
ನಟಿ ಹರಿಪ್ರಿಯಾ ಕಿರುತೆರೆಗೆ ಬರುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸದ್ಯದಲ್ಲೇ ಮೂಡಿ ಬರಲಿರುವ ‘ಡ್ಯಾನ್ಸ್ ಡ್ಯಾನ್ಸ್’ ಹೆಸರಿನ ರಿಯಾಲಿಟಿ ಶೋಗೆ ತೀರ್ಪುಗಾರರಾಗಿ ಬರುತ್ತಿದ್ದು, ಇದರ ಮೊದಲ ಎಪಿಸೋಡ್‌ಗೆ ನಟಿ ಹರಿಪ್ರಿಯಾ ಡ್ಯಾನ್ಸ್ ಕೂಡ ಮಾಡಿದ್ದಾರೆ.
‘ಈ ಹಿಂದೆಯೇ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುವ ಅವಕಾಶ ಬಂದಿತ್ತು. ಆಗ ಆಗಲಿಲ್ಲ. ನಾನು ಡ್ಯಾನ್ಸ್ ಮೂಲಕವೇ ಚಿತ್ರರಂಗಕ್ಕೆ ಬಂದಿದ್ದು. ಕಿರುತೆರೆಯಲ್ಲಿ ನನ್ನ ಮೊದಲ ರಿಯಾಲಿಟಿ ಶೋ ಕೂಡ ನೃತ್ಯವನ್ನು ಆಧರಿಸಿದ್ದು. ಒಳ್ಳೆಯ ಕಾನ್ಸೆಪ್ಟ್‌ಗಳನ್ನು ಇಟ್ಟುಕೊಂಡು ರಿಯಾಲಿಟಿ ಶೋ ರೂಪಿಸುತ್ತಿದ್ದಾರೆ. ಇಂಥ ಶೋಗೆ ಜಡ್ಜ್ ಆಗಿದ್ದೇನೆ.
'ಅಮೃತಮತಿ'ಗೆ ಪ್ರಶಸ್ತಿ: ಭಾವುಕರಾದ ಹರಿಪ್ರಿಯಾ!
ಸಿನಿಮಾ ಹಾಗೂ ಕಿರುತೆರೆ ಎರಡೂ ನಿಭಾಯಿಸಬಹುದು ಎನ್ನುವ ಕಾರಣಕ್ಕೆ ಕಿರುತೆರೆಗೆ ಬಂದೆ’ ಎನ್ನುತ್ತಾರೆ ನಟಿ ಹರಿಪ್ರಿಯಾ. ಪ್ರಜ್ವಲ್ ದೇವರಾಜ್, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಉಳಿದ ಇಬ್ಬರು ತೀರ್ಪುಗಾರರು. ಬಿಗ್‌ಬಾಸ್ ವಿನ್ನರ್ ಶೈನ್ ಶೆಟ್ಟಿನಿರೂಪಣೆ ಮಾಡಲಿದ್ದಾರೆ.
ಇಂಡಸ್ಟ್ರಿಯಲ್ಲಿ ಹರಿಪ್ರಿಯಾ ಎಂದು ಕರೆಯಲ್ಪಡುವ ಶ್ರುತಿ ಚಂದ್ರಸೇನ ಭಾರತೀಯ ಚಲನಚಿತ್ರ ನಟಿಯಾಗಿದ್ದು ರೂಪದರ್ಶಿಯಾಗಿಯೂ ಕೆಲಸ ಮಾಡುತ್ತಾರೆ. ಅವರು ಮುಖ್ಯವಾಗಿ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಅವರು ತಮಿಳು, ಮಲಯಾಳಂ ಮತ್ತು ತುಳು ಹಾಗೂ ಹಲವಾರು ಪ್ರಾದೇಶಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.