ಚಂದನ್ ಶೆಟ್ಟಿ ಮತ್ತೊಂದು ಮದ್ವೆಯಾಗ್ತಿದ್ದಾರಾ? ಕಾರಿನ ವಿಷಯ ಹೇಳುತ್ತಲೇ ಮನದಾಳದ ಮಾತು ಬಿಚ್ಚಿಟ್ಟ ಗಾಯಕ
ಬಿಗ್ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡ ಮತ್ತು ಗಾಯಕ ಚಂದನ್ ಶೆಟ್ಟಿ ಡಿವೋರ್ಸ್ ಪಡೆದು ಹದಿನೈದು ದಿನಗಳಾದರೂ ಇಂದಿಗೂ ಇವರಿಬ್ಬರ ಅಭಿಮಾನಿಗಳು ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದೇ 7ರಂದು ಇಬ್ಬರೂ ಕೋರ್ಟ್‌ನಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಶಾಕ್ ಮೂಡಿಸಿದ್ದರು. ಇವರು ವಿಚ್ಛೇದನ ಪಡೆದಿರುವುದು ನಿಜವೋ ಹೌದೋ ಅಲ್ಲವೋ ಎಂದು ಅಭಿಮಾನಿಗಳು ಇಂಟರ್‌ನೆಟ್‌ನಲ್ಲಿ ತಡಕಾಡುವ ಹೊತ್ತಿನಲ್ಲಿಯೇ ಒಂದೇ ದಿನದಲ್ಲಿ ಡಿವೋರ್ಸ್ ಕೂಡ ಆಗಿಹೋಗಿತ್ತು. ಇವರು ವಿಚ್ಛೇದನ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಥಹರೇವಾರಿ ಕಾರಣಗಳನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದರು. ಕೊನೆಗೆ ಅವೆಲ್ಲವೂ ಸುಳ್ಳು ಎನ್ನುವ ಮೂಲಕ ಡಿವೋರ್ಸ್ ಬಳಿಕವೂ ಜೋಡಿ ಒಟ್ಟಾಗಿ ಬಂದು ಪತ್ರಿಕಾಗೋಷ್ಠಿ ನಡೆಸಿತ್ತು. ಇದೀಗ ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಮುಂದುವರೆದಿದ್ದಾರೆ. ನಿವೇದಿತಾ ಮತ್ತೆ ಮೊದಲಿನಂತೆಯೇ ರೀಲ್ಸ್‌ನಲ್ಲಿ ಮುಳುಗಿದ್ದರೆ, ಇತ್ತ ಚಂದನ್ ಶೆಟ್ಟಿ ಕೂಡ ತಮ್ಮ ಲೈಫ್‌ನಲ್ಲಿ ಮುಂದುವರೆದಿದ್ದಾರೆ.
ಮದ್ವೆಗೆ 60 ಲಕ್ಷ ಖರ್ಚು ಮಾಡಿಬಿಟ್ಟೆ, ದೊಡ್ಡ ಪಾಠ ಕಲಿಸಿತು ಲೈಫ್... ಚಂದನ್ ಶೆಟ್ಟಿ ಮನದಾಳದ ಮಾತು...
ಆದರೂ ಇವರ ಮದುವೆ ಮತ್ತು ವಿಚ್ಛೇದನ ಎರಡೂ ಹಾಟ್ ವಿಷಯವೇ ಆಗಿದೆ. ಇದೀಗ ಕಿರಿಕ್ ಕೀರ್ತಿಯವರು ನಡೆಸಿರುವ ಸಂದರ್ಶನದಲ್ಲಿ ಚಂದನ್ ಶೆಟ್ಟಿಯವರು ತಮ್ಮ ಮದುವೆ, ವಿಚ್ಛೇದನದ ಕುರಿತು ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ತಮ್ಮಿಬ್ಬರ ವಿಚ್ಛೇದನದ ಕುರಿತು ಹಲವು ರೀತಿಯಲ್ಲಿ ಮಾತುಗಳು ಕೇಳಿಬರುತ್ತಿದೆ. ಆದರೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮಿಬ್ಬರ ವಿರುದ್ಧ ಪದೇ ಪದೇ ಗಲಾಟೆಯಾಗುತ್ತಿದ್ದುದರಿಂದ ಮಾತುಕತೆ ಮೂಲಕವೇ ವಿಚ್ಛೇದನ ಪಡೆದುಕೊಂಡಿದ್ದೇವೆ ಎಂದು ಮತ್ತೊಮ್ಮೆ ಚಂದನ್ ಶೆಟ್ಟಿ ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಈ ವಿಷಯವನ್ನು ಚಂದನ್ ಅವರ ಅಪ್ಪ-ಅಮ್ಮ ಹೇಗೆ ಸ್ವೀಕರಿಸಿದರು ಎಂದು ಪ್ರಶ್ನೆ ಕೇಳಿದಾಗ, ಅವರಿಗೆ ತುಂಬಾ ಬೇಸರವಾಯಿತು. ಆದರೆ ನಮ್ಮಿಬ್ಬರ ನಡುವೆ ಆಗುತ್ತಿರುವ ಗಲಾಟೆಯ ಬಗ್ಗೆ ಹೇಳಿದಾಗ ಅವರೂ ಇದಕ್ಕೆ ಒಪ್ಪಿಕೊಂಡರು. ಕೊನೆಗೆ ನಾವೇ ಒಂದು ಹುಡುಗಿಯನ್ನು ನೋಡಿ ಮದ್ವೆ ಮಾಡುತ್ತೇವೆ ಎಂದೂ ಹೇಳಿದರು ಎಂಬ ವಿಷಯ ಬಹಿರಂಗ ಪಡಿಸಿದ್ದಾರೆ.
