ಎಲ್ಲರ ಬದುಕಲ್ಲೂ ಒಂದು ಟರ್ನಿಂಗ್ ಪಾಯಿಂಟ್ ಬಂದೇ ಬರುತ್ತದೆ. ಆಗ ಎಚ್ಚೆತ್ತುಕೊಂಡರೆ ಹೊಸ ದಾರಿ ಶುರುವಾಗುತ್ತದೆ. ಶ್ರದ್ಧಾ ಶ್ರೀನಾಥ್ ತನ್ನ ಬದುಕು ಬದಲಾಗುವುದಕ್ಕೆ ಕಾರಣವಾದ ಕತೆ ಬರೆದಿದ್ದಾರೆ. ನಾಯಕ ನಟಿಯರು ಇಂಥಾ ಕತೆ ಬರೆಯುವುದು ಅಪರೂಪ. ಅವರ ಈ ಸ್ಟೋರಿ ನಿಜಕ್ಕೂ ಸ್ಫೂರ್ತಿದಾಯಕ.
A post shared by Shraddha Srinath (@shraddhasrinath) on Oct 20, 2019 at 9:39am PDT
ಫೋಟೋ 01; 2014ರಲ್ಲಿ ಬಾಲಿ
ನನ್ನ ಮೊದಲ ವಿದೇಶ ಪ್ರವಾಸದಲ್ಲಿ ತೆಗೆದ ಫೋಟೋ ಇದು. ಒಂದು ವರ್ಷ ವಕೀಲಿಕೆ ಕೆಲಸ ಮಾಡಿದೆ. ಈ ಕೆಲಸದಿಂದಾಗಿ ಒಳ್ಳೆಯ ದುಡ್ಡು ಬಂತು ಮತ್ತು ನಾನು ಇದ್ದಕ್ಕಿದ್ದಂತೆ ಆ ದುಡ್ಡನ್ನು ನನಗೆ ಬೇಕಾದಂತೆ ಖರ್ಚು ಮಾಡತೊಡಗಿದೆ. ನನ್ನ ಜೀವನಕ್ರಮ ಬದಲಾಯಿತು. ಆಹಾರ, ಬಟ್ಟೆ, ತಿರುಗಾಟ, ಸಿನಿಮಾ ಇತ್ಯಾದಿಗಳಿಗೆ ಮೊದೆಲ್ಲಾ ದುಡ್ಡು ಖರ್ಚು ಮಾಡುತ್ತಿರಲಿಲ್ಲ. ಈಗ ಅದೇ ಅಭ್ಯಾಸವಾಯಿತು. ನನ್ನ ಜೀವನದಲ್ಲಿ ಅತಿ ಹೆಚ್ಚು ತೂಕ ಹೊಂದಿದ್ದ ಸಮಯ ಅದು. ತಿಂಗಳಿಗೊಂದ್ಸಲ ಎಕ್ಸರ್‌ಸೈಸ್ ಮಾಡುತ್ತಿದ್ದೇನೋ ಏನೋ. ಖುಷಿಯಿಂದ ಮತ್ತು ಯಾವುದೇ ಚಿಂತೆಯಿಲ್ಲದೆ ಎಲ್ಲವನ್ನೂ ತಿನ್ನುತ್ತಿದೆ. ನನಗೆ ಇಷ್ಟ ಬಂದ ದಿರಿಸು ಧರಿಸುತ್ತಿದ್ದೆ. ಆದರೆ ನನ್ನನ್ನು ನಾನು ಯಾವತ್ತೂ ಚೆನ್ನಾಗಿಲ್ಲ ಅಂದುಕೊಳ್ಳಲಿಲ್ಲ. ಬೇರೆಯವರಿಗಿಂತ ಕಡಿಮೆ ಎಂದು ಭಾವಿಸಲಿಲ್ಲ.
ಫಾರೆಸ್ಟ್ ಆಫೀಸರ್ ಹಿಂದೆ ಬಿದ್ದ ಶ್ರದ್ಧಾ ಶ್ರೀನಾಥ್ ?
ವ್ಯಾಯಾಮ ಮಾಡುವುದಕ್ಕೆ ಉದಾಸೀನ ಆಗುತ್ತಿತ್ತು. ಆದರೆ ಈ ಫೋಟೋ ನೋಡಿದ ಮೇಲೆ ಎಲ್ಲವೂ ಬದಲಾಯಿತು. ಹೀಗೆ ಕಾಣುವಷ್ಟು ದೊಡ್ಡವಳೇನಲ್ಲ ನಾನು ಎಂದು ಅರಿವಾಯಿತು. ಮರುದಿನವೇ ನನ್ನ ಅಪಾರ್ಟ್‌ಮೆಂಟಿನ ಜಿಮ್‌ಗೆ ಹೋದೆ. ಟ್ರೆಡ್ ಮಿಲ್ ಹತ್ತಿದೆ. ಓಡಿದೆ ಓಡಿದೆ ಓಡಿದೆ. ಮೊದಲು ಐದು ನಿಮಿಷ ಓಡುತ್ತಿದ್ದ. ದಿನ
ಕಳೆದಂತೆ 15 ನಿಮಿಷ ಓಡತೊಡಗಿದೆ. ಅಭ್ಯಾಸವಾಗುತ್ತಿದ್ದ ಹಾಗೆ 40 ನಿಮಿಷ ನಿರಂತರವಾಗಿ ಓಡುವಷ್ಟು ಶಕ್ತಿ ಪಡೆದೆ.
