
ಕನ್ನಡದ ಕುವರ, ರಾಪರ್ ಚಂದನ್ ಶೆಟ್ಟಿಯವರು (Chandan Shetty) ಹಿಮಾಚಲ ಪ್ರದೇಶಕ್ಕೆ ಕಾರಿನಲ್ಲಿ ಸ್ನೇಹಿತರ ಜೊತೆ ಟ್ರಿಪ್ ಹೋಗಿರುವುದು ಗೊತ್ತೇ ಇದೆ. ನಾಗ್ಪುರ, ಜಗತ್ತಿನ ಎತ್ತರದ ಬ್ರಿಡ್ಜ್ 'ಚಿಚಂ' ನೋಡಿದ ಬಳಿಕ ಚಂದನ್ ಶೆಟ್ಟಿಯವರು ಸೀದಾ 'ಪ್ರೇಮಿಗಳ ಸೌಧ' ಆಗ್ರಾದ ತಾಜ್ ಮಹಲ್‌ಗೆ ಭೆಟಿ ನೀಡಿದ್ದಾರೆ. ಅವರನ್ನು ಪ್ರೇಮ ಸೌಧದ ಮುಂದೆ ನೋಡಿ ಅಭಿಮಾನಿಗಳು ಪುಳಕಗೊಂಡಿದ್ದಾರೆ, ಹರ್ಷ ಹರಿಸುತ್ತಿದ್ದಾರೆ. ತಾಜ್ ಮಹಲ್ ಮುಂದೆ ನಿಂತು ವಿಡಿಯೋ ಮಾಡಿರುವ ಚಂದನ್ ಶೆಟ್ಟಿ, ಅದನ್ನು ಅಭಿಮಾನಿಗಳು ನೋಡಲೆಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ವಲ್ಪ ದಿನಗಳ ಹಿಂದಷ್ಟೇ ಚಂದನ್ ಶೆಟ್ಟಿಯವರು ಜಗತ್ತಿನ ಅತ್ಯಂತ ಎತ್ತರದ ಬ್ರಿಡ್ಜ್ ಎಂದು ಖ್ಯಾತಿ ಹೊಂದಿರುವ ಹಿಮಾಚಲ ಪ್ರದೇಶದ 'ಚಿಚಂ' ಮೇಲೆ ಹೋಗಿ ನಿಂತಿದ್ದರು. ನಟ ಹಾಗೂ ಸಿಂಗರ್ ಚಂದನ್ ಶೆಟ್ಟಿ ಅವರು ಕೆಲದಿನಗಳ ಹಿಂದೆ ಸ್ನೇಹಿತರೊಂದಿಗೆ ಕಾರಿನಲ್ಲಿ ಹಿಮಾಚಲ ಪ್ರದೇಶಕ್ಕೆ ಟೂರ್ ಹೋಗಿರುವುದು ಗೊತ್ತೇ ಇದೆ. ಹಿಮಾಚಲ ಪ್ರದೇಶದಲ್ಲಿರುವ ಚಂದನ್ ಶೆಟ್ಟಿ ಅಲ್ಲಿರುವ ಜಗತ್ತಿನ ಅತಿ ಎತ್ತರದ ಬ್ರಿಡ್ಜ್ ಚಿಚಂ (Chicham Bridge) ಮೇಲೆ ನಿಂತಿದ್ದಾರೆ. ಆ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಚಂದನ್ ಶೆಟ್ಟಿ ಬೆಂಗಳೂರಿನಿಂದ ಕಾರಿನಲ್ಲಿ ಹೊರಟವರು ನಾಗ್ಪುರ, ಆಗ್ರಾ ತಲುಪಿ, ಇದೀಗ ಹಿಮಾಚಲ ಪ್ರದೇಶಕ್ಕೆ ಕಾಲಿಟ್ಟಿದ್ದಾರೆ. ಅವರ ಕನಸಾಗಿದ್ದ ಈ ಜಾಗಕ್ಕೆ ಕಾಲಿಟ್ಟು, ಪುಳಕ ಅನುಭವಿಸಿರುವ ಚಂದನ್ ಶೆಟ್ಟಿ ತಮ್ಮ ಪ್ರಯಾಣದ ಬಹಳಷ್ಟು ಸಂಗತಿಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲವನ್ನೂ ತಮ್ಮ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಆಗ್ರಾದ ತಾಜ್ ಮಹಲ್ ಎದುರು ನಿಂತಿರುವ ವಿಡಿಯೋ ಪೋಸ್ಟ್ ಮಾಡಿ ಖುಷಿ ಶೇರ್ ಮಾಡಿಕೊಂಡಿದ್ದಾರೆ.
