ಮಾಲಾಶ್ರೀ ಹಾಗು ಖುಷ್ಬೂ ಇಬ್ಬರೂ ತಮ್ಮ ತಮ್ಮ ಕಾಲದಲ್ಲಿ ಸಾಕಷ್ಟು ಮಿಂಚಿದವರು, ಮೆರೆದವರು. ಖುಷ್ಬೂ ತಮಿಳುರಂಗದ ಅನಭಿಷಿಕ್ತ ರಾಣಿಯಾಗಿ ಮರೆದಿದ್ದರು, ಅವರಿಗೆ ಅಲ್ಲಿ ದೇವಾಲಯ ಕಟ್ಟಿಸಲಾಗಿತ್ತು..
ಈ ಇಬ್ಬರೂ ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ಖ್ಯಾತಿಯ ನಟ ರವಿಚಂದ್ರನ್ ನಾಯಕಿಯರಾಗಿದ್ದವರು. ಮಾಲಾಶ್ರೀ ಅವರು ನಟ ರವಿಚಂದ್ರನ್ ಅವರ ರಾಮಾಚಾರಿ ಚಿತ್ರದಲ್ಲಿ ನಟಿಸಿದ್ದರೆ ಖುಷ್ಬೂ ಅವರು ರಣಧೀರ ಚಿತ್ರದಲ್ಲಿ ನಟಿಸಿದ್ದರು. ಎರಡೂ ಚಿತ್ರಗಳೂ ಕೂಡ ಸೂಪರ್ ಹಿಟ್ ದಾಖಲಿಸಿದ್ದವು. ಅಂದು ನಟ ರವಿಚಂದ್ರನ್ ತಮ್ಮ ನಿರ್ಮಾಣದ 'ಶಾಂತಿ ಕ್ರಾಂತಿ' ಚಿತ್ರದ ಸೋಲಿನಿಂದ ಸೋತು ಸುಣ್ಣವಾಗಿದ್ದ ಟೈಮಲ್ಲಿ ಮಾಲಾಶ್ರೀ ಕಾಲ್ ಶೀಟ್ ಕೊಟ್ಟು ರವಿಚಂದ್ರನ್ ಗೆಲುವಿನ ನಗೆಗೆ ಕಾರಣರಾಗಿದ್ದರು.
ಮಾಲಾಶ್ರೀ ಹಾಗು ಖುಷ್ಬೂ ಇಬ್ಬರೂ ತಮ್ಮ ತಮ್ಮ ಕಾಲದಲ್ಲಿ ಸಾಕಷ್ಟು ಮಿಂಚಿದವರು, ಮೆರೆದವರು. ಖುಷ್ಬೂ ತಮಿಳುರಂಗದ ಅನಭಿಷಿಕ್ತ ರಾಣಿಯಾಗಿ ಮರೆದಿದ್ದರು, ಅವರಿಗೆ ಅಲ್ಲಿ ದೇವಾಲಯ ಕೂಡ ಕಟ್ಟಿಸಲಾಗಿತ್ತು. ತಮಿಳು ಸೇರಿದಂತೆ ನಟಿ ಖುಷ್ಬೂ ಅವರು ಕನ್ನಡ, ತೆಲುಗು ಹಾಗು ತಮಿಳು ಚಿತ್ರರಂಗಗಳಲ್ಲೂ ಕೆಲಸ ಮಾಡಿದ್ದಾರೆ. ಒಂದು ಕಾಲದಲ್ಲಿ ನಟಿ ಖುಷ್ಬೂ ಕ್ರೇಜ್ ಅದೆಷ್ಟು ಇತ್ತು ಎಂದರೆ, ಅಂದಿನ ಕಾಲದ ತಮಿಳಿನ ಅಥಿರಥ ಮಹಾರಥರು ಎನ್ನುವ ಸ್ಟಾರ್ ನಾಯಕರೆಲ್ಲರೂ ಖುಷ್ಬೂ ಜೊತೆ ನಟಿಸಿದ್ದರು.
ಭಾರತಿ, ಪಾರ್ವತಮ್ಮ ರಾಜ್‌ಕುಮಾರ್ ಪೋಟೋ ವೈರಲ್, ಮಧ್ಯೆ ಅಣ್ಣಾವ್ರು ಇರ್ಬೇಕಿತ್ತು ಎಂದ ನೆಟ್ಟಿಗರು!
ಇನ್ನು ಮಾಲಾಶ್ರೀ ಅವರ ಬಗ್ಗೆ ಕನ್ನಡಿಗರಿಗೆ ಹೇಳಬೇಕಾಗಿಯೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ 'ಹಿಂದೆ ಯಾರೂ ಇರಲಿಲ್ಲ, ಮುಂದೆ ಯಾರೂ ಬರುವುದು ಕಷ್ಟ' ಎಂಬಂತೆ ಇದ್ದು ಮೆರೆದವರು ಮಾಲಾಶ್ರೀ. ನಭೋ ನಭವಿಷ್ಯತಿ ಎಂಬಂತೆ, 90ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳಿದವರು. ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಮಾಲಾಶ್ರೀ ಆಮೇಲೆ ಹಿಂತಿರುಗಿ ನೋಡದೇ ಬರೋಬ್ಬರಿ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು.
ಇಲ್ಲಿನ ಜನಕ್ಕೆ ನಿಯತ್ತು ಇಲ್ಲ, ನಿನ್ನ ಅಭಿಮಾನಿಗಳನ್ನ ಬಿಟ್ರೆ ನಿಂಗೆ ಒಳ್ಳೇದು ಬಯಸೋರು ಯಾರೂ ಇಲ್ಲ..!
ಇದೀಗ ಮಾಲಾಶ್ರೀ ಮಗಳು ಆರಾಧನಾ ರಾಮ್ ಕನ್ನಡ ಚಿತ್ರರಂಗಕ್ಕೆ ಕಾಟೇರ ಸಿನಿಮಾ ಮೂಲಕ ಪದಾರ್ಪಣೆ ಮಾಡಿದ್ದಾರೆ. ನಟ ದರ್ಶನ್ ನಾಯಕತ್ವದ ಕಾಟೇರ ಚಿತ್ರವು ಸೂಪರ್ ಹಿಟ್ ದಾಖಲಿಸಿದೆ. ಬಳಿಕ, ಮಾಲಾಶ್ರೀ ಮಗಳು ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಸದ್ಯ ಹೊಸ ಹೊಸ ಕತೆ ಕೇಳುತ್ತಿದ್ದಾರೆ, ಸದ್ಯದಲ್ಲೇ ಹೊಸ ಸಿನಿಮಾಗೆ ಆರಾಧನಾ ರಾಮ್ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ, ನಿರ್ಮಾಪಕ ಕೋಟಿ ಖ್ಯಾತಿಯ ರಾಮು ಹಾಗು ಮಾಲಾಶ್ರೀ ದಂಪತಿಗಳ ಮಗಳು ಆರಾಧನಾ ರಾಮ್.
ಜೈಲಲ್ಲಿ ನಟ ದರ್ಶನ್ ಭೇಟಿಯಾದ ಸುಮಲತಾ ಅಂಬರೀಷ್ ಬಗ್ಗೆ D BOSS ಫ್ಯಾನ್ಸ್ ಏನಂತಿದಾರೆ..?