ಭಾರತಿ, ಪಾರ್ವತಮ್ಮ ರಾಜ್‌ಕುಮಾರ್ ಪೋಟೋ ವೈರಲ್, ಮಧ್ಯೆ ಅಣ್ಣಾವ್ರು ಇರ್ಬೇಕಿತ್ತು ಎಂದ ನೆಟ್ಟಿಗರು!

By Shriram Bhat  |  First Published Jul 5, 2024, 4:13 PM IST

ಡಾ ರಾಜ್‌ಕುಮಾರ್ ಹಾಗು ಭಾರತಿ ಜೋಡಿಯ ಹಲವಾರು ಚಿತ್ರಗಳು ತೆರೆಗೆ ಬಂದಿವೆ. ಅವರಿಬ್ಬರ ಜೋಡಿಯ ಸಾಕಷ್ಟು ಚಿತ್ರಗಳನ್ನು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕಿಯಾಗಿದ್ದ ಪಾರ್ವತಮ್ಮ..


ಸೋಷಿಯಲ್ ಮೀಡಿಯಾ ಎಂಬುದು ಇಂದು ಅದೇ ಜಗತ್ತು ಎಂಬಂತಾಗಿದೆ. ಜಗತ್ತಿನಲ್ಲೊಂದು ಹೊಸ ಜಗತ್ತು ಈ ಸೋಷಿಯಲ್ ಮೀಡಿಯಾ ಎಂದರೆ ತಪ್ಪೇ ಇಲ್ಲ ಎಂಬಷ್ಟು ಎಲ್ಲರಿಗೂ ಅದು ಅನಿವಾರ್ಯ ಭಾಗವಾಗಿದೆ.  ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅದೊಂದು ಫೋಟೋ ಭಾರೀ ವೈರಲ್ ಆಗುತ್ತಿದೆ. ಅದು ಬೇರಾರದೋ ಅಲ್ಲ, ಭಾರತಿ ಹಾಗು ಪಾರ್ವತಮ್ಮ ರಾಜ್‌ಕುಮಾರ್ ಅವರದು. 

ಈ ಫೋಟೋ ವೈರಲ್ ಆಗುತ್ತಿದ್ದಂತೆ ಅಲ್ಲಿ ಮೊಟ್ಟ ಮೊದಲ ಕಾಮೆಂಟ್ ಭಾರೀ ಗಮನ ಸೆಳೆಯುತ್ತಿದೆ. ಹಾಗಿದ್ದರೆ, ಆ ಕಾಮೆಂಟ್‌ ಏನು? ಲೈಕ್ ಮಾಡಿ ಒಬ್ಬರು 'ತುಂಬಾ ಅಪರೂಪದ ಚಿತ್ರ! ಮಧ್ಯದಲ್ಲಿ ಅಣ್ಣಾವ್ರು ಇರಬೇಕಿತ್ತು' ಎಂದು ನೆಟ್ಟಿಗರು ಇದಕ್ಕೆ ಕಾಮೆಂಟ್ ಹಾಕಿದ್ದಾರೆ. ಅದಕ್ಕೆ ಉತ್ತರ ಕೂಡ ಸಖತ್ತಾಗೇ ಬಂದಿದೆ ಎನ್ನಬಹುದೇ? ಉತ್ತರವೇನು ಎಂದರೆ, 'ಆಸೆ ಇರಬೇಕು ನಿಮ್ಮದು ಅತಿಯಾಸೆಯಾಯ್ತು' ಎಂಬ ಪ್ರತ್ಯುತ್ತರ ಅದಕ್ಕೆ ಬಂದಿದೆ. 

Tap to resize

Latest Videos

ಬೆಂಗಳೂರಂತ ಸಿಟಿನಲ್ಲಿ, ಅದ್ರಲ್ಲೂ ಮನೆ ಹತ್ರನೇ ಬಂದು ಗುಂಡಿಟ್ಟು ಸಾಯಿಸ್ತಾರೆ ಅಂದ್ರೆ..: ಇಂದ್ರಜಿತ್ ಲಂಕೇಶ್

ನಟ ಡಾ ರಾಜ್‌ಕುಮಾರ್ ಹಾಗೂ ನಟಿ ಭಾರತಿ ಅವರು ಬಹಳಷ್ಟು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಅವುಗಳಲ್ಲಿ 'ನಭೋ ನಭವಿಷ್ಯತಿ' ಎಂಬಂತಿರುವ 'ಬಂಗಾರದ ಮನುಷ್ಯ' ಚಿತ್ರವೂ ಒಂದು. ಒಂದು ಈ ಚಿತ್ರವು ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಥೀಯೇಟರ್‌ನಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಇಂದಿಗೂ ಕೂಡ ಬಂಗಾರದ ಮನುಷ್ಯ ಚಿತ್ರವು ಡಾ ರಾಜ್‌ಕುಮಾರ್ ಅವರ ಅತ್ತಯುತ್ತಮ ಚಿತ್ರವಾಗಿ ಗುರುತಿಸಿಕೊಂಡಿದೆ. ಜೊತೆಗೆ, ಕನ್ನಡ ಚಿತ್ರಗಳಲ್ಲಿ ಸಹ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎಂಬ ಮೆಚ್ಚುಗೆಗೆ ಪಾತ್ರವಾಗಿದೆ. 

