ರಾಧಿಕಾ ಕುಮಾರಸ್ವಾಮಿ ಯಶಸ್ಸಿನ 'ಆ ಗುಟ್ಟು' ಯಾರೂ ಹೇಳ್ತಿಲ್ಲ ಯಾಕೆ?.... ಗಟ್ಸ್ ಇಲ್ವಾ?

Published : Feb 05, 2025, 12:14 PM ISTUpdated : Feb 05, 2025, 03:46 PM IST
ರಾಧಿಕಾ ಕುಮಾರಸ್ವಾಮಿ ಯಶಸ್ಸಿನ 'ಆ ಗುಟ್ಟು' ಯಾರೂ ಹೇಳ್ತಿಲ್ಲ ಯಾಕೆ?.... ಗಟ್ಸ್ ಇಲ್ವಾ?

ಸಾರಾಂಶ

ರಾಧಿಕಾ ಕುಮಾರಸ್ವಾಮಿ 'ನೀಲ ಮೇಘ ಶ್ಯಾಮ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, 'ನಿನಗಾಗಿ' ಚಿತ್ರದಿಂದ ಖ್ಯಾತಿ ಗಳಿಸಿದರು. ಮದುವೆಯ ಬಳಿಕ ಸಿನಿಮಾದಿಂದ ವಿರಾಮ ಪಡೆದು, 'ಲಕ್ಕಿ' ಚಿತ್ರ ನಿರ್ಮಿಸಿದರು. ವೃತ್ತಿಪರತೆ, ಸರಳತೆ, ಸಹಕಾರ ಮನೋಭಾವದಿಂದ ಚಿತ್ರರಂಗದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ವಿವಾದಗಳಿಂದ ದೂರ ಉಳಿದು, ಸಿನಿಮಾ ಪ್ರೀತಿಯಿಂದ ಇಂದಿಗೂ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿ (Radhika Kumaraswamy) ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ. 'ನೀಲ ಮೇಘ ಶ್ಯಾಮ' ಚಿತ್ರದ ಮೂಲಕ ಸಿನಿಮಾ ಕೆರಿಯರ್ ಆರಂಭಿಸಿದ ನಟಿ ರಾಧಿಕಾ, 'ನಿನಗಾಗಿ' ಚಿತ್ರ (2002) ಮೊದಲು ಬಿಡುಗಡೆ ಆಗುವ ಮೂಲಕ ಸ್ಟಾರ್ ನಟಿಯಾದವರು. ನಿನಗಾಗಿ ಚಿತ್ರದ ಬಳಿಕ ಸಾಲುಸಾಲು ಆಫರ್‌ಗಳನ್ನು ಪಡೆದ ರಾಧಿಕಾ, ಹಿಂತಿರುಗಿ ನೋಡಿದ್ದೇ ಇಲ್ಲ. ವೃತ್ತಿಜೀವನದಲ್ಲಿ ಮೇಲಕ್ಕೇರುತ್ತಲೇ ನಡೆದವರು ನಟಿ ರಾಧಿಕಾ. 

 

ಖುಷಿ, ಅಣ್ಣ ತಂಗಿ, ತವರಿಗೆ ಬಾ ತಂಗಿ, ಅನಾಥರು, ಮಂಡ್ಯ, ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ರಾಧಿಕಾ. ಆದರೆ, ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ರಾಧಿಕಾ ಅವರು ಸಡನ್ ಆಗಿ ಸ್ವಲ್ಪ ಸಮಯ ಸಿನಿಮಾ ನಟನೆಯಿಂದ ಬ್ರೇಕ್ ಪಡೆದುಕೊಂಡರು. ಬಳಿಕ, ಯಶ್-ರಮ್ಯಾ ಜೋಡಿಯ 'ಲಕ್ಕಿ' ಸಿನಿಮಾ ನಿರ್ಮಾಣ ಮಾಡಿ 'ನಿರ್ಮಾಪಕಿ' ಪಟ್ಟ ಪಡೆದರು. ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲಿ ಕೂಡ ರಾಧಿಕಾ ನಟಿಸಿದ್ದಾರೆ. ಇತ್ತೀಚೆಗೆ ಕೂಡ ರಾಧಿಕಾ ನಟನೆಯ 'ಭೈರಾದೇವಿ' ಚಿತ್ರ ತೆರೆಗೆ ಬಂದು ಸಾಕಷ್ಟು ಗಮನ ಸೆಳೆದಿದೆ. 

