ಯೋಗರಾಜ್ ಭಟ್ ಸೂಚಿಸಿದ ಟೈಟಲ್, ಸಿಂಪಲ್ ಸುನಿ ಬೆಂಬಲ: ಜು.4ಕ್ಕೆ ಜಂಗಲ್ ಮಂಗಲ್ ರಿಲೀಸ್‌

Published : Jun 26, 2025, 05:00 PM IST
jungle mangal

ಸಾರಾಂಶ

ನಿರ್ದೇಶಕ ಸಿಂಪಲ್ ಸುನಿ ತನ್ನ ಸುನಿ ಸಿನಿಮಾಸ್ ಬ್ಯಾನರ್‌ನಲ್ಲಿ ಅರ್ಪಿಸುವ ‘ಜಂಗಲ್‌ ಮಂಗಲ್‌’ ಸಿನಿಮಾ ಜು.4ಕ್ಕೆ ಬಿಡುಗಡೆಯಾಗಲಿದೆ. ರಕ್ಷಿತ್ ಕುಮಾರ್ ನಿರ್ದೇಶಕರು. ಯಶ್ ಶೆಟ್ಟಿ ನಾಯಕನಾಗಿ, ಹರ್ಷಿತ ರಾಮಚಂದ್ರ ನಾಯಕಿಯಾಗಿ ನಟಿಸಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ ತನ್ನ ಸುನಿ ಸಿನಿಮಾಸ್ ಬ್ಯಾನರ್‌ನಲ್ಲಿ ಅರ್ಪಿಸುವ ‘ಜಂಗಲ್‌ ಮಂಗಲ್‌’ ಸಿನಿಮಾ ಜು.4ಕ್ಕೆ ಬಿಡುಗಡೆಯಾಗಲಿದೆ. ರಕ್ಷಿತ್ ಕುಮಾರ್ ನಿರ್ದೇಶಕರು. ಯಶ್ ಶೆಟ್ಟಿ ನಾಯಕನಾಗಿ, ಹರ್ಷಿತ ರಾಮಚಂದ್ರ ನಾಯಕಿಯಾಗಿ ನಟಿಸಿದ್ದಾರೆ. ಉಗ್ರಂ ಮಂಜು, ಬಲ ರಾಜವಾಡಿ ಮುಖ್ಯಪಾತ್ರಗಳಲ್ಲಿದ್ದಾರೆ. ಅರೆ ಮಲೆನಾಡಿನಲ್ಲಿ ನಡೆಯುವ ಕಥೆ ಈ ಚಿತ್ರದ್ದು. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಹಿಂದೆಯೂ ನಡೆದ, ಈಗ ನಡೆಯುತ್ತಿರುವ, ಗಂಡು ಹೆಣ್ಣು, ಪ್ರಕೃತಿ ಇರುವವರೆಗೆ, ಮುಂದೆಯೂ ನಡೆಯಬಹುದಾದ ನೈಜ ಘಟನೆಗಳ ಮೇಲೆ ಆಧಾರಿತ ಎಂಬ ಸಾಲು ಕಥೆ ಸುತ್ತಲಿನ ಕುತೂಹಲ ಹೆಚ್ಚಿಸಿದೆ.

ಇದೊಂದು ಅರೆಮಲೆನಾಡಿನಲ್ಲಿ ನಡೆಯುವ ಕಥೆ. ನಾವೊಂದಿಷ್ಟು ಸ್ನೇಹಿತರೇ ಸೇರಿ ನಿರ್ಮಾಣ ಮಾಡಿರುವ ಚಿತ್ರ. 10 ವರ್ಷಗಳಿಂದ ಕನ್ನಡ ಹಾಗೂ ತುಳು ಚಿತ್ರರಂಗದ ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿರುವ ನನಗೆ ನಿರ್ದೇಶಕನಾಗಿ ಇದು ಚೊಚ್ಚಲ ಚಿತ್ರ. ಇದು ಅರೆ ಮಲೆನಾಡಿನಲ್ಲಿ ನಡೆಯುವ ಕಥೆಯಾಗಿದ್ದರೂ, ಯೂನಿವರ್ಸಲ್ ಸಬ್ಜೆಕ್ಟ್ ಎನ್ನಬಹುದು. ಎಲ್ಲಾ ಪ್ರಾಂತ್ಯದಲ್ಲೂ ನಡೆಯುವ ಕಥೆಯೂ ಹೌದು‌. ಸಹ್ಯಾದ್ರಿ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪ್ರಜೀತ್ ಹೆಗಡೆ, ಸಂಕಲನಕಾರ ಮನು ಶೇಡ್ಗಾರ್ ಸೇರಿ ಮುಂತಾದವರು ಬಂಡವಾಳ ಹೂಡಿದ್ದಾರೆ.

