ನಿರ್ಮಾಪಕಿ ರಮ್ಯಾಗೆ ನಿರಾಳ: 'ಸ್ವಾತಿ ಮುತ್ತಿನ ಮಳೆಹನಿಯೇ' ಸಿನಿಮಾಗೆ ತಡೆಯಾಜ್ಞೆ ತೆರವು

Published : Apr 05, 2023, 06:00 PM IST
ನಿರ್ಮಾಪಕಿ ರಮ್ಯಾಗೆ ನಿರಾಳ: 'ಸ್ವಾತಿ ಮುತ್ತಿನ ಮಳೆಹನಿಯೇ' ಸಿನಿಮಾಗೆ ತಡೆಯಾಜ್ಞೆ ತೆರವು

ಸಾರಾಂಶ

ರಮ್ಯಾ ನಿರ್ಮಾಣದ ಮೊದಲ ಸಿನಿಮಾ 'ಸ್ವಾತಿ ಮುತ್ತಿನ ಮಳೆಹನಿಯೇ' ಚಿತ್ರಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಸಿಟಿ ಸಿವಿಲ್ ಕೋರ್ಟ್ ತೆರವುಗೊಳಿಸಿದೆ. 

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣದ ಮೊದಲ ಸಿನಿಮಾ 'ಸ್ವಾತಿ ಮುತ್ತಿನ ಮಳೆ‌ಹನಿಯೇ' ಟೈಟಲ್‌ ವಿವಾದಕ್ಕೆ ಸಿಲುಕಿತ್ತು. ಈ ಸಿನಿಮಾದ ಟೈಟಲ್ ಬಳಸದಂತೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ರಮ್ಯಾ ಪರ ಆದೇಶ ಬಂದಿದ್ದು ಚಿತ್ರ ನಿರ್ಮಾಣ ಸಂಬಂಧ ನೀಡಿದ್ದ ತಡೆಯನ್ನು ಸಿಟಿ ಸಿವಿಲ್ ಕೋರ್ಟ್ ತೆರವುಗೊಳಿಸಿದೆ. 

ಸ್ವಾತಿ ಮುತ್ತಿನ ಮಳೆಹನಿಯೇ ಟೈಟಲ್ ತಡೆ ಕೋರಿ ರಾಜೇಂದ್ರ ಸಿಂಗ್ ಬಾಬು ಕೋರ್ಟ್ ಮೆಟ್ಟಿಲೇರಿದ್ದರು. ಆದರೀಗ ರಮ್ಯಾ ಪರ ಬಂದಿರುವುದು ದೊಡ್ಡ ರಿಲೀಫ್ ಸಿಕ್ಕಿದೆ. ಚಿತ್ರ ನಿರ್ಮಾಣ ಮಾಡಲು ರಮ್ಯಾ ಅವರಿಗಿದ್ದ ಅಡ್ಡಿ ನಿವಾರಣೆಯಾಗಿದೆ. ಕೋರ್ಟ್ ಜೂನ್ 1ಕ್ಕೆ‌ ವಿಚಾರಣೆ ಮುಂದೂಡಿದೆ. 

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ 'ಸ್ವಾತಿ ಮುತ್ತಿನ ಮಳೆಹನಿಯೇ' ಸಿನಿಮಾ ನಿರ್ಮಾಣ ಮಾಡುವ ಮೂಲಕ ಅನೇಕ ವರ್ಷಗಳ ಬಳಿಕ ಸಿನಿಮಾರಂಗಕ್ಕೆ ಪಾವಾಸ್ ಆಗಿದ್ದಾರೆ.  ಆದರೆ ಸಿನಿಮಾ ಸೆಟ್ಟೇರಿ ಕೆಲವೇ ದಿನಕ್ಕೆ ರಾಜೇಂದ್ರ ಸಿಂಗ್ ಬಾಬು ರಮ್ಯಾ ಸಿನಿಮಾದ ವಿರುದ್ಧ ದೂರು ನೀಡಿದ್ದರು. ಈ ಶೀರ್ಷಿಕೆ ಬಳಸದಂತೆ ರಾಜೇಂದ್ರ ಸಿಂಗ್ ಬಾಬು ಅಕ್ಷೇಪ ಎತ್ತಿದ್ದರು. ಈ ಕುರಿತು ಸಿಂಗ್ ಬಾಬು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು, ಈ ಶೀರ್ಷಿಕೆಯನ್ನು ಯಾರಿಗೂ ಕೊಡಬಾರದು ಎಂದು ಖಡಕ್​ ಆಗಿ ತಿಳಿಸಿದ್ದರು. 

