ನಾನು ಆಟವಾಡಿದ್ದು ಸ್ಕ್ರೀನ್​ ಮೇಲಷ್ಟೇ: ಜೀವನದಲ್ಲಿ ಆಡಿದ್ದೇ ಇಲ್ಲ- ಮಗನ ಕಾಲೆಳೆಯುತ್ತಲೇ ರವಿಚಂದ್ರನ್​ ಏನಂದ್ರು ನೋಡಿ

Published : Aug 31, 2026, 10:31 PM IST
Ravichandran and Vikram Ravichandran

ಸಾರಾಂಶ

ನಟ ವಿಕ್ರಂ ರವಿಚಂದ್ರನ್ ಅವರು 'ಮುಧೋಳ್' ಚಿತ್ರದ ಮೂಲಕ ಐದು ವರ್ಷಗಳ ನಂತರ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಕ್ರೇಜಿಸ್ಟಾರ್ ರವಿಚಂದ್ರನ್, ತಮ್ಮ ಮಗನ ಕಾಲೆಳೆಯುತ್ತಾ, ತಮ್ಮ ಜೀವನದ ಆಟಗಳು ಕೇವಲ ತೆರೆಯ ಮೇಲೆ ಮಾತ್ರ, ನಿಜ ಜೀವನದಲ್ಲಿ ಮಕ್ಕಳಿಗಾಗಿ ಬದುಕಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಫಲಿತಾಂಶದ ಬಗ್ಗೆ ಚಿಂತಿಸದೆ ಶ್ರಮಪಟ್ಟು ಕೆಲಸ ಮಾಡುವಂತೆ ಮಕ್ಕಳಿಗೆ ಜೀವನ ಪಾಠವನ್ನು ಹೇಳಿದ್ದಾರೆ.

ಕ್ರೇಜಿಸ್ಟಾರ್​ ಎಂದೇ ಫೇಮಸ್​ ಆಗಿರೋ ನಟ ರವಿಚಂದ್ರನ್ ಅವರು ಸದಾ ಪ್ರೀತಿ, ಪ್ರೇಮ, ರೊಮಾಂಟಿಕ್​ ಸಿನಿಮಾಗಳಿಂದಲೇ ಫೇಮಸ್​. ರವಿಚಂದ್ರನ್​ ಸಿನಿಮಾದಲ್ಲಿ ಇದ್ದಾರೆ ಎಂದರೆ ಅಲ್ಲಿ ಇರೋದು ರೊಮಾನ್ಸ್​ ಎಂದೇ ಹೇಳುವಷ್ಟರ ಮಟ್ಟಿಗೆ ಅವರು ಫೇಮಸ್​. ಇಂತಿಪ್ಪ ರವಿಚಂದ್ರನ್​ ಅವರ ಪುತ್ರ ವಿಕ್ರಂ ರವಿಚಂದ್ರನ್ ಸುದೀರ್ಘ ಐದು ವರ್ಷಗಳ ಬ್ರೇಕ್‌ನ ಬಳಿಕ ಕೊನೆಗೂ ತಮ್ಮ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈಚೆಗಷ್ಟೇ ಅವರು ತಮ್ಮ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡು ತಮ್ಮ ʻಮುಧೋಳ್ʼ ಸಿನಿಮಾದ ಬಗ್ಗೆ ಅಪ್​ಡೇಟ್​ ಕೊಟ್ಟಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಿಕ್ರಂ ಅವರು, ʻಮುಧೋಳ್ʼ ಸಿನಿಮಾ ಪಕ್ಕಾ ಕಮರ್ಷಿಯಲ್ ಹಾಗೂ ಸಸ್ಪೆನ್ಸ್ ಓರಿಯೆಂಟೆಡ್ ಶೈಲಿಯಲ್ಲಿ ಮೂಡಿಬಂದಿದೆ ಎಂದು ತಿಳಿಸಿದರು. ʻಗುಚ್ಚಿ ಗರ್ಲ್ʼ ಹಾಡಿನಲ್ಲಿ ನಾಯಕಿ ಸಂಜನಾ ಆನಂದ್ ಹಾಗೂ ಇಷಿತಾ ರಾಜ್ ಪ್ರಮುಖವಾಗಿ ನರ್ತಿಸಿದ್ದು, ತಾವು ಕೂಡ ಒಂದೆರಡು ಸ್ಟೆಪ್ ಹಾಕಿರುವುದಾಗಿ ಹಂಚಿಕೊಂಡಿದ್ದಾರೆ.

