ಜಗತ್ತಿನ ಅತೀ ಎತ್ತರದ ಬ್ರಿಡ್ಜ್‌ ಮೇಲೆ ನಿಂತ ಚಂದನ್ ಶೆಟ್ಟಿ, ಯಾಕೆ ಹೋಗಿದ್ದು, ಏನಾಯ್ತು?

Published : Jan 29, 2025, 01:45 PM ISTUpdated : Jan 29, 2025, 01:54 PM IST
ಜಗತ್ತಿನ ಅತೀ ಎತ್ತರದ ಬ್ರಿಡ್ಜ್‌ ಮೇಲೆ ನಿಂತ ಚಂದನ್ ಶೆಟ್ಟಿ, ಯಾಕೆ ಹೋಗಿದ್ದು, ಏನಾಯ್ತು?

ಸಾರಾಂಶ

ಗಾಯಕ ಹಾಗೂ ನಟ ಚಂದನ್ ಶೆಟ್ಟಿ ಸ್ನೇಹಿತರೊಂದಿಗೆ ಹಿಮಾಚಲ ಪ್ರದೇಶಕ್ಕೆ ರೋಡ್ ಟ್ರಿಪ್‌ನಲ್ಲಿದ್ದಾರೆ. ಜಗತ್ತಿನ ಎರಡನೇ ಅತಿ ಎತ್ತರದ ಚಿಚಂ ಸೇತುವೆಯ ಮೇಲೆ ನಿಂತು ರೋಮಾಂಚನ ಅನುಭವಿಸಿದ್ದಾರೆ. ಹೊಸ ಮ್ಯೂಸಿಕ್ ವಿಡಿಯೋ "ಕಾಟನ್ ಕ್ಯಾಂಡಿ" ಯಶಸ್ಸಿನ ನಂತರ ಈ ಸಾಹಸ ಯಾನ ಮಾಡುತ್ತಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ವಿಮಾನ ಚಾಲನೆ ಕನಸನ್ನೂ ನನಸು ಮಾಡಿಕೊಂಡಿದ್ದರು.

ಜಗತ್ತಿನ ಅತ್ಯಂತ ಎತ್ತರದ ಬ್ರಿಡ್ಜ್‌ ಎಂದು ಖ್ಯಾತಿ ಹೊಂದಿರುವ ಹಿಮಾಚಲ ಪ್ರದೇಶದ 'ಚಿಚಂ' ಮೇಲೆ ಹೋಗಿ ನಿಂತಿದ್ದಾರೆ (Chandan Shetty) ಸಿಂಗರ್ ಚಂದನ್ ಶೆಟ್ಟಿ. ನಟ ಹಾಗೂ ಸಿಂಗರ್ ಚಂದನ್ ಶೆಟ್ಟಿ ಅವರು ಕಳೆದ ವಾರ ಸ್ನೇಹಿತರೊಂದಿಗೆ ಕಾರಿನಲ್ಲಿ ಹಿಮಾಚಲ ಪ್ರದೇಶಕ್ಕೆ ಟೂರ್ ಹೋಗಿರುವುದು ಗೊತ್ತೇ ಇದೆ. ಸದ್ಯ ಹಿಮಾಚಲ ಪ್ರದೇಶ ತಲುಪಿರುವ ಚಂದನ್ ಶೆಟ್ಟಿ ಅಲ್ಲಿರುವ ಜಗತ್ತಿನ ಅತಿ ಎತ್ತರದ ಬ್ರಿಡ್ಜ್‌ ಚಿಚಂ (Chicham Bridge) ಮೇಲೆ ನಿಂತಿದ್ದಾರೆ. ಆ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ಚಂದನ್‌ ಶೆಟ್ಟಿ ಬೆಂಗಳೂರಿನಿಂದ ಕಾರಿನಲ್ಲಿ ಹೊರಟವರು ಮೊನ್ನೆ ನಾಗ್ಪುರ, ಆಗ್ರಾ ತಲುಪಿ, ಇದೀಗ ಹಿಮಾಚಲ ಪ್ರದೇಶಕ್ಕೆ ಕಾಲಿಟ್ಟಿದ್ದಾರೆ. ಅವರ ಕನಸಾಗಿದ್ದ ಈ ಜಾಗಕ್ಕೆ ಕಾಲಿಟ್ಟು, ಪುಳಕ ಅನುಭವಿಸಿರುವ ಚಂದನ್ ಶೆಟ್ಟಿ ತಮ್ಮ ಪ್ರಯಾಣದ ಬಹಳಷ್ಟು ಸಂಗತಿಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲವನ್ನೂ ತಮ್ಮ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. 