undefined
ಕೊನೆಗೆ ಇನ್ನೊಂದು ಮದುವೆಯಾಗುವ ಪ್ಲ್ಯಾನ್ ಇದೆಯೇ ಎಂಬ ಪ್ರಶ್ನೆಗೆ ಚಂದನ್ ಶೆಟ್ಟಿಯವರು, ಅರೆ ಕ್ಷಣ ಯೋಚನೆ ಮಾಡಿ, ಸದ್ಯ ಹಾಗೇನೂ ಪ್ಲ್ಯಾನ್ ಇಲ್ಲ. ಮದುವೆ ಎನ್ನೋದು ಕಾರು ರೀತಿ ಅಲ್ಲವಲ್ಲ, ಒಂದು ಹೋದ ಮೇಲೆ ಇನ್ನೊಂದು ತೆಗೆದುಕೊಳ್ಳುವುದಕ್ಕೆ. ಇನ್ನೂ ಸ್ವಲ್ಪ ಟೈಂ ಬೇಕು. ಈಗಿನ ಮಾನಸಿಕ ಸ್ಥಿತಿಯಿಂದ ಸ್ವಲ್ಪ ಹೊರಕ್ಕೆ ಬರಬೇಕು. ಸಡನ್ ಆಗಿ ಏನೂ ನಿರ್ಧಾರ ಮಾಡುವುದಿಲ್ಲ. ಈಗ ಏನಿದ್ದರೂ ನನ್ನ ಕರಿಯರ್ ಮೇಲೆ ಯೋಚನೆ. ಸ್ವಲ್ಪ ದಿನ ಹೋಗಲಿ. ಆಮೇಲೆ ಯೋಚನೆ ಮಾಡುತ್ತೇನೆ ಎಂದರು.
ಇದಕ್ಕೂ ಮುನ್ನ ರ್ಯಾಪಿಡ್ ರಶ್ಮಿ ಅವರ ಕಾರ್ಯಕ್ರಮದಲ್ಲಿಯೂ ಚಂದನ್ ಶೆಟ್ಟಿ ಹಲವು ವಿಷಯ ಮಾತನಾಡಿದ್ದರು. ಕೋವಿಡ್ ಸಮಯದಲ್ಲಿ ದುಡ್ಡನ್ನು ಹೇಗೆ ಮ್ಯಾನೇಜ್ ಮಾಡುವುದು ಎನ್ನುವುದನ್ನು ಕಲಿತೆ. ನಾನು ಮಾಡಿದ ಪ್ರಾಜೆಕ್ಟ್‌ಗಳಿಂದ ತುಂಬಾ ಸಕ್ಸಸ್ ಸಿಗುತ್ತದೆ ಎಂದು ಅಂದುಕೊಳ್ಳುವಷ್ಟರಲ್ಲಿಯೇ ಕೋವಿಡ್ ಬಂದು ಬರಸಿಡಿಲು ಬಡಿಯಿತು. ಆಗಷ್ಟೇ ನನ್ನ ಮದುವೆಯಾಯಿತು. ಮದುವೆಗೆ ಐವತ್ತರಿಂದ ಅರವತ್ತು ಲಕ್ಷ ರೂಪಾಯಿ ಖರ್ಚು ಮಾಡಿಬಿಟ್ಟೆ ಎನ್ನುತ್ತಲೇ ಜೀವನದಲ್ಲಿ ಮದುವೆ ಮತ್ತು ಹಣದ ಹೊಂದಾಣಿಕೆ ಕುರಿತು ಮಾತನಾಡಿದ್ದರು.
'ಹಾಳಾಗೋದೆ’ ಕೇಳಿ ಚಂದನ್ ಶೆಟ್ಟಿಗೆ ಪುನೀತ್ ರಾಜ್‌ಕುಮಾರ್ ಹೇಳಿದ್ದೇನು? ಆ ದಿನಗಳ ನೆನೆದ ಗಾಯಕ