ಒಂದು ಕಾಲದ ಸ್ಟಾರ್ ನಟಿ; ಉದ್ಯಮಿ ಗಂಡ ಸಾವು, ಸಿಎಂ ಕೈ ಹಿಡಿದ ನಂತರ ಶತಕೋಟಿ ಒಡತಿ!

ಇವೆಲ್ಲವೂ ಅವರ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಆಯ್ತು. ಆದರೆ ರಾಧಿಕಾ ಕುಮಾರಸ್ವಾಮಿ ಬಗ್ಗೆ ಹೊರಜಗತ್ತಿಗೆ ಗೊತ್ತಿಲ್ಲದ ಗುಟ್ಟು ಒಂದಿದೆ. ಅದನ್ನು ನಾಲ್ಕು ಗೋಡೆಯ ಮಧ್ಯೆಯೇ ಮಾತನಾಡುತ್ತಾರೆ ಹೊರತೂ ಹೊರಜಗತ್ತಿಗೆ ಆ ಸೀಕ್ರೆಟನ್ನು ಯಾರೂ ಕೂಡ ಬಿಟ್ಟುಕೊಡುತ್ತಿಲ್ಲ. ಯಾಕೆ ಹೀಗೆ ಅನ್ನೋದಕ್ಕೆ ಉತ್ತರ ಗೊತ್ತಿದ್ದರೂ ಹೊರಜಗತ್ತಿಗೆ ಅದನ್ನು ಬಿಟ್ಟುಕೊಡುವುದು ಕಷ್ಟ! 

ಏಕೆಂದರೆ, 'ಜನರು ಯಾವಾಗಲೂ ಸಮಸ್ಯೆಯ ಬಗ್ಗೆಯೇ ಮಾತನ್ನಾಡುತ್ತಾರೆ, ನೆಗೆಟಿವ್‌ ಬಗ್ಗೆಯೇ ಗಮನ ಹರಿಸುತ್ತಾರೆ. ಆದರೆ ಪೊಸಿಟಿವ್ ಸಂಗತಿಗಳನ್ನು ಹೇಳುವುದೇ ಇಲ್ಲ' ಅನ್ನೋ ಮಾತಿದೆ. ಇದೂ ಕೂಡ ಹಾಗೇ ಇರಬಹುದು. ನಟಿ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಮೊದಲ ಮದುವೆಯಿಂದ ಬಹಳಷ್ಟು ಹಿಂಸೆ ಅನುಭವಿಸಿದವರು. ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂದು ಹಠ ಹಿಡಿದು ಸಿನಿಮಾರಂಗಕ್ಕೆ ಕಾಲಿಟ್ಟರು. 

ಕೊನೆಗೂ ರಿವೀಲ್ ಆಯ್ತು ಕಣ್ಣಪ್ಪ ಚಿತ್ರದ ಪ್ರಭಾಸ್ ಲುಕ್.., ಡಾರ್ಲಿಂಗ್ ಫ್ಯಾನ್ಸ್ ಶಾಕಿಂಗ್!

ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಸಿನಿಮರಂಗದ ಹಿನ್ನೆಲೆಯಿಲ್ಲದೇ ಬಂದವರು ಸಾಮಾನ್ಯವಾಗಿ ಅನುಭವಿಸುವ ಸಂಕಟ, ತಾತ್ಸಾರ ಹಾಗು ನೋವನ್ನು ರಾಧಿಕಾ ಕೂಡ ಅನುಭವಿಸಿದ್ದಾರೆ. ಆದರೆ, ಯಶಸ್ಸಿನ ಜೊತೆಗೆ ಅವರು ಪಾಲಿಸಿಕೊಂಡ ಬಂದ ಕೆಲವು ಮೌಲ್ಯಗಳು ಅವರನ್ನು ಚಿತ್ರರಂಗದಲ್ಲಿ ಬೆಳೆಸಿತು. ಅದೇ ಅವರನ್ನು ಯಶಸ್ಸಿನ ಕಡೆಗೆ ಕೈ ಹಿಡಿದು ಕೊಂಡೊಯ್ಯುವಲ್ಲಿ ಸಫಲವಾಯ್ತು. ಅಂದಿನ ಕಾಲದ ಹೆಚ್ಚಿನ ಸ್ಟಾರ್‌ ನಟರುಗಳ ಜೊತೆ ರಾಧಿಕಾ ನಟಿಸಿದ್ದೂ ಆಯ್ತು. ಜೊತೆಗೆ, ನಟಿ ರಾಧಿಕಾ ಶೂಟಿಂಗ್‌ ಸೆಟ್ಟಲ್ಲಿ ಇರಬಹುದು, ಅಥವಾ ಸಹನಟಿಯರ ಜೊತೆ ಇರಬಹುದು, ಎಲ್ಲಿಯೂ ಯಾವುದೇ ಕಾಂಟ್ರೋವರ್ಸಿಗೆ ಒಳಗಾಗಲೇ ಇಲ್ಲ.  