ಪೋಟೋ 02ರ ಮೇಯಲ್ಲಿ ಡಾರ್ಜಿಲಿಂಗ್
ಐದು ವರ್ಷದ ನಂತರ ತೆಗೆದ ಫೋಟೋ. ಆ ಫೋಟೋದಲ್ಲಿನ ನನ್ನ ತೂಕಕ್ಕೂ ಈ ಫೋಟೋ ತೆಗದಾದ ಇದ್ದ ತೂಕಕ್ಕೂ 18 ಕೆಜಿ ವ್ಯತ್ಯಾಸ ಇದೆ. ಅಷ್ಟು ತೂಕ ಇಳಿಸಿಕೊಂಡಿದ್ದೇನೆ. ಅದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೇನೆ ಕೂಡ. ಬೆಳಿಗ್ಗೆ 4.20ಕ್ಕೆ ಎದ್ದಿದ್ದೇನೆ. ದಿನಕ್ಕೆ ಎರಡು ಬಾರಿ ಜಿಮ್‌ಗೆ ಹೋಗಿದ್ದೇನೆ. ಡಯಟ್‌ಗಳನ್ನು ಪಾಲಿಸಿದ್ದೇನೆ. ಹಾಗಂತ ನಾನು ಭಾರಿ ಫಿಟ್ ಆಗಿದ್ದೇನೆ ಅಂತಲ್ಲ.ಎಕ್ಸರ್‌ಸೈಸ್ ತಪ್ಪಿಸುವುದೂ ಇದೆ. ಆಹಾರಗಳ ಬಗ್ಗೆ ಈಗ ಹೆಚ್ಚು ತಿಳಿದುಕೊಂಡಿದ್ದೇನೆ.
4 ತಿಂಗಳಲ್ಲಿ 26 ಕೆ.ಜಿ ತೂಕ ಇಳಿಸಿದ ಸಾನಿಯಾ!
ಕ್ಯಾಲರಿ ಕಡಿಮೆಯಾದರೆ ಏನಾಗುತ್ತದೆ, ಸ್ಟ್ರೆಂತ್ ಟ್ರೈನಿಂಗ್ ಎಂದರೇನು ಎಂಬುದೆಲ್ಲಾ ಗೊತ್ತಾಗಿದೆ. ಆದರೆ ತಿನ್ನುವ ಆಹಾರದ ಜತೆಗೆ ಅಷ್ಟೇನೂ ಒಳ್ಳೆಯದಲ್ಲದ
ಸಂಬಂಧವನ್ನು ಬೆಳೆಸಿಕೊಂಡಿದ್ದೇನೆ. ನನಗಿಷ್ಟದ ತಿಂಡಿಗಳು, ಆರೋಗ್ಯಕರ ಆಹಾರ ಮತ್ತು ಎಕ್ಸರ್‌ಸೈಸ್ ಈ ಮೂರರ ಮಧ್ಯೆ ಬ್ಯಾಲೆನ್ಸ್ ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ,
ಆದರೆ ಪ್ರಯತ್ನ ಜಾರಿಯಲ್ಲಿದೆ.
ಇದೆಲ್ಲಾ ಯಾಕೆ ಮಾಡಿದೆ ಎಂದು ಕೇಳಿಕೊಂಡರೆ ಚೆಂದ ಕಾಣಲು ಅಂತ ಸುಲಭವಾಗಿ ಹೇಳಬಹುದು. ಆದರೆ ಅದು ಜೀವನದ ಗುರಿಯಾಗಬಾರದು. ಚೆಂದ ಕಾಣಬೇಕು ಅನ್ನುವುದಕ್ಕೆ ಕೊನೆ ಅನ್ನುವುದಿಲ್ಲ. ನೀವು ಹೊಟ್ಟೆ ಕರಗಿಸಬೇಕು, ನಾನು ಧರಿಸಿದ ಡ್ರೆಸ್‌ನಲ್ಲಿ ಬೇರೆಯವರು ಬಹಳ ಚೆಂದ ಕಾಣುತ್ತಾರೆ ಅಂತ ಯೋಚಿಸುತ್ತಲೇ ಇರುತ್ತೀರಿ. ಸೋಷಲ್ ಮೀಡಿಯಾಗಳು ಉಂಟು ಮಾಡುವ ಇನ್‌ಸೆಕ್ಯುರಿಟಿಯಿಂದ ಪಾರಾಗಲು ಏನೇನೋ ಮಾಡಿ ಆಮೇಲೆ ಕಷ್ಟ ಪಡುವಂತೆಯೂ ಆಗಬಹುದು. ಆದರೆ ನಾನು ಹೇಳುವುದಿಷ್ಟೇ- ಹೃದಯ ಸರಿಯಾಗಿ ಕೆಲಸ ಮಾಡುವುದಕ್ಕೆ, ಮೊಣಕಾಲು ಕೊನೆಯವರೆಗೂ ನಿಮ್ಮ ಭಾರವನ್ನು ಹೊರುವುದಕ್ಕೆ ಏನೇನು ಮಾಡಬೇಕೋ ಅದನ್ನು ಮಾಡಿ ಸಾಕು. ಆರೋಗ್ಯಕರ ಜೀವನಕ್ಕೆ ಮತ್ತು ಒಳ್ಳೆಯ ನಿದ್ರೆ ಬರಲು ಎಷ್ಟು ಮಾಡಬೇಕೋ ಅಷ್ಟು ಮಾಡಿ. ನಿಮಗಾಗಿ ಮಾಡಿ, ಸೋಷಿಯಲ್ ಮೀಡಿಯಾಗಲ್ಲ