ಯುಬಿ ಸಿಟಿಯಲ್ಲಿ ಉಪೇಂದ್ರರ 'ಯುಐ' ಪ್ರೀ-ರಿಲೀಸ್ ಈವೆಂಟ್; ಅಭಿಪ್ರಾಯ ಏನಿದೆ?

By Shriram Bhat  |  First Published Dec 16, 2024, 9:04 PM IST

ಬಹಳ ವರ್ಷಗಳ ಬಳಿಕ ಉಪೇಂದ್ರ ಅವರು ನಿರ್ದೇಶನಕ್ಕೆ ಮರಳಿದ್ದು, ಈ ಕಾರಣಕ್ಕೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದಲ್ಲಿ ಜಾತೀಯತೆ, ರಾಜಕೀಯ ನಾಯಕರ ಅಪ್ರಬುದ್ಧತೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂಬ ಸುದ್ದಿ ಹಬ್ಬಿದೆ. ಆದರೆ ಈ ಸುದ್ದಿ ಅದೆಷ್ಟು ನಿಜ..


ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರ 'ಯುಐ' ಸಿನಿಮಾ (UI) ರಿಲೀಸ್‌ಗೆ ಇನ್ನು ಉಳಿದಿರುವುದು ಮೂರೇ ದಿನಗಳು. ಡಿಸೆಂಬರ್ 20ರಂದು ಪ್ರಪಂಚದಾದ್ಯಂತ ಬಿಡುಗಡೆ ಕಾಣಲಿರುವ ಯುಐ ಸಿನಿಮಾದ ದ ಪ್ರೀ ರಿಲೀಸ್ ಈವೆಂಟ್ ಇಂದು ಆಯೋಜನೆ ಅಗಿದೆ. ಬೆಂಗಳೂರಿನ ಯುಬಿ ಸಿಟಿಯ ಜೆಡಬ್ಲ್ಯೂ ಮ್ಯಾರೇಟ್ನಲ್ಲಿ ಅದ್ದೂರಿ ಈವೆಂಟ್ ಆಯೋಜಿಸಲಾಗಿದೆ. ಈ ಚಿತ್ರವನ್ನು ಸ್ವತಃ ಉಪೇಂದ್ರ ಅವರೇ ನಿರ್ದೇಶಿಸಿದ್ದು, ನಾಯಕರಾಗಿ ಕೂಡ ಅವರೇ ಕಾಣಿಸಿಕೊಂಡಿದ್ದಾರೆ. 

ಇಂದಿನ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಟರಾದ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಹಾಗೂ ದುನಿಯಾ ವಿಜಯ್ ಸೇರಿದಂತೆ ಹಲವರು ಆಗಮಿಸಿದ್ದಾರೆ. ಉಪ್ಪಿ ನಟಿಸಿ, ನಿರ್ದೇಶನ ಮಾಡಿರೋ ಯುಐ ಸಿನಿಮಾ, ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿರುವ ಚಿತ್ರವಾಗಿದೆ. ವಾರಗಳಿಂದ ಬಿರುಸಿನ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡವು ಇಂದು ಬೆಂಗಳೂರಿನಲ್ಲಿ ಅದ್ದೂರಿ ಈವೆಂಟ್ ಆಯೋಜನೆ ಮಾಡಿದೆ. 

Tap to resize

Latest Videos

ಬಿಗ್ ಬಾಸ್ ಕನ್ನಡ ಶೋ ಕೊರತೆ ಬಗ್ಗೆ ಕೊನೆಗೂ ಬಾಯ್ಬಿಟ್ಟ ಕಿಚ್ಚ ಸುದೀಪ್ ಹೇಳಿದ್ದೇನು?