 
 
ಹೌದು, ನಟಿ ರಾಧಿಕಾ ವೃತ್ತಿಜೀವನ ಅಥವಾ ವೈಯಕ್ತಿಕ ಜೀವನದಲ್ಲಿ ಅವರು ಕಾಂಟ್ರೋವರ್ಸಿ ಕ್ರಿಯೇಟ್ ಮಾಡಿಲ್ಲ. ಅವರು ಸದಾ ಸುದ್ದಿಯಲ್ಲಿ ಇದ್ದಾರೆ, ಅವರ ಲೈಫ್‌, ಲೈಫ್‌ಸ್ಟೈಲ್‌, ಅವರ ಮದುವೆ, ಮುರಿದ ಮದುವೆ ಎಲ್ಲವೂ ಸುದ್ದಿಯಾಗಿರಬಹುದು. ಆದರೆ, ಅವರೇ ಸ್ವತಃ ಯಾವುದೇ ವಿವಾದವನ್ನು ಸೃಷ್ಟಿ ಮಾಡಿಕೊಂಡಿಲ್ಲ. ಶೂಟಿಂಗ್‌ ಸೆಟ್ಟಲ್ಲಿ ರಾಧಿಕಾ ಬಗ್ಗೆ ಯಾವುದೇ ಕಂಪ್ಲಂಟ್ ಎಲ್ಲಿಯೂ ಕೇಳಿ ಬಂದಿಲ್ಲ. ಲೇಟ್‌ ಆಗಿ ಬರುತ್ತಾರೆ ಎಂಬ ದೂರೂ ಕೂಡ ಇಲ್ಲ. ಯಾವ ನಟರೂ, ಸಹನಟಿಯರೂ ಕೂಡ ರಾಧಿಕಾ ಬಗ್ಗೆ ಕೆಟ್ಟಮಾತುಗಳನ್ನು ಆಡಿಲ್ಲ. 

ಶಂಕರ್ ನಾಗ್ ಗುಟ್ಟು ಬಯಲು ಮಾಡಿದ 'ಸಿಬಿಐ ಶಂಕರ್' ನಟಿ ಸುಮನ್ ರಂಗನಾಥ್!

ಚಿತ್ರರಂಗದಲ್ಲಿ ಎಲ್ಲರ ಜೊತೆ ಸಾಮರಸ್ಯ ಕಾಪಾಡಿಕೊಂಡಿರುವ ನಟಿ ರಾಧಿಕಾ, ಇಂದಿಗೂ ನಟಿಯಾಗಿ ಅವಕಾಶ ಪಡೆಯುತ್ತಾರೆ. ಹಾಗಿದ್ದರೆ ಇದರ ಹಿಂದಿನ ಗುಟ್ಟೇನು? ಇಲ್ಲಿದೆ ಸೀಕ್ರೆಟ್‌ ಅನಾವರಣ.. ರಾಧಿಕಾ ಕುಮಾರಸ್ವಾಮಿ ಅವರು ಸಿನಿಮಾವನ್ನು ತುಂಬಾ ಪ್ರೀತಿಸುತ್ತಾರೆ.. ಡಾನ್ಸ್ ಹಾಗೂ ಸಿನಿಮಾವನ್ನೇ ಅವರು ಉಸಿರಾಡುತ್ತಾರೆ ಎನ್ನುವಷ್ಟು ಪ್ರೀತಿ ಅವರಿಗೆ ಈ ಕಲೆಯ ಮೇಲೆ. ಜೊತೆಗೆ, ಸೆಟ್ಟಲ್ಲಿ ಸ್ಟಾರ್ ನಟಿ ಎಂಬ ಯಾವುದೇ ಅಟಿಟ್ಯೂಡ್ ತೋರಿಸದೇ ಸಹಜವಾಗಿ ಎಲ್ಲರೊಂದಿಗೆ ಹೊಂದಿಕೊಂಡು ಹೋಗುತ್ತಾರೆ. 

