Gorgeous ರಶ್ಮಿಕಾ ಮಂದಣ್ಣ ಎಂದು ಬರ್ತಡೇ ವಿಶ್ ಮಾಡಿದ ರಕ್ಷಿತ್ ಶೆಟ್ಟಿ; ನಿಜವಾದ ಕರ್ಣ ಗುರು ನೀನು ಎಂದ ನೆಟ್ಟಿಗರು

Published : Apr 05, 2023, 03:56 PM IST
Gorgeous ರಶ್ಮಿಕಾ ಮಂದಣ್ಣ ಎಂದು ಬರ್ತಡೇ ವಿಶ್ ಮಾಡಿದ ರಕ್ಷಿತ್ ಶೆಟ್ಟಿ; ನಿಜವಾದ ಕರ್ಣ ಗುರು ನೀನು ಎಂದ ನೆಟ್ಟಿಗರು

ಸಾರಾಂಶ

ನಿರ್ಮಾಣ ಸಂಸ್ಥೆ ಮೂಲಕ ರಶ್ಮಿಕಾಗೆ ವಿಶ್ ಮಾಡಿದ ರಕ್ಷಿತ್. ರಿಪ್ಲೈ ಕೊಟ್ಟಿಲ್ಲ ಎಂದು ಅಭಿಮಾನಿಗಳು ಗರಂ

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇಂದು 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಸಿನಿ ಸ್ನೇಹಿತರು ವಿಶ್ ಮಾಡುವುದು ತುಂಬಾನೇ ಕಾಮನ್ ಆದರೆ ನಿರೀಕ್ಷೆ ಹೆಚ್ಚಿಸುವುದು ಮಾತ್ರ ಎಕ್ಸ್‌ ಬಾಯ್‌ಫ್ರೆಂಡ್ ರಕ್ಷಿತ್ ಶೆಟ್ಟಿ ವಿಶ್. ಕಳೆದ ವರ್ಷವೂ ರಕ್ಷಿತ್ ವಿಶ್ ಮಾಡಿದ್ರೂ ಈ ಸಲವೂ ರಕ್ಷಿತ್ ವಿಶ್ ಮಾಡಿದ್ದಾರೆ...ಆದರೆ ನಿರ್ಮಾಣ ಸಂಸ್ಥೆ ಮೂಲಕ.

ಹೌದು! Gorgeous ರಶ್ಮಿಕಾ ಮಂದಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಂತೋಷ, ನಗು ಮತ್ತು ಯಶಸ್ಸಿನಿಂದ ಈ ವರ್ಷ ತುಂಬಿರಲಿ' ಎಂದು ಪರಂವಃ ಸ್ಟುಡಿಯೋಸ್ ವತಿಯಿಂದ ವಿಸ್ ಮಾಡಿದ್ದಾರೆ. ಖಸತ್ ಹಾಟ್ ಅಗಿರುವ ರಶ್ಮಿಕಾ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಪೋಸ್ಟ್‌ ಹಾಕಲಾಗಿದೆ ಸಾವಿರಾರು ಲೈಕ್‌ ಮತ್ತು ಕಾಮೆಂಟ್‌ಗಳು ಬಂದಿದೆ. 'ನಿರ್ಮಾಣ ಸಂಸ್ಥೆ ಯಾವುದು ಎಂದು ಗೊತ್ತಾ ರಶ್ಮಿಕಾ?' , 'ಒಂದು ನಿಮಿಷ ಫೇಕ್ ಖಾತೆ ಅಂದುಕೊಂಡೆ ಆದರೆ ರಕ್ಷಿತ್ ಸ್ವಾಭಿಮಾನಿ ವಿಶ್ ಮಾಡಿದ್ದಾರೆ' , 'ನಿಮ್ಮ ಹುಟ್ಟುಹಬ್ಬ ಇದ್ದಾಗ ತಿರುಗೂ ನೋಡಲ್ಲ ಇವ್ರು ಇಷ್ಟು ಒಳ್ಳೆ ತನ ಯಾಕಣ್ಣ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಚಿತ್ರರಂಗದ ದಾರಿ ತೋರಿಸಿದ್ದೇ ರಕ್ಷಿತ್-ರಿಷಬ್; ಅಚ್ಚರಿ ಮೂಡಿಸಿದ ರಶ್ಮಿಕಾ ಮಾತು, ಬದಲಾವಣೆ ಯಾಕೆಂದ ನೆಟ್ಟಿಗರು

