ್ಣುಮಕ್ಕಳಲ್ಲಿ ಹೇಗೆ ಮನಸ್ಸು, ದೇಹ, ಆತ್ಮದ ಬಗ್ಗೆ ಅರಿವು ಮೂಡಿಸಬೇಕು ಎಂಬ ಅಂಶಗಳಿವೆ’ ಎಂದರು. ನಿರ್ದೇಶಕ ಗುರುಮೂರ್ತಿ, ‘ಸಿನಿಮಾದಲ್ಲಿ ಹೆಣ್ಣಿನ ಘನತೆ ಎತ್ತಿ ಹಿಡಿಯುವ ಪ್ರಯತ್ನವಾಗಿದೆ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು’ ಎಂಬುದನ್ನು ತೋರಿಸಿದ್ದೇವೆ’ ಎಂದರು. ಎಸ್‌ ಜಿ ಸತೀಶ್‌ ನಿರ್ಮಾಪಕರು. ರೋಬೋ ಗಣೇಶ್‌, ಅಂಕಿತಾ, ದರ್ಶನ್‌ ಸೂರ್ಯ, ಲಕ್ಷ್ಯಾ ಶೆಟ್ಟಿ, ಪ್ರವೀಣ್‌ ಸೂರ್ಯ ನಟಿಸಿದ್ದಾರೆ.

ಪ್ರಿಯಾಂಕಾ ಎಲ್ಲಿ ಉಗ್ರಾವತಾರ ತಾಳ್ತಾರೋ ಅಂತ ಭಯ: ‘ಪ್ರಿಯಾಂಕಾ ಕರೆದಾಗ ಬರದಿದ್ದರೆ ಎಲ್ಲಿ ಉಗ್ರಾವತಾರ ತಾಳ್ತಾರೋ ಅಂತ ಭಯ. ಅದಕ್ಕೆ ಈ ಕಾರ್ಯಕ್ರಮಕ್ಕೆ ಕರೆದ ಕೂಡಲೇ ಬಂದೆ. ಮಂಜುಳಾ, ಮಾಲಾಶ್ರೀ ಮೊದಲಾದವರು ಆ್ಯಕ್ಷನ್‌ ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದರು. ಆಮೇಲೆ ಆ ಪರಂಪರೆ ಬೆಳೆಯಲೇ ಇಲ್ಲ. ಉಗ್ರಾವತಾರದಲ್ಲಿ ಪ್ರಿಯಾಂಕಾ ಆಕ್ಷನ್‌ ನೋಡಿ ಆ ಪರಂಪರೆ ಮುಂದುವರಿಯುವ ಲಕ್ಷಣ ಕಾಣುತ್ತಿದೆ. ಈಗ ಬಿಡುಗಡೆ ಆಗಿರುವ ಸಿದ್ದಿ ಹಾಡು ಕೇಳಿ ಥ್ರಿಲ್ಲಾದೆ’. ಇಷ್ಟು ಹೇಳಿ ಪತ್ನಿ ಪ್ರಿಯಾಂಕ ಮುಖ ನೋಡಿ ಮುಗುಳ್ನಕ್ಕರು ಉಪೇಂದ್ರ. 

ದರ್ಶನ್‌ಗೆ ಬೇಲ್‌ ನೀಡದಿದ್ರೆ 500 ಕುಟುಂಬಕ್ಕೆ ತೊಂದರೆ: ವಕೀಲ ನಾಗೇಶ್ ವಾದವೇನು?

ಪ್ರಿಯಾಂಕಾ ಉಪೇಂದ್ರ ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ನಟಿಸಿರುವ ಆಕ್ಷನ್‌ ಥ್ರಿಲ್ಲರ್‌ ಪ್ಯಾನ್‌ ಇಂಡಿಯನ್‌ ಸಿನಿಮಾ ‘ಉಗ್ರಾವತಾರ’ದ ಹಾಡುಗಳು ಎ2 ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ. ಗಿರಿಜಾ ಸಿದ್ದಿ ತಮ್ಮ ಸಮುದಾಯದವರೊಂದಿಗೆ ಹಾಡಿ ಕುಣಿದಿರುವ ಈ ಸಿದ್ದಿ ಹಾಡಿನಲ್ಲಿ ಪ್ರಿಯಾಂಕಾ ಅವರೂ ಹೆಜ್ಜೆ ಹಾಕಿದ್ದಾರೆ. ಗಿರಿಜಾ ಸಿದ್ದಿ, ‘ನಮ್ಮ ಸಿದ್ದಿ ಹಾಡುಗಳಲ್ಲಿ ಕಡಿಮೆ ಸಾಲುಗಳಿರುತ್ತವೆ. ಅವವೇ ಸಾಲುಗಳು ರಿಪೀಟ್‌ ಆಗುತ್ತಿರುತ್ತವೆ. ಹೀಗಾಗಿ ಈ ಸಿನಿಮಾಕ್ಕೆ ಮೂರ್ನಾಲ್ಕು ಹಾಡುಗಳ ಸಾಲುಗಳನ್ನು ಕೊಲಾಜ್‌ ಮಾಡಲಾಗಿದೆ’ ಎಂದು ಈ ಹಾಡು ಕಟ್ಟಿದ ಬಗೆಯನ್ನು ವಿವರಿಸಿದರು.

click me!