ತಮ್ಮ ಹುಟ್ಟುಹಬ್ಬದ ದಿನ ಸೆಟ್ ಹುಡುಗರು, ಪ್ರೊಡಕ್ಷನ್ ಹುಡುಗರು ಹೀಗೆ ಎಲ್ಲ ಹಂತದ ಕಾರ್ಮಿಕರೊಂದಿಗೂ ನಟಿ ರಾಧಿಕಾ ಕುಮಾರಸ್ವಾಮಿ ಅಕ್ಷರಶಃ ಮಾತುಕತೆ ಇಟ್ಟುಕೊಂಡಿದ್ದಾರೆ. ಜೊತೆಗೆ, ಎಲ್ಲರನ್ನೂ ಸ್ವತಃ ಕೇರ್ ಮಾಡುತ್ತಾರೆ. ಎಲ್ಲರನ್ನು ಸಮಾನವಾಗಿ ನೋಡುವ ಜೊತೆಗೆ ಸಿನಿಮಾಪ್ರೀತಿಯನ್ನೂ ಮರೆಯುವುದಿಲ್ಲ. ಯಾವುದೇ ನಿರ್ಮಾಕರು, ನಿರ್ದೇಶಕರು ಇಲ್ಲಿಯವರೆಗೂ ನಟಿ ರಾಧಿಕಾ ಬಗ್ಗೆ ಯಾವುದೇ ನೆಗೆಟಿವ್ ಹೇಳಿಲ್ಲ. ಕಾರಣ, ಅವರ ವೃತ್ತಿಪರತೆ ಅಷ್ಟು ಮೇಲ್ಮಟ್ಟದಲ್ಲಿದೆ. ಇದನ್ನು ಚಿತ್ರರಂಗದಲ್ಲಿ ಕೆಲವರು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಾರೆ. ಆದರೆ, ಅದು ಹೊರಜಗತ್ತಿಗೆ ಬಂದಿಲ್ಲ, ಅದೂ ಬರಲಿ ಎಂಬ ಪ್ರಯತ್ನ ಇಲ್ಲಿದೆ ಅಷ್ಟೇ.. 

29 ವರ್ಷಗಳ ಬಳಿಕ ನಟ ಶಿವಣ್ಣ ಯಾಣಕ್ಕೆ ಭೇಟಿ: 'ನಮ್ಮೂರ ಮಂದಾರ ಹೂವೇ' ಪಾರ್ಟ್ 2 ಬರುತ್ತಾ?

ಸೆಟ್ಟಲ್ಲಿ ಕೊಟ್ಟ ಕಾಸ್ಟ್ಯೂಮ್ ಇಷ್ಟವಾಗದಿದ್ದರೂ ಅಲ್ಲೇ ರಾದ್ಧಾಂತ ಮಾಡದೇ, ವಿವಾದ ಸೃಷ್ಟಿ ಮಾಡದೇ ಶೂಟಿಂಗ್ ಮುಗಿಸಿಕೊಡುತ್ತಾರೆ ರಾಧಿಕಾ. ಯಾವತ್ತೋ ಒಂದು ದಿನ ಅ ಬೇಸರವನ್ನು ಯಾವುದೋ ಒಂದು ಸಂದರ್ಶನದಲ್ಲಿ ಹೊರಹಾಕಿದ್ದಿರಬಹುದು ಅಷ್ಟೇ. ಒಳಗೆ ಹೋಗಿದ್ದು ಹೊರಗೆ ಬರಲೇಬೇಕಲ್ಲ! ಆದರೆ, ಟೈಮ್‌ಗೆ ಸರಿಯಾಗಿ ಶೂಟಿಂಗ್ ಮುಗಿಸಿಕೊಟ್ಟು ಆ ಚಿತ್ರದ ನಿರ್ಮಾಪಕರಿಗೆ ಲಾಸ್ ಆಗದಂತೆ ನೋಡಿಕೊಳ್ಳುತ್ತಾರೆ ರಾಧಿಕಾ. ಅದೇ ಅವರ ಪ್ಲಸ್ ಪಾಯಿಂಟ್ ಎನ್ನುತ್ತಾರೆ. ಆದ್ದರಿಂದಲೇ ಇಂದೂ ಕೂಡ ಅವರಿಗೆ ಚಿತ್ರರಂಗದಲ್ಲಿ ಚಾನ್ಸ್ ಸಿಗುತ್ತಲೇ ಇದೆ ಎನ್ನುತ್ತಾರೆ ಸಿನಿಮಾ ಜಗತ್ತಿನವರು. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