Ramya: ಡಾಲಿಗೆ ಭರ್ಜರಿ ಕಾರು ಗಿಫ್ಟ್​ ಸಿಗ್ತಿದ್ದಂತೆಯೇ ರಮ್ಯಾ ಇಟ್ರು ಹೊಸ ಕೋರಿಕೆ!

ಒಂದು ಟೈಟಲ್ ನೀಡಿದ್ದೇ ಆದರೆ ಕೃತಿಚೌರ್ಯವಾಗುತ್ತೆ ಎಂದು ಹೇಳಿದ್ದರು. ರಾಜೇಂದ್ರ ಸಿಂಗ್​ ಬಾಬು ಅವರು ಈ ಶೀರ್ಷಿಕೆಯನ್ನು ಈಗಾಗಲೇ ನೋಂದಾಯಿಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದರು. 'ಸ್ವಾತಿ ಮುತ್ತಿನ ಮಳೆಹನಿಯೇ' ರಮ್ಯಾ ಅವರ  ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯಲ್ಲಿ ಮೂಡಿಬರುತ್ತಿದ್ದು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿ ನಟಿಸಿದ್ದಾರೆ. 

ಎಲ್ಲಾ ಅಜ್ಜಿಯರಿಗಾಗಿ ಮುಂದಿನ ಶೋನಲ್ಲಿ ಕನ್ನಡ ಮಾತಾಡ್ತೀನಿ; ಟ್ರೋಲ್‌ಗೆ ರಮ್ಯಾ ಪ್ರತಿಕ್ರಿಯೆ

'ಸ್ವಾತಿ ಮುತ್ತಿನ ಮಳೆಹನಿಯೇ' 1990ರಲ್ಲಿ ಬಂದ ಬಣ್ಣದ ಗೆಜ್ಜೆ ಸಿನಿಮಾದ ಫೇಮಸ್ ಹಾಡಿನ ಸಾಲು ಇದಾಗಿದೆ.  ಆ ಸಿನಿಮಾವನ್ನು ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು. ಆ ಹಾಡು ಇಂದಿಗೂ ಅಷ್ಟೆ ಫೇಮಸ್. ಅದೇ ಹಾಡಿನ ಸಾಲನ್ನು ಇಟ್ಟುಕೊಂಡು ರಮ್ಯಾ ತನ್ನ ಮೊದಲ ನಿರ್ಮಾಣದ ಸಿನಿಮಾಗೆ ಟೈಟಲ್ ಇಟ್ಟಿದ್ದರು. ಆದರೀಗ ರಾಜೇಂದ್ರ ಸಿಂಗ್ ಬಾಬು ತಕರಾರು ತೆಗೆದಿದ್ದರು. ಇದೀಗ ಕೋರ್ಟ್ ರಮ್ಯಾ ಪರ ತೀರ್ಪು ನೀಡುವ ಮೂಲಕ ದೊಡ್ಡ ರಿಲೀಫ್ ನೀಡಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ 'ಸ್ವಾತಿ ಮುತ್ತಿನ ಮಳೆಹನಿಯೇ' ಸದ್ಯದಲ್ಲೇ ತೆರೆಮೇಲೆ ಬರುವ ಸಾಧ್ಯತೆ ಇದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?
ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