ಸಿಕ್ಕಾಪಟ್ಟೆ ಫಿಲ್ಟರ್‌ ಇತ್ತು ಅದು ಪಾಸ್ ಆದ್ಮೇಲೆ ನನ್ನ ಗರ್ಲ್‌ಫ್ರೆಂಡ್‌ನ ಮನೆಯಲ್ಲಿ ಒಪ್ಪಿಕೊಂಡಿದ್ದು: ರಾಣಾ ಹೇಳಿಕೆ ವೈರಲ್

Published : Feb 05, 2025, 12:25 PM IST
ಸಿಕ್ಕಾಪಟ್ಟೆ ಫಿಲ್ಟರ್‌ ಇತ್ತು ಅದು ಪಾಸ್ ಆದ್ಮೇಲೆ ನನ್ನ ಗರ್ಲ್‌ಫ್ರೆಂಡ್‌ನ ಮನೆಯಲ್ಲಿ ಒಪ್ಪಿಕೊಂಡಿದ್ದು: ರಾಣಾ ಹೇಳಿಕೆ ವೈರಲ್

ಸಾರಾಂಶ

ಏಳು ವರ್ಷಗಳ ಪ್ರೀತಿಯ ಬಳಿಕ ನಟ ರಾಣಾ ಹಾಗೂ ಫ್ಯಾಷನ್ ಡಿಸೈನರ್ ರಕ್ಷಿತಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ರಾಣಾ ಅವರ ಎರಡನೇ ಚಿತ್ರ ಆರಂಭವಾಗಿದ್ದು, ವೃತ್ತಿಜೀವನದಲ್ಲಿ ಸ್ಥಿರತೆ ಕಂಡುಕೊಂಡ ಬಳಿಕ ಮದುವೆಯಾಗುತ್ತಿರುವುದಕ್ಕೆ ರಕ್ಷಿತಾ ಪ್ರೇಮ್ ಸಂತಸ ವ್ಯಕ್ತಪಡಿಸಿದ್ದಾರೆ. ಕುಟುಂಬದಲ್ಲಿ ಹಬ್ಬದ ವಾತಾವರಣ నెలకొಂಡಿದೆ.

ಏಕ್ ಲವ್ ಯಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ರಾಣಾ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸುಮಾರು 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗುತ್ತಿರುವ ಖುಷಿಯಲ್ಲಿದ್ದಾರೆ. ಮದುವೆ ಬಗ್ಗೆ ಅಕ್ಕ ರಕ್ಷಿತಾ ಪ್ರೇಮ್ ಮಾತನಾಡಿದ್ದಾರೆ.

'ರಕ್ಷಿತಾ ಪ್ಯಾಷನ್ ಡಿಸೈನರ್ ಆಗಿದ್ದಾಳೆ. ತುಂಬಾ ಒಳ್ಳೆ ಹುಡುಗಿ ಕೂಡ. 7 ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದಾರೆ, ರಾಣಾ ವೃತ್ತಿ ಜೀವನದಲ್ಲಿ ಸೆಟ್ ಆಗಬೇಕು ಎಂದು ಆಕೆ ಕಾದಿದ್ದಾಳೆ. ಈಗ ರಾಣಾ ಮದುವೆಯಾಗುವುದು ಸರಿಯಾದ ಸಮಯ ಏಕೆಂದರೆ ಅವನ ಎರಡನೇ ಸಿನಿಮಾ ಶುರುವಾಗಿದೆ, ಈ ವರ್ಷ ತುಂಬಾ ಚೆನ್ನಾಗಿ ಶುರುವಾಗಿದೆ. ಸತ್ಯ ಹೇಳಬೇಕು ಅಂದ್ರೆ ಆ ಹುಡುಗಿ ತುಂಬಾ ಒಳ್ಳೆಯವಳು. ಒಬ್ಬರ ಹೆಸರು ರಕ್ಷಿತಾ ಅನ್ನೋದು ಸಮಸ್ಯೆ ಆಗಲ್ಲ ಏಕೆಂದರೆ ನನ್ನ ಹುಟ್ಟು ಹೆಸರು ಶ್ವೇತಾ ಅಂತ. ಮನೆಯಲ್ಲಿ ಮ್ಯಾನೇಜ್ ಮಾಡುತ್ತೀವಿ. ಆಕೆ ತುಂಬಾ ಸಿಂಪಲ್ ಹುಡುಗಿ ಅವರ ಫ್ಯಾಮಿಲಿ ಕೂಡ ಆರ್ಥೊಡಾಕ್ಸ್. ಮದುವೆ ಮಾಡಿಸುವುದು ಸುಲಭ ಆದರೆ ಕಾರ್ಡ್ ಹಂಚುವುದು ತುಂಬಾ ಕಷ್ಟ ಏಕೆಂದರೆ ಮನೆಯಲ್ಲಿ ಯಾರಿದ್ದಾರೆ ಯಾರಿಲ್ಲ ಎಂದ ನೋಡ್ಕೊಂಡು ಹೋಗಬೇಕು. ತುಂಬಾ ವರ್ಷಗಳ ನಂತರ ನಮ್ಮ ಕುಟುಂಬದಲ್ಲಿ ಒಂದು ಸೆಲೆಬ್ರೆಷನ್ ಶುರುವಾಗಿದೆ' ಎಂದು ಪ್ರೆಸ್‌ಮೀಟ್‌ನಲ್ಲಿ ರಕ್ಷಿತಾ ಮಾತನಾಡಿದ್ದಾರೆ. 

