"ದರ್ಶನ್ ಸರ್ ನೋಡಿ ನನಗೆ ಭಯ ಆಗ್ತಿದೆ, ದರ್ಶನ್ ಸರ್ ನನ್ನ ಸಿನಿಮಾ ಟ್ರೈಲರ್ ಲಾಂಚ್ ಮಾಡ್ತಿದ್ದಾರೆ. ನಾನು ಇದನ್ನ ಜೀವನದಲ್ಲಿ ಎಂದೂ ಮರೆಯೋಲ್ಲ. ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಗೆ ಫ್ಯಾನ್ ಆಗಿದ್ದೆ. ಅದೇ ನಿರ್ಮಾಣ ಸಂಸ್ಥೆಯಿಂದ ಅವಕಾಶ ಬಂದಿದ್ದು ನನ್ನ ಅದೃಷ್ಟ. ಈ ಸಿನಿಮಾದಲ್ಲಿ ನಟಿಸಿದ ನನಗೆ ಒಳ್ಳೆ ಪಾತ್ರದ ಜೊತೆ ಒಳ್ಳೆ ಹಾಡು ಕೂಡ ಸಿಕ್ತು. ನನ್ನನ್ನ ಇವತ್ತು ಎಲ್ಲರೂ ಸೂರ್ಯ ಕಾಂತಿ ಅಂತ ಕರೀತಿದ್ದಾರೆ" ಎಂದಿದ್ದಾರೆ ಪ್ರೇಮ್ ಪುತ್ರಿ ಅಮೃತಾ.
ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆಯಿತು. ಅಲ್ಲಿ ಟಗರು ಪಲ್ಯ ಚಿತ್ರತಂಡ ಭಾಗಿಯಾಗಿತ್ತು. ನಟ ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯಾ ಕಾರ್ಯಕ್ರಮಕ್ಕೆ ಡಾಲಿ ಧನಂಜಯ್, ನೆನಪಿರಲಿ ಪ್ರೇಮ್, ತಾರಾ ಅನುರಾಧಾ, ನೀನಾಸಂ ಸತೀಶ್, ರಂಗಾಯಣ ರಘು, ನಾಗಭೂಷಣ್ ಮುಂತಾದವರು ಹಾಜರಿದ್ದರು.
ನಟ ರಂಗಾಯಣ ರಘು "ಇದು ಧನ ಮತ್ತು ಜಯ ಎರಡನ್ನೂ ಹಂಚುವ ಕಥೆ. ಸಂಪೂರ್ಣವಾದ ಹಳ್ಳಿ ಸಿನಿಮಾ, ಪ್ರೇಮ್ ಮಗಳು ಬರೀ ಹೀರೋಯಿನ್ ಅಲ್ಲ ಅದ್ಭುತವಾಗಿ ನಟಿಸುತ್ತಾಳೆ. ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬಳು ಅದ್ಭುತ ನಟಿ ಅಮೃತಾ ಪ್ರೇಮ್ ಆಗ್ತಾರೆ. ಈ ಸಿನಿಮಾದಲ್ಲಿರೋ ಟಗರು ನನ್ನನ್ನ ತುಂಬಾ ಆಟ ಆಡಿಸ್ತು. ಈ ಸಿನಿಮಾದಲ್ಲಿ ಟಗರು ಕೂಡ ಒಂದು ಪಾತ್ರವಾಗಿದೆ. ಧನಂಜಯ್ ಗೆ ದೊಡ್ಡ ಸಾವಿರ ಶರಣು.." ಎಂದರು ನಟ ರಂಗಾಯಣ ರಘು. ಅಲ್ಲೇ ಪಕ್ಕದಲ್ಲಿದ್ದ ತಾರಾ ನೋಡಿ "ಅಯಯ್ಯೋ ನಮ್ ಹೆಂಗಸರನ್ನೇ ಮರೆತೆ.." ಎಂದು ರಂಗಾಯಣ ರಘು ಹಾಸ್ಯ ಚಟಾಕಿ ಹಾರಿಸಿದರು.
ಗೃಹಪ್ರವೇಶ : ಹಾಳಾದ ಧಾರಾವಾಹಿಗಳು ನೆಮ್ಮದಿ ಇಲ್ಲ, ಇಂಥವೆಲ್ಲ ನೋಡಿ ಬಿಪಿ ಶುಗರ್ ಬರುತ್ತೆ..!