ನಿರ್ದೇಶಕ ರಕ್ಷಿತ್ ಕುಮಾರ್ ಮಾತನಾಡಿ, 'ನಾನು ಮೊದಲು ಇಬ್ಬರು ಖ್ಯಾತ ನಿರ್ದೇಶಕರಿಗೆ ಧನ್ಯವಾದ ಹೇಳಬೇಕು. ನಮ್ಮ ಚಿತ್ರದ ಟ್ರೇಲರ್ ನೋಡಿದ ಯೋಗರಾಜ್ ಭಟ್ ಅವರು ಈ ಚಿತ್ರಕ್ಕೆ ಜಂಗಲ್ ಮಂಗಲ್ ಎಂದು ಹೆಸರಿಡಿ ಎಂದರು. ಚಿತ್ರ ಮೆಚ್ಚಿಕೊಂಡ ಮತ್ತೊಬ್ಬ ನಿರ್ದೇಶಕ ಸಿಂಪಲ್ ಸುನಿ ತಮ್ಮ ಸುನಿ ಸಿನಿಮಾಸ್ ಬ್ಯಾನರ್ ಮೂಲಕ ಚಿತ್ರವನ್ನು ಅರ್ಪಿಸಲು ಹೇಳಿದರು'ಎಂದು ತಿಳಿಸಿ ಧನ್ಯವಾದ ಅರ್ಪಿಸಿದರು. ಅಲ್ಲದೇ ದಿವ್ಯಾ ಎಂಬ ಮಧ್ಯಮ ವರ್ಗದ ಜವಾಬ್ದಾರಿಯುತ ಕರಾವಳಿ ಹೆಣ್ಣು ಮಗಳ ಪಾತ್ರ ನನ್ನದು. ಅಂಗನವಾಡಿ ಶಿಕ್ಷಕಿಯ ಪಾತ್ರ ಎಂದು ತಮ್ಮ ಪಾತ್ರದ ಕುರಿತು ನಾಯಕಿ ಹರ್ಷಿತ ರಾಮಚಂದ್ರ ತಿಳಿಸಿದರು.

ಚಿತ್ರದ ನಾಯಕ ಯಶ್ ಶೆಟ್ಟಿ ಮಾತನಾಡಿ, ನನಗೆ ನಾಯಕನಾಗಿಯೇ ನಟಿಸಬೇಕೆಂಬ ಆಸೆ ಇಲ್ಲ. ನಟನಾಗಿ ಗುರುತಿಸಿಕೊಳ್ಳಬೇಕಷ್ಟೇ. ಆದರೆ ನಾನು ಮೊದಲು ನಾಯಕನಾಗಿ ನಟಿಸಿದ ಚಿತ್ರ ಸೂಜಿದಾರ. ಅದರಲ್ಲಿ ನಾನು ನಾಯಕನಾಗಿ ನಟಿಸಲು ಒಪ್ಪಿಕೊಳ್ಳಲು ಕಥೆಯೇ ಕಾರಣ. ಆನಂತರ ಈ ಚಿತ್ರದಲ್ಲಿಯೂ ನಾಯಕನಾಗಿ ಅಭಿನಯಿಸಲು ಕಥೆಯೇ ಕಾರಣ. ನಿಜ ಹೇಳಬೇಕೆಂದರೆ ಈ ಚಿತ್ರಕ್ಕೆ ಕಥೆಯೇ ನಿಜವಾದ ನಾಯಕ. ಇನ್ನೂ ನಮ್ಮ ಚಿತ್ರಕ್ಕೆ ನಿರ್ಮಾಪಕ ಪ್ರಜೀತ್ ಹೆಗಡೆ ಅವರ ಸಹಕಾರ ಅಪಾರವಿದೆ. ಚಿತ್ರತಂಡದ ಪ್ರತಿಯೊಬ್ಬರ ಸಹಕಾರವನ್ನು ಮರೆಯುವ ಹಾಗಿಲ್ಲ‌ ಎಂದು ತಿಳಿಸಿದರು.‌ ಇನ್ನು ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಈ ಸಿನಿಮಾದ ಟ್ರೇಲರ್‌ ನೋಡಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