ಯುಐ ಚಿತ್ರದಲ್ಲಿ ನಟ-ನಿರ್ದೇಶಕ ಉಪೇಂದ್ರ ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಚಿತ್ರದ ಬಗ್ಗೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿ ಕೂಡ ಭಾರೀ ನಿರೀಕ್ಷೆ ಮನೆಮಾಡಿದೆ. ಕಾರಣ, ಉಪೇಂದ್ರ ಅವರು ಟ್ರೆಂಡ್ ಸೆಟ್ಟರ್ ನಿರ್ದೇಶಕ ಎಂಬುದು ಎಲ್ಲರಿಗೂ ಗೊತ್ತು. ಈ ಮೊದಲು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಓಂ, ಎ ಹಾಗೂ ಉಪೇಂದ್ರ ಸೇರಿದಂತೆ ಬಹಳಷ್ಟು ಚಿತ್ರಗಳು ಗಳಿಕೆ ಹಾಗೂ ಜನಪ್ರಿಯತೆಯಲ್ಲಿ ದಾಖಲೆ ನಿರ್ಮಿಸಿವೆ. 

undefined

ಬಹಳ ವರ್ಷಗಳ ಬಳಿಕ ಉಪೇಂದ್ರ ಅವರು ನಿರ್ದೇಶನಕ್ಕೆ ಮರಳಿದ್ದು, ಈ ಕಾರಣಕ್ಕೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದಲ್ಲಿ ಸಾಮಾಜಿಕ ಅಸಮಾನತೆ, ರಾಜಕೀಯ ನಾಯಕರ ಅಪ್ರಬುದ್ಧತೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂಬ ಸುದ್ದಿ ಹಬ್ಬಿದೆ. ಆದರೆ ಈ ಸುದ್ದಿ ಅದೆಷ್ಟು ನಿಜ ಎಂಬುದು ಸಿನಿಮಾ ನೋಡಿದ ಮೇಲಷ್ಟೇ ಕನ್ಫರ್ಮ್ ಆಗಬೇಕಿದೆ. ಆದರೆ ಒಂದು ಮಾತಂತೂ ಸತ್ಯ, ಉಪೇಂದ್ರ ಅವರು ದೇಶದ ಸಮಸ್ಯೆ, ಸಮಾಜದಲ್ಲಿರುವ ಸಮಸ್ಯೆಯ ಬಗ್ಗೆಯಂತೂ ಖಂಡಿತವಾಗಿ ತಮ್ಮ ಸಿನಿಮಾದಲ್ಲಿ ಬೆಳಕು ಚೆಲ್ಲುವುದಂತೂ ಗ್ಯಾರಂಟಿ!

'ಪುಷ್ಪಾ 2' ಡಾನ್ಸ್‌ ಕುಣಿತದ ನಂತ್ರ ಶ್ರೀಲೀಲಾ ಕಥೆ ನೋಡಿ; ಹೀಗಾಗುತ್ತೆ ಅಂದ್ಕೊಂಡಿದ್ರಾ?

ಒಟ್ಟಿನಲ್ಲಿ, ಇನ್ನೇನು ನಾಲ್ಕನೇ ದಿನ ಬೆಳಗಾದರೆ ಉಪ್ಪಿಯವರ ಯುಐ ಚಿತ್ರವು ತೆರೆಯಲ್ಲಿ ನೋಡಲು ಲಭ್ಯವಿದೆ. ಭಾರೀ ನಿರೀಕ್ಷೆಯ ಈ ಚಿತ್ರವನ್ನು ಕನ್ನಡ ಸೇರಿದಂತೆ ಎಲ್ಲ ಸಿನಿಮಾಪ್ರಿಯರು ಕಣ್ತುಂಬಿಕೊಂಡು ಆನಂದಿಸಬಹುದು. ಚಿತ್ರವು ಕಂಟೆಂಟ್ ಹಾಗು ಮೇಕಿಂಗ್ ಎರಡರಲ್ಲೂ ವಿಶೇಷವಾದ ಕ್ವಾಲಿಟಿ ಹೊಂದಿದೆ ಎನ್ನಲಾಗುತ್ತಿದೆ. ಸಿನಿಮಾ ನೋಡಿದ ಮೇಲೆ ಸದ್ಯ ಹಬ್ಬಿರುವ ಎಲ್ಲಾ ಸುದ್ದಿಗಳ ಅಸಲಿಯತ್ತೇನು ಎಂಬುದು ಬಹಿರಂಗವಾಗಲಿದೆ. 

click me!