ಟಗರು ಪಲ್ಯ ಟ್ರೈಲರ್ ಪ್ರೆಸ್ ಮೀಟ್‌ನಲ್ಲಿ ಮಾತನಾಡಿದ ಅಮೃತಾ ಪ್ರೇಮ್ "ದರ್ಶನ್ ಸರ್ ನೋಡಿ ನನಗೆ ಭಯ ಆಗ್ತಿದೆ, ದರ್ಶನ್ ಸರ್ ನನ್ನ ಸಿನಿಮಾ ಟ್ರೈಲರ್ ಲಾಂಚ್ ಮಾಡ್ತಿದ್ದಾರೆ. ನಾನು ಇದನ್ನ ಜೀವನದಲ್ಲಿ ಎಂದೂ ಮರೆಯೋಲ್ಲ. ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಗೆ ಫ್ಯಾನ್ ಆಗಿದ್ದೆ. ಅದೇ ನಿರ್ಮಾಣ ಸಂಸ್ಥೆಯಿಂದ ಅವಕಾಶ ಬಂದಿದ್ದು ನನ್ನ ಅದೃಷ್ಟ. ಈ ಸಿನಿಮಾದಲ್ಲಿ ನಟಿಸಿದ ನನಗೆ ಒಳ್ಳೆ ಪಾತ್ರದ ಜೊತೆ ಒಳ್ಳೆ ಹಾಡು ಕೂಡ ಸಿಕ್ತು.
ನನ್ನನ್ನ ಇವತ್ತು ಎಲ್ಲರೂ ಸೂರ್ಯ ಕಾಂತಿ ಅಂತ ಕರೀತಿದ್ದಾರೆ" ಎಂದು ಹೇಳಿ ಖುಷಿಯಿಂದ ಮಾತು ಮುಗಿಸಿದರು.
ನವಶಕ್ತಿ ನವರಾತ್ರಿ: ಅನಾಥ ಕಂದನಿಗೆ ಜಗನ್ಮಾತೆಯೇ ತಾಯಿ, ದುಷ್ಟರ ಪಾಲಿಗೆ ಅವಳೇ ಚಂಡಿ - ಚಾಮುಂಡಿ!!
ಇನ್ನು ನಟ ನೀನಾಸಂ ಸತೀಶ್ "ನಾನು ಟಗರು ಪಲ್ಯಾ ಸಿನಿಮಾ ನೋಡಿದ್ದೇನೆ. ನಮ್ಮ ಊರು, ಭಾಷೆ, ಸಂಪ್ರದಾಯ, ಸೊಗಡು ಎಲ್ಲವನ್ನೂ ಸೇರಿ ಟಗರು ಪಲ್ಯಾ ಮಾಡಿದ್ದಾರೆ. ನಟ ರಾಕ್ಷಸ ರಂಗಾಯಣ ರಘು, ನಟಿ ರಾಕ್ಷಸಿ ತಾರಾ ಮೇಡಂ" ಎಂದಿದ್ದಾರೆ. "ಈ ಸಮಯದಲ್ಲಿ ಮಾತನಾಡಿದ ವಾಸುಕಿ ವೈಭವ್ "ದರ್ಶನ್ ಸರ್ ಮನೆಯಲ್ಲಿ ಅನ್ನದ ಋಣ ನನಗಿದೆ. ದರ್ಶನ್ ಸರ್ ಆಡೋ ಮಾತುಗಳು ನಮ್ಮನ್ನ ಇನ್ಸ್ ಪೈರ್ ಮಾಡುತ್ತೆ.. ದರ್ಶನ್ ಸರ್ ಸಿನಿಮಾಗಳನ್ನ ಕಾಲೇಜಿಗೆ ಬಂಕ್ ಹಾಕಿ ಹಾಸ್ಟೆಲ್ ಬೇಲಿ ಹಾರಿಕೊಂಡು ಹೋಗಿ ನೋಡುತ್ತಿದ್ವಿ. ಈಗ ಅವರೇ ನಮ್ಮೆದುರು ಇದ್ದಾರೆ, ರೋಮಾಂಚನ ಆಗ್ತಿದೆ" ಎಂದಿದ್ದಾರೆ.