
‘ಹಾಫ್’ ಚಿತ್ರಕ್ಕೆ ಮೊದಲ ಹಂತದ ಶೂಟಿಂಗ್ ಮುಕ್ತಾಯಗೊಂಡಿದೆ. ಕಳೆದ ವರ್ಷ ತೆರೆಗೆ ಬಂದ ‘ಅಟ್ಟಯ್ಯ ವರ್ಸಸ್ ಹಂದಿಕಾಯೋಳು’ ಚಿತ್ರದ ಮೂಲಕ ಪ್ರತಿಭಾವಂತ ನಿರ್ದೇಶಕ ಎನಿಸಿಕೊಂಡ ಲೋಕೇಂದ್ರ ಸೂರ್ಯ ಈ ಬಾರಿ ನಿರ್ದೇಶನದ ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ.
ಮೂರು ಶೇಡ್‌ನಲ್ಲಿ ಪ್ರಜ್ವಲ್ ದೇವರಾಜ್; 'ಅಬ್ಬರ'ಕ್ಕೆ ಶಿವಣ್ಣ ಬೆಂಬಲ!
ಮೊದಲ ಹಂತದ ಶೂಟಿಂಗ್‌ನಲ್ಲಿ ಥ್ರಿಲ್ಲರ್ ಮಂಜು ಸಾಹಸ ದೃಶ್ಯಗಳನ್ನು ಸಂಯೋಜನೆ ಮಾಡಿದ್ದಾರೆ. 150 ಮಂದಿ ಸಾಹಸ ಕಲಾವಿದರು ಈ ದೃಶ್ಯಗಳಲ್ಲಿ ನಟಿಸಿದ್ದಾರೆ. ‘ಹೊಸಬರ ಚಿತ್ರಗಳಿಗೆ ಫೈಟ್ ಕಂಪೋಸ್ ಮಾಡುವುದು ತುಂಬಾ ಕಷ್ಟ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಸಾಹಸ ಕಲಾವಿದರೊಂದಿಗೆ ಫೈಟ್ ಮಾಡಿಸುವುದು ಇನ್ನೂ ಕಷ್ಟ. ಆದರೆ ಚಿತ್ರತಂಡದ ಪೂರ್ವ ತಯಾರಿ ಚೆನ್ನಾಗಿತ್ತು. ಹೀಗಾಗಿ ಹೊಸಬರಾದರೂ ಸಾಹಸ ಸನ್ನಿವೇಶಗಳನ್ನು ಯಾವುದೇ ತೊಂದರೆ ಇಲ್ಲದೆ ಚಿತ್ರೀಕರಣ ಮಾಡಿದ್ದೇವೆ’ ಎಂದು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ಹೇಳುತ್ತಾರೆ.
ಮೇಘನಾ ರಾಜ್ ನೆಮ್ಮದಿ ಹಾಳು ಮಾಡುತ್ತಿದೆ ಆ ಒಂದು ವಿಷಯ?
ರಾಜ್ ಹಾಗೂ ರಾಜು ಕಲ್ಕುಣಿ ಖಳನಟರಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಡಾ. ಪವಿತ್ರ ಆರ್ ಪ್ರಭಾಕರ್ ರೆಡ್ಡಿ ಚಿತ್ರದ ನಿರ್ಮಾಪಕರು. ಮಲ್ಲಿಕಾರ್ಜುನ್ ಬಿ ಆರ್ ಛಾಯಾಗ್ರಾಹಣ ಮಾಡುತ್ತಿದ್ದಾರೆ. ಆಸಿಯಾ, ಅಥಿರಾ, ರಾಜು ಕಲ್ಕುಣಿ, ರಕ್ಷಾ, ಸಿವಿಜಿ ಚಂದ್ರು, ರೋಹಿಣಿ ಕೆ ರಾಜ್, ಮೋಹನ್ ನೆನಪಿರಲಿ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.