ಜೈಲಲ್ಲಿ ನಟ ದರ್ಶನ್ ಭೇಟಿಯಾದ ಸುಮಲತಾ ಅಂಬರೀಷ್ ಬಗ್ಗೆ D BOSS ಫ್ಯಾನ್ಸ್ ಏನಂತಿದಾರೆ..?

ಡಾ ರಾಜ್‌ಕುಮಾರ್ ಹಾಗು ಭಾರತಿ ಜೋಡಿಯ ಹಲವಾರು ಚಿತ್ರಗಳು ತೆರೆಗೆ ಬಂದಿವೆ. ಅವರಿಬ್ಬರ ಜೋಡಿಯ ಸಾಕಷ್ಟು ಚಿತ್ರಗಳನ್ನು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕಿಯಾಗಿದ್ದ ಪಾರ್ವತಮ್ಮ ರಾಜ್‌ಕುಮಾರ್ ಅವರು ಸಹಜವಾಗಿಯೇ ತಮ್ಮ ಸಿನಿಮಾ ಪ್ರೆಸ್‌ಮೀಟ್‌ಗಳಿಗೆ, ಆಡಿಯೋ ಅಥವಾ ಬೇರೆಬೇರೆ ಸಮಾರಂಭಗಳಿಗೆ ಹೋಗುತ್ತಿದ್ದರು. ಈ ಬ್ಲಾಕ್ ಅಂಡ್ ವೈಟ್ ಫೋಟೋ ಕೂಡ ಅದೇ ರೀತಿಯಲ್ಲಿ ಎಲ್ಲೋ ಒಂದು ಕಡೆ ಕ್ಲಿಕ್ ಮಾಡಿದ್ದು. ಆದರೆ, ಇಷ್ಟು ವರ್ಷಗಳ ಬಳಿಕ ಅದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಇಲ್ಲಿನ ಜನಕ್ಕೆ ನಿಯತ್ತು ಇಲ್ಲ, ನಿನ್ನ ಅಭಿಮಾನಿಗಳನ್ನ ಬಿಟ್ರೆ ನಿಂಗೆ ಒಳ್ಳೇದು ಬಯಸೋರು ಯಾರೂ ಇಲ್ಲ..!

ಡಾ ರಾಜ್‌ಕುಮಾರ್ ಹಾಗು ಭಾರತಿ ಅವರಿಬ್ಬರ ಜೋಡಿಯ ಚಿತ್ರಗಳು ಆ ಕಾಲದಲ್ಲಿ ಬಹಳಷ್ಟು ಮೆಚ್ಚುಗೆ ಗಳಿಸಿದ್ದವು. ಅವರಿಬ್ಬರೂ ಸಿನಿಮಾದಲ್ಲಿ ಬೆಸ್ಟ ಜೋಡಿ ಎಂದೇ ಹೆಸರಾಗಿದ್ದರು. ಬಂಗಾರದ ಮನುಷ್ಯ, ಮೇಯರ್ ಮುತ್ತಣ್ಣ, ಗಂಗೆ ಗೌರಿ, ದೂರದ ಬೆಟ್ಟ, ಗಂಧದ ಗುಡಿ, ತಾಯಿ ದೇವರು, ಭಲೇ ಜೋಡಿ, ಹೃದಯ ಸಂಗಮ. ಹೀಗೆ ಪಟ್ಟಿ ಉದ್ದವಾಗುತ್ತದೆ. ಅವುಗಳಲ್ಲಿ ಸಾಕಷ್ಟು ಚಿತ್ರಗಳನ್ನು ಪಾರ್ವತಮ್ಮ ರಾಜ್‌ಕುಮಾರ್ ಅವರು ನಿರ್ಮಾಣ ಮಾಡಿದ್ದರು. 

ಜೈಲಿಂದ ಹೊರಗ್ ಬಂದ್ಮೇಲೆ ಕನ್ನಡ ಚಿತ್ರರಂಗ ಬಿಟ್ಬಿಡು: ದರ್ಶನ್‌ಗೆ ಹಿಂಗದಿದ್ದು ಯಾರು?

click me!