ಈಗ ರೀಕಾಲ್ ಮಾಡಿಕೊಂಡಾಗ ತುಂಬಾ ಬೇಸರ ಆಗುತ್ತೆ.. ನಾನು ಆವಾಗ ಸಿನಿಮಾ ಶೂಟಿಂಗ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಇದ್ದೆ.. ಆ ಟೈಮಲ್ಲಿ 'H2O' ಸಿನಿಮಾ ರಿಲೀಸ್ (29 ಮಾರ್ಚ್ 2002) ಮಾಡಿದ್ರು.. ಆ ಟೈಮಲ್ಲಿ ರಿಲೀಸ್ ಬಗ್ಗೆ ಸಿಕ್ಕಾಪಟ್ಟೆ ಒತ್ತಡ ಕೂಡ ಇತ್ತು...
'ಹೆಚ್‌ಟುಓ (H2O) ಸಿನಿಮಾ ಬಹಳಷ್ಟು ಕಾಂಟ್ರೋವರ್ಸಿ ಮಾಡಿದ್ದ ಸಿನಿಮಾ. ನಿಮ್ ಥಾಟ್ ಬೇರೆ ಇತ್ತು, ತಮಿಳು ಹಾಗೂ ಕನ್ನಡ ಸೇರಿಸಿರೋ ಉದ್ದೇಶ. ತಮಿಳುನಾಡು ಹಾಗು ಕರ್ನಾಟಕ ರಾಜ್ಯಗಳ ಮಧ್ಯೆ ಇದ್ದ ಕಾವೇರಿ ವಿವಾದದ ಬಗ್ಗೆ ಸಿನಿಮಾ ಮಾಡಿ ಒಂದು ಅತ್ಯದ್ಭುತವಾದ ಸಿನಿಮಾ ಮಾಡಿದ್ರಿ.. ಅ ಟೈಮಲ್ಲಿ ಜನ, ಸಿನಿಪ್ರೇಕ್ಷಕರು ಅದನ್ನು ಸಿನಿಮಾ ಆಗಿನೇ ತಗೊಂದ್ರು.. ಆದ್ರೆ, ಒಂದು ವರ್ಗ ಅದನ್ನು ತುಂಬಾ ವಿರೋಧಿಸ್ತು.. ನಿಮ್ಗೆ ಆಗ ಹರ್ಟ್ ಆಯ್ತಾ? ಪರ್ಸನಲಿ ನಿಮ್ಗೆ ಆಗ ಏನು ಅನ್ನಿಸ್ತು?' ಎಂದು ಸಂದರ್ಶನದಲ್ಲಿ ನಿರೂಪಕ ಕಿರಿಕ್ ಕೀರ್ತಿ ಕೇಳಿದ್ದಾರೆ. ಅದಕ್ಕೆ ನಟ ಉಪೇಂದ್ರ ಅವರು ಏನು ಉತ್ತರ ಕೊಟ್ರು ನೋಡಿ..
ರಿಯಲ್ ಸ್ಟಾರ್ ನಟ ಉಪೇಂದ್ರ ಅವರು 'ಈಗ ರೀಕಾಲ್ ಮಾಡಿಕೊಂಡಾಗ ತುಂಬಾ ಬೇಸರ ಆಗುತ್ತೆ.. ನಾನು ಆವಾಗ ಸಿನಿಮಾ ಶೂಟಿಂಗ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಇದ್ದೆ.. ಆ ಟೈಮಲ್ಲಿ 'H2O' ಸಿನಿಮಾ ರಿಲೀಸ್ (29 ಮಾರ್ಚ್ 2002) ಮಾಡಿದ್ರು.. ಆ ಟೈಮಲ್ಲಿ, ರಿಲೀಸ್ ಬಗ್ಗೆ ಸಿಕ್ಕಾಪಟ್ಟೆ ಒತ್ತಡ ಕೂಡ ಇತ್ತು. ಒಂದೊಂದು ಏರಿಯಾನೂ ಬೇರೆಬೇರೆಯವರು ತಗೊಂಡು ಸಿನಿಮಾ ಬಿಡುಗಡೆ ಮಾಡಿದ್ರು. ಒಳ್ಳೇ ರೆಸ್ಪಾನ್ಸ್ ಬಂತು. ಸಿಕ್ಕಾಪಟ್ಟೆ ಸುದ್ದಿನೂ ಆಯ್ತು. ನಿಮಗೇ ಗೊತ್ತಲ್ಲ, ಯಾವಾಗ ಸಿಕ್ಕಾಪಟ್ಟೆ ಸುದ್ದಿ, ಕಲೆಕ್ಷನ್ ಆಯ್ತೋ ಆಗ ಶುರುವಾಯ್ತು! ಈ ಸಿನಿಮಾ
undefined
ಕನ್ನಡ ಸಿನಿರಂಗಕ್ಕೆ ದೊಡ್ಡ ತಲೆನೋವು ತಂದಿಟ್ಟ ಮೀಟೂ, ಕಾಸ್ಟಿಂಗ್ ಕೌಚ್ ಭೂತ.., ಏನಾಗ್ತಿದೆ ನೋಡಿ..!