ಚಂದನ್ ಶೆಟ್ಟಿ ಆಗ್ರಾ ಸವಾರಿ, ಓಡ್ತಿರೋ ಕಾರಲ್ಲಿ ಏನ್ ಮಾಡ್ತಿದಾರೆ ಗುರೂ..?!

ಕೆಲವು ಮಾಹಿತಿ ಪ್ರಕಾರ, ಈ ಚಿಚಂ ಬ್ರಿಡ್ಜ್‌ ಜಗತ್ತಿನ ಎರಡನೆಯ ಎತ್ತರದ ಬ್ರಿಡ್ಜ್‌, ಏಷ್ಯಾದ ಮೊದಲನೆಯದು ಆಗಿದೆ. ಜಗತ್ತಿನಲ್ಲೇ ಎತ್ತರದ ಮೊದಲನೇ ಬ್ರಿಡ್ಜ್‌ ಚೀನಾದಲ್ಲಿರುವ ಬೈಪಾಂಜಿಯಂಗ್ (Beipanjiang Bridge). ಆದರೆ ಈ ಬಗ್ಗೆ ಕೆಲವು ವಿವಾದಗಳಿದ್ದರೂ ಈ ಚಿಚಂ ಬ್ರಿಡ್ಜ್‌ ಭಾರತದ ಹಾಗೂ ಏಷ್ಯಾದ ಅತ್ಯಂತ ಎತ್ತರದ ಬ್ರಿಡ್ಜ್‌ ಅಂತೂ ಹೌದು. ಈ ಬ್ರಿಡ್ಜ್‌ ಮೇಲೆ ನಿಂತು ಕನ್ನಡಿಗ, ಸಿಂಗರ್ ಹಾಗೂ ಆಕ್ಟರ್ ಚಂದನ್‌ ಶೆಟ್ಟಿ ಭಾರೀ ರೋಮಾಂಚನ ಅನುಭವಿಸಿದ್ದಾರಂತೆ. 

ಅಂದಹಾಗೆ, ಚಂದನ್ ಶೆಟ್ಟಿಯವರು ಇತ್ತೀಚೆಗೆ ತಮ್ಮ ಹೊಸ ಮ್ಯೂಸಿಕ್ ವಿಡೊಯೋ 'ಕಾಟನ್‌ ಕ್ಯಾಂಡಿ' ಸಕ್ಸಸ್‌' ಎಂಜಾಯ್ ಮಾಡುತ್ತಿದ್ದಾರೆ. ಈ ಕಾಟನ್‌ ಕ್ಯಾಂಡಿ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಆಗಿದ್ದು, ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದೆ. ಸದ್ಯ ಸಾಹಸ ಟೂರ್ ಜೊತೆಗೆ ಮ್ಯೂಸಿಕ್ ವಿಡಿಯೋದ ಪ್ರಚಾರವನ್ನು ಕೂಡ ಚಂದನ್ ಶೆಟ್ಟಿಯವರು ಮಾಡುತ್ತಿದ್ದಾರೆ.

ಎಲ್ಲಾ ಪ್ಯಾಕ್ ಮಾಡ್ಕೊಂಡು ಇದ್ದಕ್ಕಿದ್ದಂತೆ ಹಿಮಾಚಲ ಪ್ರದೇಶಕ್ಕೆ ಹೊರಟ ಚಂದನ್ ಶೆಟ್ಟಿ! 

ಒಟ್ಟಿನಲ್ಲಿ, ಅಡ್ವೆಂಚರ್‌ಗೆ ಮನಸ್ಸನ್ನು ರೆಡಿಯಾಗಿಸಿಕೊಂಡಿರುವ ಚಂದನ್ ಶೆಟ್ಟಿಯವರು ಹಿಮಾಚಲ ಪ್ರದೇಶದಲ್ಲಿ ಸದ್ಯ ಸಾಹಸಕ್ಕೆ ತಮ್ಮನ್ನು ಒಡ್ಡಿಕೊಂಡು ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಇದಕ್ಕೂ ಮೊದಲು ಅವರು ಆಸ್ಟ್ರೇಲಿಯಾದ ಸಿಡ್ನಿಗೆ ಹೋಗಿದ್ದರು. ಅಲ್ಲಿ ತಮ್ಮ ಬಾಲ್ಯದ 'ವಿಮಾನ ಓಡಿಸುವ' ಕನಸನ್ನು ನನಸು ಮಾಡಿಕೊಂಡು ಬಂದಿದ್ದಾರೆ. ಮುಂದೆ ಅದ್ಯಾವ ಸಾಹಸಕ್ಕೆ ರೆಡಿಯಾಗಲಿದ್ದಾರೆ ಚಂದನ್ ಶೆಟ್ಟಿ ಎಂಬುದನ್ನು ಕಾದು ನೋಡಬೇಕಾಗಿದೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್