
ಕನ್ನಡದ ರ್‍ಯಾಪರ್ ಚಂದನ್ ಶೆಟ್ಟಿ ಅವರು 'ಕಾಟನ್ ಕ್ಯಾಂಡಿ' ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ ಸಕತ್ ಬಿಜಿಯಾಗಿರೋ ನಡುವೆಯೇ ಇದೀಗ ಮಾಜಿ ಪತ್ನಿ ನಿವೇದಿತಾ ಗೌಡ ಅವರ ಜೊತೆಗೆ ನಟಿಸಿದ್ದ ಮುದ್ದು ರಾಕ್ಷಸಿ ಚಿತ್ರದ ಶೂಟಿಂಗ್ ಕೂಡ ಮುಗಿಸಿ ನಿರಾಳರಾಗಿದ್ದಾರೆ. ನಿವೇದಿತಾ ಜೊತೆಗಿನ ದಾಂಪತ್ಯ ಜೀವನವನ್ನು ಕೊನೆಗಾಣಿಸಿದ ಬಳಿಕ ಮತ್ತೆ ಕಮ್ಬ್ಯಾಕ್ ಆಗಿದ್ದು ನೋಡಿ ಫ್ಯಾನ್ಸ್ಗೆ ಸಕತ್ ಖುಷಿಯಾಗಿದೆ. ಮೊನ್ನೆಯಷ್ಟೇ ಈ ಮಾಜಿ ದಂಪತಿ ಬಂದು ಪತ್ರಿಕಾಗೋಷ್ಠಿ ಮಾಡಿ ಸಿನಿಮಾದ ಕೊನೆಯ ದೃಶ್ಯಗಳನ್ನು ಶೂಟಿಂಗ್ ಮಾಡಿ ಹೋಗಿದೆ. ಅಲ್ಲಿ ಒಂದಿಷ್ಟು ಡ್ರಾಮಾ ಕ್ರಿಯೇಟ್ ಕೂಡ ಆಗಿದ್ದು, ಎಲ್ಲವೂ ಪಬ್ಲಿಸಿಟಿಗಾಗಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳ ಸುರಿಮಳೆಯೂ ಆಗುತ್ತಿದೆ.
ಟ್ರೋಲರ್ಸ್‌ಗಳಿಗೆ ಏನು ಬಿಡಿ... ಆದರೆ ವಿಷಯ ಅದಲ್ಲ. ಚಂದನ್ ಶೆಟ್ಟಿ ಅವರು ಇನ್ನಷ್ಟು ಮೇಲಕ್ಕೆ ಹೋಗಬೇಕು, ದಾಂಪತ್ಯದ ಕಹಿ ಘಟನೆಯನ್ನು ಮರೆತು ಬದುಕನ್ನು ಮುಂದಕ್ಕೆ ಸಾಗಿಸಬೇಕು ಎಂದುಕೊಂಡಿರುವ ಹಲವು ಅಭಿಮಾನಿಗಳು ಇದ್ದಾರೆ. ಡಿವೋರ್ಸ್ ಬಳಿಕವೂ ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ಅವರ ಪರವಾಗಿಯೇ ಬರುತ್ತಿದ್ದ ಕಮೆಂಟ್ಸ್ ನೋಡಿದರೆ ಅವರಿಗೆ ಎಷ್ಟು ಮಂದಿ ಅಭಿಮಾನಿಗಳು ಇದ್ದಾರೆ ಎನ್ನುವುದು ತಿಳಿಯುತ್ತದೆ. ನಿವೇದಿತಾ ಅವರ ಹೊಸ ಹೊಸ ರೂಪಗಳ ರೀಲ್ಸ್ ನೋಡಿದ ಮೇಲೆ ಅವರು ನೆಗೆಟಿಂಗ್ ಕಮೆಂಟ್‌ಗಳಿಂದಲೇ ಹೆಚ್ಚು ಪ್ರಸಿದ್ಧರಾಗುತ್ತಿದ್ದರೆ, ಚಂದನ್ ಶೆಟ್ಟಿ ವಿಷಯದಲ್ಲಿ ಹಾಗಲ್ಲ. ಇವರಿಗೆ ಪಾಸಿಟಿವ್ ಕಮೆಂಟ್‌ಗಳು ಬರುವುದೇ ಹೆಚ್ಚು. ಇಂತೆಲ್ಲಾ ಅಭಿಮಾನಿಗಳಿಗೆ ಚಂದನ್ ಶೆಟ್ಟಿ, ಇದೀಗ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಅಪ್ಪನ ಆಸೆಯಂತೆ ಹೊಸ ಜೀವನಕ್ಕೆ ಅಡಿ ಇಟ್ಟಿದ್ದಾರೆ ಚಂದನ್ ಶೆಟ್ಟಿ. ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ನನ್ನ ಬಹಳ ವರ್ಷಗಳ ಕನಸು ಈಡೇರುತ್ತಿದೆ, ಹೊಸ ಜೀವನ ಶುರು ಮಾಡುತ್ತಿದ್ದೇನೆ. ಅಪ್ಪನ ಆಸೆಯಂತೆ ಹೀಗೆ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ. ಅಷ್ಟಕ್ಕೂ ಅವರು ಹೇಳ್ತಿರೋದು ಅವರ ಹೊಸ ಚಿತ್ರ ಸೂತ್ರಧಾರಿ ಕುರಿತು. ಈ ಚಿತ್ರದ ಮೂಲಕ ಚಂದನ್ ಶೆಟ್ಟಿ ಅವರು ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಕುರಿತು ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು. ನಾನು ನಟನಾಗಬೇಕು ಎನ್ನುವುದು ನಮ್ಮ ತಂದೆಯ ಕನಸು. ಚಿಕ್ಕಂದಿನಿಂದಲೂ ನೀನು ಸಿನಿಮಾ ಹೀರೋ ಆಗಬೇಕು ಅಂತಿದ್ರು. ಆದರೆ ನಾನು ಕನ್ನಡಿ ಮುಂದೆ ನಿಂತು ನೋಡಿದ್ರೆ ನಾನು ಯಾವಾಗ ಹೀರೋ ಆಗ್ತೀನಿ ಅಂತ ನಗು ಬರುತ್ತೆ. ಆದರೆ ನನ್ನ ತಂದೆ ಆವತ್ತು ಹೇಳಿದ್ದ ಒಂದು ಮಾತು ಇದೇ ಮೇ 9ರಂದು ನಿಜ ಆಗುತ್ತಿದೆ. ನನ್ನ ತಂದೆಯ ಕನಸು ಈಡೇರುತ್ತಿದೆ ಎಂದಿದ್ದಾರೆ ನಟ.
ಅಂದಹಾಗೆ ಈ ಚಿತ್ರದಲ್ಲಿ ಚಂದನ್ ಅವರದ್ದು ಅಂಡರ್‌ಕವರ್ ಪೊಲೀಸ್ ಪಾತ್ರ. ಈ ಬಗ್ಗೆ ಅವರು ಹೇಳಿದ್ದಾರೆ. ಈ ಸಿನಿಮಾದಲ್ಲಿ ನಾನು ಅಂಡರ್‌ಕವರ್ ಪೊಲೀಸ್ ಪಾತ್ರ ಮಾಡಿದ್ದೀನಿ. ಈ ಸಿನಿಮಾ ಮೂಲಕ ನಾನು ಹೊಸ ಜೀವನ ಶುರು ಮಾಡಿದ್ದೇನೆ. ಈ ಸಿನಿಮಾ ಒಪ್ಪಿಕೊಳ್ಳಲು ನಿರ್ಮಾಪಕ ನವರಸನ್ ಅವರೇ ಕಾರಣ. ದಯವಿಟ್ಟು ಎಲ್ಲರೂ ಈ ಸಿನಿಮಾಗೆ ಸಪೋರ್ಟ್ ಮಾಡಿ ಎಂದು ಮನವಿ ಮಾಡಿದ್ದಾರೆ.
ಚಂದನ್ ಶೆಟ್ಟಿಯನ್ನು ಮದ್ವೆಯಾದ ಗುಟ್ಟು ಕೊನೆಗೂ ಬಾಯ್ಬಿಟ್ಟ ನಿವೇದಿತಾ ಗೌಡ: ಅಲೆಲೆ ಹೆಣ್ಣೇ ಎಂದ ನೆಟ್ಟಿಗರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.