ರಶ್ಮಿಕಾ-ಪುನೀತ್ ಓಲ್ಡ್ ವಿಡಿಯೋ ವೈರಲ್, ಯಾರಿಗೆ ಕ್ಲಾಸ್ ತಗೋತಿದಾರೆ ನೆಟ್ಟಿಗರು?

By Shriram Bhat  |  First Published Nov 3, 2024, 9:34 PM IST

'ಇದೇ ಪ್ರಶ್ನೆಯನ್ನು ನಾನು ನಿಮಗೆ ಕೇಳ್ಬೇಕು.. ' ಎಂದ ಪುನೀತ್‌ ಅವರಿಗೆ ರಶ್ಮಿಕಾ 'ನಿಮ್ಮೆಲ್ಲರ ಕಾರಣಕ್ಕೆ ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ. ಸಿನಿಪ್ರೇಕ್ಷಕರು ಈ ಸಿನಿಮಾ ನೋಡಿ ಹೇಗೆ ರಿಯಾಕ್ಟ್ ಮಾಡ್ತಾರೆ ಅಂತ..


ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar)ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರಿಬ್ಬರ ಮಾತುಕತೆಯ ವಿಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪುನೀತ್-ರಶ್ಮಿಕಾ ಜೋಡಿಯ 'ಅಂಜನಿ ಪುತ್ರ' ಚಿತ್ರದ (Anjani Puthra) ಆಡಿಯೋ ಬಿಡುಗಡೆ ದಿನ ನಡದ ಸಂದರ್ಶನದ ವಿಡಿಯೋ ಅದು! ಅದರಲ್ಲಿ ಅಂಜನಿ ಪುತ್ರ ಚಿತ್ರದ ಹೀರೊ ಪುನೀತ್ ಅವರನ್ನು ಹಿರೋಯಿನ್ ರಶ್ಮಿಕಾ ಅವರು ಸಂದರ್ಶನ ಮಾಡಿದ್ದಾರೆ. ವಿಡಿಯೋ ಮಜವಾಗಿದೆ, ನೋಡಿ.. 

ಆರ್ ಯೂ ಎಕ್ಸೈಟೆಡ್ ಸರ್? ಎಂದು ಪ್ರಶ್ನೆ ಕೇಳುತ್ತಾರೆ ನಟಿ ರಶ್ಮಿಕಾ ಮಂದಣ್ಣ. ಅದಕ್ಕೆ ಉತ್ತರವಾಗಿ ಪುನೀತ್ ರಾಜ್‌ಕುಮಾರ್ ಅವರು 'ನಾನು ನಿಮ್ಮನ್ನು ಕೇಳ್ಬೇಕು, ಆರ್‌ ಯೂ ಎಕ್ಸೈಟೆಡ್?' ಎನ್ನುತ್ತಾರೆ ಪವರ್ ಸ್ಟಾರ್ ಪುನೀತ್. ಅದಕ್ಕೆ ಆಗ ಕರ್ನಾಟಕ ಕೃಶ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರು 'ನಾನ್ ತುಂಬಾ ಎಕ್ಸೈಟ್ ಆಗಿದೀನಿ..'ಅಂತಾರೆ. 

Tap to resize

Latest Videos

undefined

ನಟನೆಯನ್ನೇ ಬಿಟ್ಟು ಈಗ ವಿದೇಶದಲ್ಲಿರುವ ಸ್ಟಾರ್ ನಟಿಯರು ಇವರೆಲ್ಲ, ನಿಮ್ಮ ಫೇವರೆಟ್!?

