
ಉಡುಪಿ (ಸೆ.16): ಕನ್ನಡದ ಪ್ರಾದೇಶಿಕ ಸಿನಿಮಾವೊಂದು ಪ್ಯಾನ್ ಇಂಡಿಯಾ ಮಟ್ಟಿಗೆ ಭರ್ಜರಿ ಯಶಸ್ವಿ ಕಂಡ ಸಿನಿಮಾ ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರ. ಇದೀಗ ಕಾಂತಾರ ಸಿನಿಮಾ ಎಲ್ಲ ವಿಭಾಗದಲ್ಲಿ ಭರ್ಜರಿ ಕಮಾಲ್ ಮಾಡಿದ ಬೆನ್ನಲ್ಲಿಯೇ ಕಾಂತಾರ ಪ್ರೀಕ್ವೆಲ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಆದರೆ, ಇದಕ್ಕೆ ಸ್ಥಳೀಯ ಕರಾವಳಿ ಜನತೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪಂಜುರ್ಲಿ ದೈವವನ್ನು ಸಿನಿಮಾಗಳಲ್ಲಿ ತೋರಿಸದಂತೆ ಸ್ಥಳೀಯರು ಸಿನಿಮಾ ನಿರ್ದೇಶಕರಿಗೆ ತಾಕೀತು ಮಾಡುತ್ತಿದ್ದಾರೆ.
ಹೌದು, ಕಾಂತಾರ ಪ್ರಿಕ್ವೆಲ್ಲಿಗೆ ಜನವಿರೋಧ ತೊಡಕ್ಕಾಗುತ್ತಿದೆ. ಸಿನಿಮಾಗಳಲ್ಲಿ ದೈವಗಳನ್ನು ತೋರಿಸುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಕಾಂತಾರದಲ್ಲಿ ಪಂಜುರ್ಲಿ ದೈವದ ಆರಾಧನೆ ತೋರಿಸಿದ ಪರಿಣಾಮ ಹಲವು ಸಿನಿಮಾಗಳ ನಿರ್ದೇಶಕರು ದೈವಾರಾಧನೆ ಬೆನ್ನು ಹತ್ತಿವೆ. ಮಂಗಳೂರು ಮೂಲದ ಕಲಾವಿದರಿಂದ ನಿರ್ಮಾಣಗೊಂಡಿರುವ ಕನ್ನಡ ಕಲ್ಜಿಗ ಸಿನಿಮಾದಲ್ಲಿ ಕೊರಗಜ್ಜನ ಕಾರಣಿಕವನ್ನು ತೋರಿಸಲಾಗಿದೆ. ಇದರಿಂದಾಗಿ ಕಾಂತಾರ ಸಿನಿಮಾ ಸೇರಿದಂತೆ ಯಾವುದೇ ಸಿನಿಮಾಗಳಲ್ಲಿ ದೈವಾರಾಧನೆಯನ್ನು ತೋರಿಸಬಾರದು ಎಂದು ಸ್ಥಳೀಯರು ಹಾಗೂ ತುಳುನಾಡು ದೈವಾರಾಧನೆ ಸಂರಕ್ಷಣಾ ವೇದಿಕೆಯಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಯುವರತ್ನ ಡ್ಯಾನ್ಸ್ ಕೋರಿಯೋಗ್ರಾಫರ್ ಮೇಲೆ ಬಲಾತ್ಕಾರ ಕೇಸ್!
ಇನ್ನು ಕಲ್ಜಿಗ ಸಿನಿಮಾದಲ್ಲಿ ಕೊರಗಜ್ಜನ ಕಾರಣಿಕ ತೋರಿಸಿದ್ದಕ್ಕೆ ವಿರೋಧ ವ್ಯಕ್ತವಾಗಿದೆ. ನಮ್ಮ ತುಳುನಾಡ ನಂಬಿಕೆ, ಆರಾಧನೆಗಳನ್ನು ಸಾಂಸ್ಕೃತಿಕ ಕಲೆ ಎಂದು ಬಿಂಬಿಸಲಾಗುತ್ತಿದೆ. ದೈವಗಳನ್ನು ಸಾಂಸ್ಕೃತಿಕ ಪ್ರದರ್ಶನ ಮಾಡುವುದನ್ನು ಕಾನೂನಾತ್ಮಕವಾಗಿ ನಿಷೇಧಿಸಬೇಕು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗಣೇಶೋತ್ಸವ ಕಾರ್ಯಕ್ರಮದ ವೇಳೆ ಪಂಜುರ್ಲಿ ದೈವದ ನರ್ತನ ಪ್ರದರ್ಶನ್ ಮಾಡಿರುವುದಕ್ಕೂ ಭಾರಿ ವಿರೋಧ ವ್ಯಕ್ತಪಡಿಸಲಾಗಿದೆ. ಇನ್ನು 2012ರಲ್ಲಿ ದೈವಗಳ ಆರಾಧನೆಯನ್ನು ಸಾಂಸ್ಕೃತಿಕ ಚಟುವಟಿಕೆಯಾಗಿ ತೋರಿಸುವುದಕ್ಕೆ ನಿಷೇಧಿಸಿ ಸುತ್ತೋಲೆ ಹೊರಡಿಸಿದ್ದರು. ಈ ಸುತ್ತೋಲೆ ಮರು ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ರಾಜ್ಯದ ಸಾಂಸ್ಕೃತಿಕತೆಯನ್ನು ಬಿಂಬಿಸುವ ಟ್ಯಾಬ್ಲೋ, ನಾಟಕ , ಸಿನಿಮಾ ಹಾಗೂ ಛದ್ಮವೇಷ ಗಳಲ್ಲಿ ದೈವಗಳ ಪ್ರದರ್ಶನ ಮತ್ತು ಯಕ್ಷಗಾನಗಳಲ್ಲಿ ದೈವಗಳ ವಿಡಂಬನೆಯನ್ನು ನಿಲ್ಲಿಸಬೇಕು. ಈಗ ಅಪರೂಪವಾಗಿ ಕಾಣಿಸುವ ದೈವನಿಂದನೆ ಪ್ರಕರಣಗಳು ಭವಿಷ್ಯದಲ್ಲಿ ಸಾಮಾನ್ಯವಾಗಿದೆ. ದೈವ ಸನ್ನಿಧಾನದ ಪವಿತ್ರತೆಗೆ ಇದರಿಂದ ಧಕ್ಕೆಯಾಗುತ್ತದೆ. ಕಲ್ಜಿಗ ಸಿನಿಮಾದವರು ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಿ ಪ್ರದರ್ಶಿಸಬೇಕು ಎಂದು ಸಂಘಟನೆಯ ಪ್ರಮುಖರಾದ ಸಹನಾ ಸೂಡ, ದಿಲ್ ರಾಜ್ ಆಳ್ವ ಸೇರಿದಂತೆ ಹಲವು ಸ್ಥಳೀಯ ಜನರು ಆಗ್ರಹ ಮಾಡಿದ್ದಾರೆ.
ಗಂಡನೇ ಗುರುವಾಗಿ ಕಲಿಸಿದ ಪಾಠ ಯಶಸ್ವಿ; ಗಿಚ್ಚಿ ಗಿಲಿಗಿಲಿ ರನ್ನರ್ ಆದ ತುಕಾಲಿ ಮಾನಸ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.