ಒಂದೇ ಮನೆಯಲ್ಲಿ ಇಬ್ರು ರಕ್ಷಿತಾ; ಅವಳ ಹೆಸರಲ್ಲಿ ಇವಳನ್ನ ಕೂಗ್ಬುಟ್ಟು ಜೀವಂತ ಉಳ್ಕೊಂತಾರಾ ಜೋಗಿ ಪ್ರೇಮ್‌?

'ಮುಂಬೈ, ಮಂಗಳೂರು ಹಾಗೂ ಕುಂದಾಪುರದಿಂದ ಸಂಬಂಧಿಕರು ಬರುತ್ತಿದ್ದಾರೆ ಅನ್ನೋ ಖುಷಿ ಇದೆ. ಖಂಡಿತಾ ಮನೆಯಲ್ಲಿ ವಿವಿಐಪಿಗಳು ಇರುತ್ತಾರೆ. ನನ್ನ ಜೀವನದಲ್ಲಿ ತುಂಬಾ ಕೈ ಹಿಡಿದಿದ್ದು ಪ್ರೇಸ್‌-ಮೀಡಿಯಾ, ಈಗ ಅವರು ನಮ್ಮ ಮನೆಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಖುಷಿ ಇದೆ. ಮದುವೆ ಅನ್ನೋದು ಪ್ರೈವೇಟ್ ಕಾರ್ಯಕ್ರಮ ಆಗಿರಬೇಕು ಏಕೆಂದರೆ ಒಂದು ಹೆಣ್ಣಿನ ಈ ದಿನ ಮುಖ್ಯವಾಗುತ್ತದೆ. ತಾಳಿ ಕಟ್ಟಿಸಿಕೊಳ್ಳುವುದು, ಸಪ್ತಪದಿ ತುಳಿಯುವುದು ಪ್ರತಿಯೊಂದು ವಿಶೇಷವಾಗಿರುತ್ತದೆ...ನನ್ನ ಮದುವೆಯಲ್ಲಿ ಸಮಸ್ಯೆ ಆಗಿದ್ದು ನನ್ನ ಸೋದರ ಮಾವ ಇರಲಿಲ್ಲ. ನನ್ನ ಮಾವ ಅಂತ ಹೇಳಿಕೊಂಡು ಬಂದರೂ ಅಯ್ಯೋ ಸುಮಾರು ಜನ ಮಾವ ಅಂತ ಹೇಳಿಕೊಂಡು ಬರುತ್ತಾರೆ ಹೋಗಿ ಅಂದುಬಿಟ್ಟಿದ್ದರು. ನನ್ನ ಮದುವೆಯಲ್ಲಿ ತುಂಬಾ ಜನರಿದ್ದರು ಆಕ ಕಷ್ಟ ಆಗಿತ್ತು. ಆಗ ಇಷ್ಟು ಮೀಡಿಯಾ ಇರಲಿಲ್ಲ ಇಷ್ಟು ಯೂಟ್ಯೂಬರ್‌ಗಳು ಕೂಡ ಇರಲಿಲ್ಲ. ನಾನು ಕಾರ್ಡ್ ಕೊಡುವುದರಲ್ಲಿ ಬ್ಯುಸಿಯಾಗಿರುವೆ. ರಾಣಾ ಮತ್ತು ಅವರ ಭಾವ ಪತ್ನಿ ರಕ್ಷಿತಾ ಇಡೀ ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆಕೆನೆ ಡಿಸೈನರ್ ಆಗಿರುವ ಕಾರಣ ಅವರೇ ಔಟ್‌ಫಿಟ್ ರೆಡಿ ಮಾಡುತ್ತಿರುವುದು' ಎಂದು ರಕ್ಷಿತಾ ಹೇಳಿದ್ದಾರೆ. 

