'ಸಿನಿಮಾ ತಡವಾದ್ರೆ ಏನಾಗುತ್ತೆ?' ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಹೇಳಿಕೊಂಡ ಸೀಕ್ರೆಟ್ ಇಲ್ಲಿದೆ ನೋಡಿ!

Published : Aug 31, 2026, 07:21 PM IST
Kichcha Sudeep

ಸಾರಾಂಶ

"ಸಿನಿಮಾ ಕೊಟ್ಟೇ ತೀರಬೇಕು ಎಂಬ ಹಠಕ್ಕೆ ಬಿದ್ದು, ಕೇವಲ ಐದೂವರೆ ತಿಂಗಳಲ್ಲಿ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಮುಗಿಸಿದ್ದೇನೆ. ಕಳೆದ 120 ದಿನಗಳ ಕಾಲ 80 ಲೊಕೇಶನ್‌ಗಳು ಮತ್ತು 22 ಸೆಟ್‌ಗಳಲ್ಲಿ ಹಗಲಿರುಳು ನಿದ್ದೆಗೆಟ್ಟು ಕೆಲಸ ಮಾಡಿದ್ದೇವೆ.' ಎಂದಿದ್ದಾರೆ ಸುದೀಪ್. ಇನ್ನೇನು ಹೇಳಿದ್ದಾರೆ ನೋಡಿ..

Sudeep movie delay statement: Kiccha Sudeep upcoming movie Billa Ranga Baashaa first cut comes out on September 2nd Sudeep birthday-ಕಿಚ್ಚನ ಎಮೋಷನಲ್ ಮಾತು: "ಸಿನಿಮಾ ಲೇಟ್ ಆದ್ರೆ ನನಗಾಗೋ ನೋವು ಯಾರಿಗೂ ಆಗಲ್ಲ!" - ಅಭಿಮಾನಿಗಳ ಪ್ರಶ್ನೆಗೆ ಸುದೀಪ್ ನೀಡಿದ ಖಡಕ್ ಮತ್ತು ಭಾವುಕ ಉತ್ತರ ಇಲ್ಲಿದೆ!

ಸ್ಯಾಂಡಲ್‌ವುಡ್‌ನ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಎಂದರೆ ಕೇವಲ ನಟನಲ್ಲ, ಕೋಟ್ಯಂತರ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಇತ್ತೀಚೆಗೆ ನಡೆದ 'ಬಿಗ್ ಬಾಸ್ ಕನ್ನಡ ಸೀಸನ್ 13' ರ ಅದ್ಧೂರಿ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಕೇವಲ ಕಿರುತೆರೆಯ ಬಗ್ಗೆ ಮಾತ್ರವಲ್ಲದೆ, ತಮ್ಮ ಬೆಳ್ಳಿತೆರೆಯ ಪಯಣದ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ. ವಿಶೇಷವಾಗಿ, ತಮ್ಮ ಸಿನಿಮಾಗಳು ತಡವಾಗುತ್ತಿರುವ ಕುರಿತು ಅಭಿಮಾನಿಗಳಿಗಿದ್ದ ಬೇಸರಕ್ಕೆ ಸುದೀಪ್ ನೀಡಿದ ಭಾವುಕ ಸ್ಪಷ್ಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

"ನಾನೂ ಒಬ್ಬ ಸಾಮಾನ್ಯ ಮನುಷ್ಯ"

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, "ಅಭಿಮಾನಿಗಳು ವರ್ಷಕ್ಕೆ ಕನಿಷ್ಠ ಎರಡು ಸಿನಿಮಾಗಳನ್ನು ನಿರೀಕ್ಷಿಸುತ್ತಾರೆ, ಆದರೆ ನಿಮ್ಮ ಚಿತ್ರಗಳು ತಡವಾಗುತ್ತಿವೆ. ಇದಕ್ಕೆ ನಿಮ್ಮ ಪ್ಲಾನಿಂಗ್ ಏನು?" ಎಂದು ಕೇಳಿದಾಗ, ಸುದೀಪ್ ಅವರ ಕಣ್ಣಲ್ಲಿ ಒಂದು ಕ್ಷಣ ಭಾವುಕತೆ ಮಿಂಚಿತು. "ನನ್ನ ಮಾತು ನಂಬಿ, ಯಾವುದಾದರೂ ವರ್ಷ ನನ್ನ ಸಿನಿಮಾ ಬಿಡುಗಡೆಯಾಗಲಿಲ್ಲ ಎಂದರೆ, ಎಲ್ಲರಿಗಿಂತ ಹೆಚ್ಚು ಬೇಸರ ಮತ್ತು ಸಂಕಟವಾಗುವುದು ನನಗೆ. ನಾನು ಸಿನಿಮಾ ಮಾಡುತ್ತಿಲ್ಲ ಎಂದರೆ ಎಲ್ಲೋ ಪ್ರವಾಸದಲ್ಲಿದ್ದೇನೆ ಅಥವಾ ಪಾರ್ಟಿ ಮಾಡುತ್ತಿದ್ದೇನೆ ಎಂದರ್ಥವಲ್ಲ. ದುರದೃಷ್ಟವಶಾತ್ ನಾನೂ ಒಬ್ಬ ಸಾಮಾನ್ಯ ಮನುಷ್ಯ, ನನಗೂ ವೈಯಕ್ತಿಕ ಜವಾಬ್ದಾರಿಗಳಿವೆ, ನೋವುಗಳಿವೆ" ಎಂದು ಹೇಳುವ ಮೂಲಕ ತಮ್ಮ ಜೀವನದ ಮಗದೊಂದು ಮಗ್ಗುಲನ್ನು ತೆರೆದಿಟ್ಟರು.