ಕಳೆದ ಒಂದೆರಡು ವರ್ಷಗಳಿಂದ ರಕ್ಷಿತ್ ಮತ್ತು ರಶ್ಮಿಕಾ ಸೋಷಿಯಲ್ ಮೀಡಿಯಾ ಮೂಲಕ ಒಬ್ಬರಿಗೊಬ್ಬರು ಬರ್ತಡೇ ವಿಶ್ ಮಾಡುತ್ತಾರೆ. ಸಿನಿಮಾ ವಿಚಾರವಾಗಿ ಯಾವ ಚರ್ಚೆ ಮಾಡಿಲ್ಲ ಆದರೆ ಕೆಲವು ತಿಂಗಳಗಳ ಹಿಂದೆ ಯಾವ ನಿರ್ಮಾಣ ಸಂಸ್ಥೆ ಹೆಸರು ಹೇಳುವುದಕ್ಕೆ ಎರಡು ಸಲ ಯೋಚನೆ ಮಾಡಿದ್ರೋ ಅದೇ ಸಂಸ್ಥೆ ಇಂದು ವಿಶ್ ಮಾಡಿರುವುದು ಅಚ್ಚರಿ ವಿಚಾರ. ನಿಜವಾದ ಕರ್ಣ ಗುರು ನೀನು ಎಂದು ರಕ್ಷಿತ್‌ಗೆ ಅನೇಕರು ಬುದ್ಧಿ ಮಾತು ಕೇಳಿದ್ದಾರೆ. 

2016ರಲ್ಲಿ ರಿಲೀಸ್ ಆದ ಕಿರಿಕ್ ಪಾರ್ಟಿ ರಶ್ಮಿಕಾ ವೃತ್ತಿ ಬದುಕಿಗೆ ಬಿಗ್ ಟ್ವಿಸ್ಟ್‌ ನೀಡಿತ್ತು. ಕರ್ಣ ಪಾತ್ರದಲ್ಲಿ ರಕ್ಷಿತ್ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಇಬ್ಬರು ನೆಮ್ ಆಂಡ್ ಫೇಮ್ ಗಳಿಸಿದರು...ಸ್ನೇಹದಿಂದ ಪ್ರೀತಿ ಹುಟ್ಟಿ ಕೆಲವು ತಿಂಗಳುಗಳ ಕಾಲ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದುಕೊಂಡು ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಕೆಲವೊಂದು ವೈಯಕ್ತಿಕ ಕಾರಣಗಳಿಂದ ರಶ್ಮಿಕಾ ಮತ್ತು ರಕ್ಷಿತ್ ಬ್ರೇಕಪ್ ಮಾಡಿಕೊಂಡರು. ಬ್ರೇಕಪ್‌ನಿಂದ ಹೊರ ಬರಬೇಕು ಎಂದು ರಕ್ಷಿತ್ ಕೆಲವು ವರ್ಷಗಳ ಕಾಲ ಸೋಷಿಯಲ್ ಮೀಡಿಯಾದಿಂದ ದೂರ ಉಳಿದುಬಿಟ್ಟಿದ್ದರು. ರಶ್ಮಿಕಾ ಮಾತ್ರ ಸಖತ್ ಆಕ್ಟಿವ್ ಆಗಿದ್ದಾರೆ.

ಹತ್ತಿದ ಮೆಟ್ಟಿಲು ಮರೀಬಾರ್ದು, ಒದ್ದು ಹೋದರೆ ಏರಲು ಅವಕಾಶವಿಲ್ಲ: ರಶ್ಮಿಕಾಗೆ ಪ್ರಮೋದ್ ಶೆಟ್ಟಿ ಟಾಂಗ್

ಅಭಿಮಾನಿಗಳ ಒತ್ತಾಯಕ್ಕೆ ರಕ್ಷಿತ್ ತಮ್ಮ ಹುಟ್ಟುಹಬ್ಬದ ದಿನ ಸೋಷಿಯಲ್ ಮೀಡಿಯಾಗೆ ಕಮ್ ಬ್ಯಾಕ್ ಮಾಡಿ ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಹೆಚ್ಚಿಗೆ ತೊಡಗಿಸಿಕೊಂಡರು. ಈ ಅವಧಿಯಲ್ಲಿ ರಶ್ಮಿಕಾ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಿಗೆ ಸಹಿ ಮಾಡಿ ನ್ಯಾಷನಲ್ ಕ್ರಶ್ ಆಗಿಬಿಟ್ಟರು.  ರಶ್ಮಿಕಾ ಬೆಳವಣಿಗೆ ಕಂಡು ಅಶ್ಚರ್ಯ ಪಟ್ಟ ರಕ್ಷಿತ್ ಮೆಚ್ಚುಗೆ ಕೂಡ ವ್ಯಕ್ತ ಪಡಿಸಿದ್ದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪೈರಸಿ ವಿರುದ್ಧವೇ ನನ್ನ ಯುದ್ಧ ಎಂದ ಸುದೀಪ್: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ
ಮಲಯಾಳಂ ಸ್ಟಾರ್ ಮೋಹನ್‌ಲಾಲ್ ಸಿನಿಮಾದಲ್ಲಿ ಮಿಂಚಲಿರೋ ಸಮರ್ಜಿತ್‌ ಲಂಕೇಶ್; ಯಾವ ಪಾತ್ರ..?