ಅದಕ್ಕೆ ಪುನೀತ್, 'ನಮ್ ಸಿನಿಮಾ ಬಗ್ಗೆ ಅಂದ್ರೆ ಎಲ್ರಿಗೂ ಗೊತ್ತಿರೋದೆ.. ನೀವ್ ಆಕ್ಟ್ ಮಾಡಿದೀರಾ, ನಾನ್ ಆಕ್ಟ್ ಮಾಡಿದೀನಿ.. ಚಿಕ್ಕಣ್ಣ ಆಕ್ಟ್ ಮಾಡಿದಾರೆ, ರಮ್ಯಕೃಷ್ಣ ಅವ್ರಿದಾರೆ, ಸಾಧು ಕೋಕಿಲ ಅವ್ರಿದಾರೆ, ರವಿಶಂಕರ್ ಅವ್ರಿದಾರೆ, ಒಂದ್ ದೊಡ್ಡ ಲಿಸ್ಟೇ ಇದೆ. ಡೈರೆಕ್ಟ್ ಮಾಡಿರೋದು ಹರ್ಷ, ನಾವು ಒಟ್ಟಿಗೇ ಆರೇಳು ತಿಂಗಳುಗಳ ಕಾಲ ಜರ್ನಿ ಮಾಡಿದೀವಿ.. 

ಈಗ ಇವತ್ತು ಆಡಿಯೋ ರಿಲೀಸ್ ಆಗ್ತಾ ಇದೆ, ಅದ್ರ ನಂತ್ರ ಬಹುಶಃ ಒಂದು, ಒಂದೂ ಕಾಲು ತಿಂಗಳಲ್ಲಿ ಸಿನಿಮಾನೂ ರಿಲೀಸ್ ಆಗುತ್ತೆ.. 'ಇದೇ ಪ್ರಶ್ನೆಯನ್ನು ನಾನು ನಿಮಗೆ ಕೇಳ್ಬೇಕು.. ' ಎಂದ ಪುನೀತ್‌ ಅವರಿಗೆ ರಶ್ಮಿಕಾ 'ನಿಮ್ಮೆಲ್ಲರ ಕಾರಣಕ್ಕೆ ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ. ಸಿನಿಪ್ರೇಕ್ಷಕರು ಈ ಸಿನಿಮಾ ನೋಡಿ ಹೇಗೆ ರಿಯಾಕ್ಟ್ ಮಾಡ್ತಾರೆ ಅಂತ ತಿಳಿಯೋಕೆ ನಾನೂ ಕೂಡ ತುಂಬಾ ಎಕ್ಸೈಟ್ ಆಗಿದೀನಿ.. 'ಎನ್ನುತ್ತಾರೆ. 

ನಿರ್ದೇಶಕ ಜೋಗಿ ಪ್ರೇಮ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ದರ್ಶನ್ 'ಕರಿಯ' ಸಿನಿಮಾ ನಟಿ!

ಅದಕ್ಕೆ ಪುನೀತ್ 'ಈಗ ನಮ್ ಸಿನಿಮಾದ ಹಾಡು ಹಾಗೂ ಟೀಸರ್‌ನ ನೋಡಿ ಅವ್ರು ಸಂತೋಷ ಪಡ್ತಾರೆ ಅಂತ ನಾನು ಅಂದ್ಕೊಂಡಿದೀನಿ.. ಯಾಕಂದ್ರೆ, ನೀವ್ ಆಗಿರ್ಬಹುದು, ನಾನಾಗಿರ್ಬಹುದು, ಹರ್ಷ ಆಗಿರ್ಬಹುದು, ಪ್ರೊಡ್ಯೂಸರ್ ಕುಮಾರ್ ಆಗಿರ್ಬಹುದು,  ಅಥವಾ ಇವತ್ತಿನ ಹೀರೋ ರವಿ ಬಸ್ರೂರ್ ಆಗಿರ್ಬಹುದು, ಎಲ್ಲರೂ ಒಂದ್ ಗುಡ್ ಸಿನಿಮಾ ಕನಸು ಕಂಡಿದೀವಿ..' ಎಂದಿದ್ದಾರೆ ನಟ ಪುನೀತ್ ರಾಜ್‌ಕುಮಾರ್. ಅದಕ್ಕೆ ನಟಿ ರಶ್ಮಿಕಾ ಹೌದು, ಎಲ್ಲರೂ ಒಳ್ಳೇದನ್ನೇ ಎದುರು ನೋಡ್ತಾ ಇದೀವಿ..' ಎನ್ನುತ್ತಾರೆ. 

click me!