ಕೆಲವು ಮಾಹಿತಿ ಪ್ರಕಾರ, ಈ ಚಿಚಂ ಬ್ರಿಡ್ಜ್ ಜಗತ್ತಿನ ಎರಡನೆಯ ಎತ್ತರದ ಬ್ರಿಡ್ಜ್, ಏಷ್ಯಾದ ಮೊದಲನೆಯದು ಆಗಿದೆ. ಜಗತ್ತಿನಲ್ಲೇ ಎತ್ತರದ ಮೊದಲನೇ ಬ್ರಿಡ್ಜ್ ಚೀನಾದಲ್ಲಿರುವ ಬೈಪಾಂಜಿಯಂಗ್ (Beipanjiang Bridge). ಆದರೆ ಈ ಬಗ್ಗೆ ಕೆಲವು ವಿವಾದಗಳಿದ್ದರೂ ಈ ಚಿಚಂ ಬ್ರಿಡ್ಜ್ ಭಾರತದ ಹಾಗೂ ಏಷ್ಯಾದ ಅತ್ಯಂತ ಎತ್ತರದ ಬ್ರಿಡ್ಜ್ ಅಂತೂ ಹೌದು. ಈ ಬ್ರಿಡ್ಜ್ ಮೇಲೆ ನಿಂತು ಕನ್ನಡಿಗ, ಸಿಂಗರ್ ಹಾಗೂ ಆಕ್ಟರ್ ಚಂದನ್ ಶೆಟ್ಟಿ ಭಾರೀ ರೋಮಾಂಚನ ಅನುಭವಿಸಿದ್ದಾರಂತೆ.
ಅಂದಹಾಗೆ, ಚಂದನ್ ಶೆಟ್ಟಿಯವರು ಇತ್ತೀಚೆಗೆ ತಮ್ಮ ಹೊಸ ಮ್ಯೂಸಿಕ್ ವಿಡೊಯೋ 'ಕಾಟನ್ ಕ್ಯಾಂಡಿ' ಸಕ್ಸಸ್' ಎಂಜಾಯ್ ಮಾಡುತ್ತಿದ್ದಾರೆ. ಈ ಕಾಟನ್ ಕ್ಯಾಂಡಿ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಆಗಿದ್ದು, ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದೆ. ಸದ್ಯ ಸಾಹಸ ಟೂರ್ ಜೊತೆಗೆ ಮ್ಯೂಸಿಕ್ ವಿಡಿಯೋದ ಪ್ರಚಾರವನ್ನು ಕೂಡ ಚಂದನ್ ಶೆಟ್ಟಿಯವರು ಮಾಡುತ್ತಿದ್ದಾರೆ.
ಒಟ್ಟಿನಲ್ಲಿ, ಅಡ್ವೆಂಚರ್‌ಗೆ ಮನಸ್ಸನ್ನು ರೆಡಿಯಾಗಿಸಿಕೊಂಡಿರುವ ಚಂದನ್ ಶೆಟ್ಟಿಯವರು ಹಿಮಾಚಲ ಪ್ರದೇಶದಲ್ಲಿ ಸದ್ಯ ಸಾಹಸಕ್ಕೆ ತಮ್ಮನ್ನು ಒಡ್ಡಿಕೊಂಡು ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಇದಕ್ಕೂ ಮೊದಲು ಅವರು ಆಸ್ಟ್ರೇಲಿಯಾದ ಸಿಡ್ನಿಗೆ ಹೋಗಿದ್ದರು. ಅಲ್ಲಿ ತಮ್ಮ ಬಾಲ್ಯದ 'ವಿಮಾನ ಓಡಿಸುವ' ಕನಸನ್ನು ನನಸು ಮಾಡಿಕೊಂಡು ಬಂದಿದ್ದಾರೆ. ಮುಂದೆ ಅದ್ಯಾವ ಸಾಹಸಕ್ಕೆ ರೆಡಿಯಾಗಲಿದ್ದಾರೆ ಚಂದನ್ ಶೆಟ್ಟಿ ಎಂಬುದನ್ನು ಕಾದು ನೋಡಬೇಕಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.