
ಅನೀಶ್ ತೇಜೇಶ್ವರ್ ನಟನೆ ಜತೆಗೆ ನಿರ್ದೇಶನ ಮಾಡಿರುವ ‘ರಾಮಾರ್ಜುನ’ ಚಿತ್ರದ ಶೂಟಿಂಗ್ ಮುಗಿದಿದೆ. ತೆರೆಗೆ ಬರಲು ಸಜ್ಜಾಗಿದೆ. ಈ ಹೊತ್ತಲ್ಲಿ ರಕ್ಷಿತ್ ಶೆಟ್ಟಿ‘ರಾಮಾರ್ಜುನ’ ಚಿತ್ರಕ್ಕೆ ಮತ್ತೊಬ್ಬ ನಿರ್ಮಾಪಕರಾಗಿ ಜತೆಯಾಗಿದ್ದಾರೆ.
ನನ್ನ ಆಲೋಚನೆ, ಕೆಲಸವನ್ನು ನಿಲ್ಲಿಸಿಲ್ಲ: ರಕ್ಷಿತ್ ಶೆಟ್ಟಿ ಲಾಕ್‌ಡೌನ್ ಅನುಭವ ಕಥನ!
ಅನೀಶ್ ಮತ್ತು ರಕ್ಷಿತ್ ‘ನಮ್ ಏರಿಯಾಲ್ ಒಂದಿನಾ’ ಸಿನಿಮಾ ಕಾಲದಿಂದ ಗೆಳೆಯರು. ಆಗಾಗ ಜತೆ ಸೇರುತ್ತಾ ಕಷ್ಟಸುಖ ಮಾತಾಡಿಕೊಂಡು ಆರಾಮಾಗಿದ್ದರು. ಈಗ ಗೆಳೆಯನ ಸಿನಿಮಾ ಒಂದು ಹಂತಕ್ಕೆ ಬಂದಿದೆ. ಇನ್ನೇನು ರಿಲೀಸಾಗಬೇಕಿದೆ. ಈ ಹಂತದಲ್ಲಿ ಗೆಳೆಯನಿಗೆ ಬೆನ್ನೆಲುಬಾಗಿ ನಿಲ್ಲಲು ರಕ್ಷಿತ್ ಶೆಟ್ಟಿನಿರ್ಧರಿಸಿದ್ದಾರೆ. ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.
ಚಿತ್ರಗಳು: ಚಾರ್ಲಿ 777 ಕ್ಲೈಮಾಕ್ಸ್ ನಡುವೆಯೂ ಷಷ್ಠಿ ಪೂಜೆಗೆ ಹಾಜರಾದ ರಕ್ಷಿತ್ ಶೆಟ್ಟಿ
‘ನಮ್ಮ ಚಿತ್ರವನ್ನು ನೋಡಿದ ಮೇಲೆ ಖುಷಿಯಾಗಿ ರಕ್ಷಿತ್ ಶೆಟ್ಟಿಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದಾರೆ. ರಕ್ಷಿತ್ ಶೆಟ್ಟಿಈ ಹಿಂದೆ ‘ಕಿರಿಕ್ ಪಾರ್ಟಿ’ ಚಿತ್ರ ಮಾಡಿ ಮುಗಿಸಿದ ಮೇಲೆ ಹೇಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಜತೆಯಾಗಿ ಚಿತ್ರದ ನಿರ್ಮಾಣದಲ್ಲಿ ಪಾಲುದಾರರಾದರೋ ಅದೇ ರೀತಿ ರಕ್ಷಿತ್ ಶೆಟ್ಟಿಈಗ ನನ್ನ ಚಿತ್ರಕ್ಕೆ ಜತೆಯಾಗಿದ್ದಾರೆ’ ಎನ್ನುತ್ತಾರೆ ಅನೀಶ್. ನಿಶ್ವಿಕಾ ನಾಯ್ಡು ಈ ಚಿತ್ರದ ನಾಯಕಿ. ಪ್ರಮೋದ್ ಶೆಟ್ಟಿ, ರಂಗಾಯಣ ರಘು, ಅರುಣಾ ಬಾಲರಾಜ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.