ಯಾವಾಗ್ಲೂ ಅಷ್ಟೇ, ಏನೋ ಒಂದು ಸುದ್ದಿ ಆಗ್ತಾ ಇದ್ರೆ, ಹಣ ಮಾಡ್ತಾ ಇದ್ರೆ, ಅದ್ರ ಹಿಂದೆ ಏನೇನೋ ಬರುತ್ತೆ..ಈ ಸಿನಿಮಾ ವಿಷ್ಯದಲ್ಲೂ ಹಾಗೇ ಆಯ್ತು.. ಸುದ್ದಿ ಆದಾಗ, ಏನೇನೋ ಹುಡುಕಿ ಪ್ರಾಬ್ಲಂ ಮಾಡಿದ್ರು.. ಆಸ್ಟ್ರೇಲಿಯಾದಲ್ಲಿ ಇರೋ ನಂಗೆ ಯಾವ್ ಥರ ನ್ಯೂಸ್ ಇತ್ತು ಅಂದ್ರೆ, ಪಿಕ್ಚರ್ ಓಡೋಕೆ ಬಿಡಲ್ಲ ಅನ್ನೋ ನ್ಯೂಸ್! ನಂಗೆ ಯಾವ್ ಥರ ಟೆನ್ಷನ್ ಆಯ್ತು ಅಂದ್ರೆ, ಏನಾದ್ರೂ ಮಾಡ್ಕೊಳ್ಳಿ ಅಂತ ಬಿಟ್ಬಿಟ್ಟೆ!. ಡೈಲಾಗ್ ಬೇಕಾದ್ರೂ ಚೇಂಜ್ ಮಾಡಿ, ಏನಾದ್ರೂ ಮಾಡ್ಲಿ ಅಂತ ಬಿಟ್ಟೆ..
ಹೆಚ್‌ಟುಓ ಸಿನಿಮಾವನ್ನು ಬಹಳಷ್ಟು ಜನ ಸಿನಿಮಾ ಆಗಿನೇ ತಗೊಂಡ್ರು ಕೂಡ ಕೆಲವು ಜನ ಅದನ್ನ ಬೇರೆ ಬೇರೆ ತಗೊಂಡು ಏನೇನೋ ಅರ್ಥ ಕಲ್ಪಿಸಿಕೊಂಡ್ರು. ಕ್ಲೈಮ್ಯಾಕ್ಸ್‌ನಲ್ಲಿ, 'ನದಿ ಅನ್ನೋದು ಪ್ರಕೃತಿ, ಅದ್ರ ಬಗ್ಗೆ ಕಿತ್ತಾಡೋದು ಯಾಕೆ' ಅನ್ನೋ ಮೆಸೇಜ್ ಇತ್ತಲ್ಲ, ಅದನ್ನು ತುಂಬಾ ಜನ್ರು ಇಷ್ಟಪಟ್ರು. ಈಗ್ಲೂ ಆ ಕ್ಲೈಮ್ಯಾಕ್ಸ್ ಇಷ್ಟಪಡೋ ಅಭಿಮಾನಿಗಳು ತುಂಬಾ ಇದ್ದಾರೆ, ಅವ್ರು ಅದ್ರ ಬಗ್ಗೆ ಮಾತಾಡ್ತಾರೆ. ಆದ್ರೆ, ಆಗ ಆ ಸಿನಿಮಾದಲ್ಲಿ ತುಂಬಾ ಬದಲಾವಣೆ ಮಾಡಬೇಕಾಗಿ ಬಂತು' ಎಂದಿದ್ದಾರೆ ನಟ-ನಿರ್ದೇಶಕ ಉಪೇಂದ್ರ.