ನಿದ್ದೆಗೆಟ್ಟು ಮಾಡಿದ ಕೆಲಸದ ರಿಪೋರ್ಟ್ ಕಾರ್ಡ್!

ಸಿನಿಮಾ ವಿಳಂಬದ ಬಗ್ಗೆ ಮಾತನಾಡುತ್ತಾ, ತಮ್ಮ ಪರಿಶ್ರಮದ ಬಗ್ಗೆಯೂ ಸುದೀಪ್ ಮಾಹಿತಿ ನೀಡಿದರು. "ಸಿನಿಮಾ ಕೊಟ್ಟೇ ತೀರಬೇಕು ಎಂಬ ಹಠಕ್ಕೆ ಬಿದ್ದು, ಕೇವಲ ಐದೂವರೆ ತಿಂಗಳಲ್ಲಿ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಮುಗಿಸಿದ್ದೇನೆ. ಕಳೆದ 120 ದಿನಗಳ ಕಾಲ 80 ಲೊಕೇಶನ್‌ಗಳು ಮತ್ತು 22 ಸೆಟ್‌ಗಳಲ್ಲಿ ಹಗಲಿರುಳು ನಿದ್ದೆಗೆಟ್ಟು ಕೆಲಸ ಮಾಡಿದ್ದೇವೆ. ಇಷ್ಟೆಲ್ಲಾ ಕಷ್ಟಪಟ್ಟು ರೂಪಿಸಿಕೊಂಡ ನನ್ನ ವೃತ್ತಿಜೀವನ ಮತ್ತು ಸಿನಿಮಾವನ್ನು ನಾನು ನಿರ್ಲಕ್ಷಿಸಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದರು. ಸ್ಕ್ರಿಪ್ಟ್‌ಗಳು ರದ್ದಾಗುವುದು ಅಥವಾ ವೈಯಕ್ತಿಕ ಸಮಸ್ಯೆಗಳು ಎದುರಾದಾಗ ಸಿನಿಮಾ ತಡವಾಗುವುದು ಸಹಜ, ಆದರೆ ಕ್ಯಾಮೆರಾ ಮುಂದೆ ನಿಲ್ಲುವುದೇ ತಮಗೆ ಪರಮ ಸುಖ ಎಂದು ಅವರು ಸ್ಪಷ್ಟಪಡಿಸಿದರು.

ಹುಟ್ಟುಹಬ್ಬಕ್ಕೆ 'ಬಿಲ್ಲ ರಂಗ ಭಾಷಾ' ಧಮಾಕಾ!

ಸುದೀಪ್ ಅವರ ಮಾತುಗಳಿಂದ ಬೇಸರಗೊಂಡಿದ್ದ ಅಭಿಮಾನಿಗಳಿಗೆ ಈಗ ದೊಡ್ಡ ಸಿಹಿ ಸುದ್ದಿಯೊಂದು ಸಿಕ್ಕಿದೆ. ಬಹುನಿರೀಕ್ಷಿತ 'ಬಿಲ್ಲ ರಂಗ ಭಾಷಾ' ಚಿತ್ರದ 'ಫಸ್ಟ್ ಕಟ್' (First Cut) ಸುದೀಪ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಅಂದರೆ ಸೆಪ್ಟೆಂಬರ್ 2 ರಂದು (ಸೆಪ್ಟೆಂಬರ್ 1ರ ಮಧ್ಯರಾತ್ರಿ) ಬಿಡುಗಡೆಯಾಗಲಿದೆ. 'ವಿಕ್ರಾಂತ್ ರೋಣ' ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ಅತ್ಯಂತ ದೊಡ್ಡ ಬಜೆಟ್‌ನ ಚಿತ್ರ ಎನ್ನಲಾಗಿದೆ.

ಈ ಸುದ್ದಿಯ ಜೊತೆಗೆ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ 'ಪೀಪಲ್ ಮೀಡಿಯಾ ಫ್ಯಾಕ್ಟರಿ' ಜೊತೆಗೂ ಸುದೀಪ್ ಹೊಸ ಸಿನಿಮಾ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಕಿಚ್ಚನ ಭಾವುಕ ಮಾತುಗಳು ಅವರ ಬದ್ಧತೆಯನ್ನು ತೋರಿಸಿದರೆ, ಹೊಸ ಚಿತ್ರಗಳ ಅಪ್‌ಡೇಟ್‌ಗಳು ಅಭಿಮಾನಿಗಳಲ್ಲಿ ಸಂಭ್ರಮದ ಕಿಚ್ಚು ಹಚ್ಚಿವೆ. ಈ ಬಾರಿ ಸುದೀಪ್ ಕೇವಲ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ಚಿತ್ರಮಂದಿರಗಳಲ್ಲೂ ಅಬ್ಬರಿಸಲು ಸಜ್ಜಾಗಿದ್ದಾರೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇದ್ದಕ್ಕಿದ್ದಂತೆ ಯಶ್‌ಗೆ ಪತ್ರ ಬರೆದ ಸುಮಲತಾ ಅಂಬರೀಷ್.. 'ಟಾಕ್ಸಿಕ್' ಬಗ್ಗೆ ಹೀಗ್ಯಾಕೆ ಅಂದ್ರು?
ತುಂಬಾ ಅಹಂಕಾರದಿಂದ ವರ್ತಿಸುತ್ತಿದ್ದೆ, ಯಾರನ್ನೂ ಲೆಕ್ಕಿಸಿರಲಿಲ್ಲ: 'ನೀಲಕಂಠ' ನಟಿ ನಮಿತಾ