
ವಿವಿಧ ಭಾಷೆಗಳಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ನಟಿಯಾಗಿ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ನಗ್ಮಾ ಈಗ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅದುವೇ ಪಾಕ್ ಪತ್ರಕರ್ತನ ಪರ ನಿಂತು ನೀಡಿದ ಹೇಳಿಕೆ...
ಪಾಕ್ ಪತ್ರಕರ್ತರ ಪರ ನಿಂತ ನಗ್ಮಾ:
'ಬಿಜೆಪಿ ವಕ್ತಾರ ಪಾಕ್ ಪತ್ರಕರ್ತರ ತಾರೀಖ್ ಪೀಜರ್ದಾ ಕುರಿತು ಮಾತನಾಡಲು ಬಳಸಿರುವ ಕೆಟ್ಟ ಪದಗಳನ್ನು ನಾನೆಂದು ಊಹಿಸಿರಲಿಲ್ಲ. ಮಹಿಳಾ ಪತ್ರಕರ್ತರ ಬಗ್ಗೆಯೂ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅವರನ್ನು ಅವಮಾನಿಸುವುದೇ ನಿಮ್ಮ ಉದ್ದೇಶವಾದರೆ ಪಾಕಿಸ್ತಾನ ಪತ್ರಕರ್ತರನ್ನು ಚರ್ಚೆಗೆ ಏಕೆ ಕರೆಯುತ್ತೀರಿ' ಎಂದು ಟ್ಟಿಟ್ಟರ್‌ನಲ್ಲಿ ನಗ್ಮಾ ಜನಪ್ರಿಯ ವಾಹಿನಿಯೊಂದನ್ನು ಪ್ರಶ್ನಿಸಿದ್ದಾರೆ .
ದರ್ಶನ್ ಸ್ಪರ್ಶಕ್ಕೆ ಕಾದಿದ್ದ ಬಸವ; ಚಿಕಿತ್ಸೆ ಕೊಡಿಸಿ ಮಾನವೀಯತೆ ತೋರಿದ ಡಿ-ಬಾಸ್!
ನಗ್ಮಾ ಟ್ಟೀಟ್ ಟ್ರೆಂಡಿಂಗ್:
ನಗ್ಮಾ ಮಾಡಿರುವ ಟ್ಟೀಟ್ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ. ಬಿಜೆಪಿ ಹಾಗೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟೇ ಅಲ್ಲದೇ #NagmaStandsWithPakistan ಎಂಬ ಹ್ಯಾಷ್‌ಟ್ಯಾಗ್ 10,000 ಟ್ಟೀಟ್‌ಗಳಿಂದ ಟ್ರೆಂಡ್ ಆಗುತ್ತಿದೆ.
ಕಾರ್ಯಕ್ರಮದಲ್ಲಿ ನಡೆದದ್ದೇನು:
ಖ್ಯಾತ ಹಿಂದಿ ಸುದ್ದಿ ಮಾಧ್ಯವೊಂದರಲ್ಲಿ ಬಿಜೆಪಿ ವಕ್ತಾರ ಹಾಗೂ ಪಾಕಿಸ್ತಾನದ ಪತ್ರಕರ್ತರ ನಡುವೆ ಚರ್ಚೆ ಏರ್ಪಡಿಸಲಾಗಿತ್ತು. ಬಿಜೆಪಿ ವಕ್ತಾರ ಪಾಕ್ ಪತ್ರಕರ್ತರನ್ನು ಮಾತನಾಡಲು ಬಿಡದೆ ತಾನೇ ಜೋರು ಧ್ವನಿಯಲ್ಲಿ ಅವರನ್ನು ಖಂಡಿಸಿದ್ದಾರೆ. ಈ ಕಾರ್ಯಕ್ರಮವನ್ನು ವೀಕ್ಷಿಸಿದ ನಗ್ಮಾ ಟ್ಟೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಗ್ಮಾ ನಮ್ಮ ಕನ್ನಡದ ನಟಿಯೂ ಹೌದು:
ಯಸ್. ನಗ್ಮಾ ಹಿಂದಿ ಹಾಗೂ ತಮಿಳು ಸಿನಿಮಾಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಬಹುಬೇಡಿಕೆಯ ನಟಿಯಾಗಿ ಮಿಂಚಿದ ನಗ್ಮಾ ಕನ್ನಡ ಸಿನಿಮಾಗಳಾದ ಕುರುಬನ ರಾಣಿ, ರವಿಮಾಮ ಹಾಗೂ ಹೃದಯವಂತ ಚಿತ್ರಗಳಲ್ಲಿ ಮಿಂಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.