ಆಂಟಿ ಅನ್ನೋ ಪದಕ್ಕೆ ಕೆಟ್ಟ ಅರ್ಥ ಕೊಟ್ಟಿದ್ದಾರೆ..ನಾನೇನು ಬಟ್ಟೆ ಬಿಚ್ಚಿ ಓಡಾಡುತ್ತಿದ್ದೀನಾ?: ಅನಸೂಯ ಭಾರದ್ವಾಜ್

'ಹುಡುಗಿ ಅಂದ್ರೆ ಹಾಗಿರಬೇಕು ಹೀಗಿರಬೇಕು ಅಂತ ತುಂಬಾ ಇತ್ತು. ಅಲ್ಲದೆ ಇವರ ಫಿಲ್ಟರ್‌ಗಳು ಜಾಸ್ತಿನೇ ಇತ್ತು. ನನಗಿಂತ ಅಕ್ಕ ಮತ್ತು ರಕ್ಷಿತಾ ಮಾತನಾಡುತ್ತಿರುತ್ತಾರೆ. ಎಲ್ಲಾ ಫಿಲ್ಟರ್‌ಗಳು ಪಾಸ್ ಆಗಿದೆ ಅದಿಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ. ಜಾಸ್ತಿ ದಿನ ನಮ್ಮ ಪ್ರೀತಿ ವಿಚಾರವನ್ನು ಮುಚ್ಚಿಟ್ಟಿಲ್ಲ. ಇಷ್ಟು ವರ್ಷ ನೂಕಿ ಬಂದಿದ್ದು ಸಣ್ಣ ಕಾರಣಕ್ಕೆ. ಫ್ಯಾಮಿಲಿಯಲ್ಲಿ ಮೊದಲು ಹೇಳಿದ್ದು ಅಕ್ಕಂಗೆ. 7 ವರ್ಷಗಳ ಹಿಂದೆ ನಾವು ಭೇಟಿ ಮಾಡಿದ್ದು...ಪ್ರಪೋಸ್ ಹುಡುಗರೇ ಮಾಡಬೇಕು ಅದಿಕ್ಕೆ ನಾನು ಮಾಡಿದ್ದು. ರಕ್ಷಿತಾ ತುಂಬಾ ವರ್ಷಗಳಿಂದ ನನಗಾಗಿ ಕಾದಿದ್ದಾಳೆ. ಅವಳ ಸಪೋರ್ಟ್‌ನಿಂದ ಪ್ರತಿಯೊಂದನ್ನು ಬ್ಯಾಲೆನ್ಸ್ ಮಾಡುತ್ತಿದ್ದೀನಿ' ಎಂದಿದ್ದಾರೆ ರಾಣಾ. 

ನನಗೆ ಆರೋಗ್ಯ ಸರಿಯಾಗಿಲ್ಲ ಅಷ್ಟರಲ್ಲಿ ಶೋ ಶೂಟಿಂಗ್ ಆರಂಭಿಸಿ ಬಿಟ್ಟರು; ಸತ್ಯ ರಿವೀಲ್ ಮಾಡಿದ ಭವ್ಯಾ ಗೌಡ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