ಮಗನ ಕಾಲೆಳೆದ ನಟ

ಮಗ ಸಿನಿಮಾಕ್ಕೆ ರೆಡಿ ಆಗ್ತಿರುವಾಗಲೇ ವೇದಿಕೆಯೊಂದರಲ್ಲಿ ಮಗ ವಿಕ್ರಂ ಬಗ್ಗೆ ತಮಾಷೆಯ ವಿಷಯಗಳನ್ನು ಹಂಚಿಕೊಂಡ ರವಿಚಂದ್ರನ್​ ಅವರು, ಎಲ್ಲರ ಎದುರೇ ಮಗನ ಕಾಲೆಳೆದರು. ನಾನು ಮೂರುವರೆಗೆ ಎದ್ದೇಳ್ತೇನೆ. ಅವನು 9 ಗಂಟೆಗೆ ಏಳ್ತಾನೆ. ಈಗಿನ ಜನರೇಷನ್​ ಏನೂ ಮಾಡಲು ಆಗುವುದಿಲ್ಲ, ಅವರಿಗೆ ಎದ್ದೇ ಅಭ್ಯಾಸ ಇರೋದಿಲ್ಲ ಎಂದು ತಮಾಷೆ ಮಾಡಿದರು. ಕೊನೆಗೆ, ಈಗಿನ ಜನರೇಷನ್​ ಮತ್ತು ತಮ್ಮ ಕಾಲದ ಬಗ್ಗೆ ಮಾತನಾಡಿದ ನಟ, 'ನಾನು ಏನೇ ಆಟ ಆಡಿದ್ರೂ ಅದು ಸ್ಕ್ರೀನ್​ ಮೇಲೆ ಆಡಿದ್ದು, ನಿಜ ಜೀವನದಲ್ಲಿ ನನಗೆ ಆಡಿದ್ದೇ ಇಲ್ಲ' ಎಂದರು. ನಾನು ಪ್ರತಿ ಆಟ ಆಡಿದ್ದೂ ನಮ್ಮ ಮಕ್ಕಳಿಗಾಗಿ ಮಾತ್ರ. ಇಂದಿಗೂ ನನಗೋಸ್ಕರ ಜೀವನದಲ್ಲಿ ಆಟ ಆಡಲೇ ಇಲ್ಲ ಎಂದಾಗ ಅಲ್ಲಿದ್ದ ಅಭಿಮಾನಿಗಳು ಬಿದ್ದೂ ಬಿದ್ದೂ ನಕ್ಕರು.

ಜೀವನದ ಪಾಠ

ಕೊನೆಗೆ ಜೀವನದ ಪಾಠ ಮಾಡಿದ ನಟ ರವಿಚಂದ್ರನ್,ನಮಗೆಲ್ಲಾ ಜನ ನನ್ನ ಸಿನಿಮಾ ನೋಡಿ ಖುಷಿ ಪಟ್ಟರೆ ಅಷ್ಟೇ ಖುಷಿಯಾಗಿತ್ತು. ಇವತ್ತಿಗೂ ನಾನು ನನ್ನ ಮಕ್ಕಳಿಗೆ ಹೇಳಿಕೊಡೋದು ಇಷ್ಟೇ. ಗೆಲ್ಲಿ ಅಂತ ಹೇಳ್ತಿಲ್ಲ, ಒಳ್ಳೆಯ ಸಿನಿಮಾ ಮಾಡ್ರಪ್ಪ ಎಂದು ಹೇಳಿಕೊಡ್ತೀನಿ, ನಿಮ್ಮ ಫಲಿತಾಂಶವನ್ನು ನೀವೇ ನಿರ್ಧರಿಸಿದಾಗ, ವಿಧಿ ಬೇರೆಯದ್ದೇ ಬರೆದಿರುತ್ತದೆ. ಅದಕ್ಕಾಗಿ ಫಲಿತಾಂಶಕ್ಕೆ ಕಾಯಬೇಡಿ. ಅದು ನಮ್ಮ ಕೈಯಲ್ಲಿ ಇರುವುದಿಲ್ಲ. ಚೆನ್ನಾಗಿ ಶ್ರಮ ವಹಿಸಿ ದುಡಿಯಿರಿ ಎಂದೇ ಹೇಳಿಕೊಡುತ್ತೇನೆ ಎಂದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಸ್ಪತ್ರೆಯಲ್ಲಿ ಕಂಡ ಸಾವು-ಬದುಕು: ನಟಿ ಶ್ರೀಲೀಲಾ ನಟನೆಯನ್ನೇ ಬದಲಿಸಿದ ಆ ಅನುಭವವೇನು?
ಹುಟ್ಟುಹಬ್ಬಕ್ಕೆ ʻಕಿಂಗ್‌-ಸೈಜ್ʼ ಗಿಫ್ಟ್: ಶ್ರೀ ಕೃಷ್ಣದೇವರಾಯನ ಪಾತ್ರದಲ್ಲಿ ಕಿಚ್ಚ ಸುದೀಪ್‌?