ಬಾಲಿವುಡ್‌ನಲ್ಲಿ ಹವಾ ಎಬ್ಬಿಸುತ್ತಿರುವ ರಶ್ಮಿಕಾ ಮಂದಣ್ಣ ಫೋಟೋ ವೈರಲ್. ಆಲ್ಬಂ ಸಾಂಗ್‌ನ ಲುಕ್ ರಿವೀಲ್....
ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೇ ಇದೀಗ ಬಾಲಿವುಡ್‌ನಲ್ಲಿಯೂ ಧೂಳೆಬ್ಬೆಸಿಲು ಹೊರಟಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಬಾದ್ ಷಾ- ರಶ್ಮಿಕಾ ಕಾಂಬಿನೇಷನ್ ವರ್ಕ್ ಆಗುತ್ತಾ?
ಬಾಲಿವುಡ್ ಖ್ಯಾತ rapper ಬಾದ್ ಷಾ ಪ್ರತಿಯೊಂದೂ ಹಾಡು ದೊಡ್ಡ ಮಟ್ಟದಲ್ಲಿ ದಾಖಲೆ ನಿರ್ಮಿಸುತ್ತದೆ. ಆಲ್ಬಂನಲ್ಲಿ ಕಾಣಿಸಿಕೊಂಡ ಕಲಾವಿದರೂ ತುಂಬಾ ಪ್ರಖ್ಯಾತಿ ಪಡೆಯುತ್ತಾರೆ. ಇಲ್ಲಿ ಬಾದ್ ಷಾ ನೂ ಫೇಮಸ್, ರಶ್ಮಿಕಾ ನೂ ಫೇಮಸ್ ಅಂದ್ಮೇಲೆ ಈ ಆಲ್ಬಂ ಸಾಂಗ್ ಇನ್ನೂ ಫೇಮಸ್ ಆಗಬೇಕು ಅಲ್ವಾ?
ರಶ್ಮಿಕಾ ಹಾಗೂ ಬಾದ್ ಷಾ ತಂಡ ಚಂಡೀಗಢದಲ್ಲಿ ಚಿತ್ರೀಕರಣ ಮಾಡಿದ್ದಾರೆ. ಪಿಂಕ್ ಹಾಗೂ ಗೋಲ್ಡ್ ವಸ್ತ್ರ ಧರಿಸಿರುವ ರಶ್ಮಿಕಾ ಫೋಟೋ ಹರಿದಾಡುತ್ತಿದೆ. ಮೊದಲ ಬಾರಿ ರಶ್ಮಿಕಾ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳದ್ದು. ಆದರೆ ಕೆಲವು ನೆಟ್ಟಿಗರು ಹಾಗೂ ಟ್ರೋಲಿಗರು ಹೇಗೆ ರಿಯಾಕ್ಟ್ ಮಾಡುತ್ತಿದ್ದಾರೆ ಗೊತ್ತಾ?
ಕಿರಿಕ್ ಚೆಲುವೆ ರಶ್ಮಿಕಾ ತಿನ್ನೋದಕ್ಕೇ ಬದುಕೋದಂತೆ..!
ರಶ್ಮಿಕಾ ವಿತ್ ಟ್ರೋಲ್ಸ್:
ರಶ್ಮಿಕಾ ಏನೇ ಶೇರ್ ಮಾಡಲಿ ಏನೇ ಅಪ್ಲೋಡ್ ಮಾಡಲಿ ಒಮ್ಮೆಯಾದರೂ ಟ್ರೋಲ್ ಆಗಲೇಬೇಕು. ರಶ್ಮಿಕಾ ಕನ್ನಡದಲ್ಲಿ ಹೆಚ್ಚಿನ ಸಿನಿಮಾ ಸಹಿ ಮಾಡದ ಕಾರಣ ಪರಭಾಷೆಯಲ್ಲಿ ಏನೇ ಒಪ್ಪಿಕೊಂಡರೂ ಕಾಲೆಳೆಯುತ್ತಾರೆ. ಬಾದ್ ಷಾ ಹಾಡಿನಲ್ಲಿ ರಶ್ಮಿಕಾ ಡ್ಯಾನ್ಸ್ ಮಾಡುವ ಬದಲು ಕನ್ನಡ ಹಾಡಿಗೆ ಹೆಜ್ಜೆ ಹಾಕಿದ್ರೆ ಎಷ್ಟೋ ಸೂಪರ್ ಆಗಿರುತ್ತಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು.
ರಶ್ಮಿಕಾ ಕನ್ನಡ ಚಿತ್ರರಂಗವನ್ನು ನಿರ್ಲಕ್ಷಿಸುತ್ತಾರೆ ಎಂಬ ಆರೋಪ ಮುಂಚಿನಿಂದಲೂ ಕೇಳಿ ಬರುತ್ತಿದೆ. ಆ ಕಾರಣದಿಂದಲೇ ರಶ್ಮಿಕಾರನ್ನು ಕಾಲೆಳೆಯುತ್ತಾರೆ ನೆಟ್ಟಿಗರು.