ಚೇತನ್ ಅಹಿಂಸಾ 'ಫೈರ್'ಗೆ ಉಗಿದು ಜನ್ಮ ಜಾಲಾಡಿ ಸಾರಾ ಗೋವಿಂದು ಏನ್ ಹೇಳ್ಬಿಟ್ರು ನೋಡಿ!
ಆದ್ರೆ, ಆ ಸಿನಿಮಾ ಬಗ್ಗೆ ಈಗ ಯೋಚ್ನೆ ಮಾಡಿದ್ರೆ ನಂಗೆ ಅಷ್ಟೇನೂ ಆತಂಕ ಆಗೋದಿಲ್ಲ. ಕಾರಣ, ಕೂಲ್ ಆಗಿ ಯೋಚಿಸ್ತೀನಿ. ಆದ್ರೆ ಆಗ ವಿದೇಶದಲ್ಲಿ ಇದ್ದೆನಲ್ಲಾ, ಹಾಗಾಗಿ, ಕಾಲ್ ಮಾಡಿ ಹೇಳಿದ್ದನ್ನ ಕೇಳಿ ತುಂಬಾ ಗಾಬರಿ ಆಗ್ಬಿಟ್ಟಿದ್ದೆ. ನಿರ್ಮಾಪಕರ ಬಗ್ಗೆ ಯೋಚನೆ ಇರುತ್ತಲ್ಲಾ, ಹಾಗಾಗಿ ಬಯಸಿದ ಬದಲಾವಣೆ ಮಾಡ್ಕೊಳ್ಳೋಕೆ ಹೇಳ್ಬಿಟ್ಟೆ. ಏನೇ ಆದ್ರೂ ನಂಗೆ ನನ್ ಸಿನಿಮಾ ಇಷ್ಟಪಟ್ಟು ನೋಡೋ ಒಂದು ವರ್ಗದ ಅಭಿಮಾನಿಗಳು ಇವತ್ತಿಗೂ ಇದಾರಲ್ಲ, ಅದೇ ನನ್ನ ಶಕ್ತಿ. ಅವರಿಗಾಗಿ ಇವತ್ತಿಗೂ ನಾನು ಸಿನಿಮಾ ಮಾಡ್ತಾ ಇದೀನಿ' ಎಂದು ಮಾರ್ಮಿಕವಾಗಿ ಹೇಳಿದ್ದಾರೆ ರಿಯಲ್ ಸ್ಟಾರ್.
ಅಂದಹಾಗೆ, ನಟ ಉಪೇಂದ್ರ ಅವರು ಸದ್ಯ 'ಯು/ಐ (U/I)' ಸಿನಿಮಾದ ಕೆಲಸ ಹಾಗು ಪ್ರಚಾರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ಬಿಡುಗಡೆ ಘೋಷಿಸಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವಲ್ ಆಗಿದ್ದು, ಭಾರಿ ಬಜೆಟ್ ಹಾಗು ಮೇಕಿಂಗ್ ಹೊಂದಿದೆ ಎನ್ನಲಾಗಿದೆ. ಈ ಸಿನಿಮಾದ ಬಗ್ಗೆ ಇಡೀ ಭಾರತೀಯರು ಅಪಾರ ನಿರೀಕ್ಷೆ ಹೊಂದಿದ್ದಾರೆ, ಮುಂಬರುವ ಯುಐ ಚಿತ್ರದ ಮೂಲಕ ನಟ-ನಿರ್ದೇಶಕ ಉಪೇಂದ್ರ ಅವರು ಭಾರೀ ಕಮಾಲ್ ಮಾಡುವುದು ನಿಶ್ಚಿತ ಎನ್ನಲಾಗುತ್ತಿದೆ.
ಲಕ್ಷ್ಮೀ-ಮಾಲಾಶ್ರೀ ಅವ್ರೆಲ್ಲ ಯಾವುದೇ ಕಂಪ್ಲೇಂಟ್ ಮಾಡ್ತಿರ್ಲಿಲ್ಲ, ಸಿನಿಮಾ ಪ್ರೀತಿ ಅಷ್ಟಿತ್ತು: ಕೆ ಮಂಜು!