ಚಿತ್ರಮಂದಿರ ನಮ್ಮ ಪಾಲಿನ ದೇವಾಲಯ: ಸುದೀಪ್‌

Kannadaprabha News   | Asianet News
Published : Dec 24, 2020, 09:05 AM ISTUpdated : Dec 24, 2020, 09:16 AM IST
ಚಿತ್ರಮಂದಿರ ನಮ್ಮ ಪಾಲಿನ ದೇವಾಲಯ: ಸುದೀಪ್‌

ಸಾರಾಂಶ

ಚಿತ್ರಮಂದಿರಗಳು ಸಿನಿಮಾಗಳ ಪಾಲಿಗೆ ದೇವಾಲಯಗಳಂತೆ. - ಹೀಗೆ ಹೇಳಿದ್ದು ನಟ ಸುದೀಪ್‌. ಅದು ಜೆಕೆ ನಾಯಕನಾಗಿ, ಅದ್ವಿತಿ ಶೆಟ್ಟಿನಾಯಕಿಯಾಗಿ ನಟಿಸಿರುವ ‘ಐರಾವನ್‌’ ಚಿತ್ರದ ಟೀಸರ್‌ ಬಿಡುಗಡೆ ಸಮಾರಂಭ. ರಾಮ್ಸ್‌ ರಂಗ ನಿರ್ದೇಶನದ, ಡಾ. ನಿರಂತರ ನಿರ್ಮಾಣದ ಚಿತ್ರದ ಟೀಸರ್‌ ರಿಲೀಸ್‌ ಮಾಡಿ ಸುದೀಪ್‌ ಮಾತಿಗೆ ನಿಂತರು.

ಸುದೀಪ್‌ ಹೇಳಿದ ಮೂರು ಮಾತುಗಳು

- ಈ ಹಿಂದೆ ಸಿನಿಮಾ ಬಿಡುಗಡೆ ಮಾಡುವ ಹೊತ್ತಿನಲ್ಲಿ ನಮಗೆ ಒಳ್ಳೆಯ ಥಿಯೇಟರ್‌ ಸಿಗಬೇಕು. ಅದು ಇಂಥದ್ದೇ ಚಿತ್ರಮಂದಿರ ಆಗಬೇಕು ಎಂದು ಪಟ್ಟು ಹಿಡಿದು ಅಲ್ಲೇ ಸಿನಿಮಾ ಬಿಡುಗಡೆ ಮಾಡುತ್ತಿದ್ವಿ. ಆದರೆ, ಈಗ ಆ ಪರಿಸ್ಥಿತಿ ಬದಲಾಗಿದೆ. ಒಳ್ಳೆಯ ಥಿಯೇಟರ್‌ ಬೇಕು ಎನ್ನುತ್ತಿದ್ದ ನಾವೇ ಈಗ ಥಿಯೇಟರ್‌ಗಳು ಸಿಕ್ಕರೆ ಸಾಕು ಎನ್ನುತ್ತಿದ್ದೇವೆ. ಯಾಕೆಂದರೆ ಚಿತ್ರಮಂದಿರಗಳಲ್ಲೇ ಸಿನಿಮಾಗಳನ್ನು ನೋಡಬೇಕೆಂಬ ಕಾತರ ಹೆಚ್ಚಿದೆ.

ಸ್ಟಾರ್ಸ್‌ ಸಿನಿಮಾ ನೋಡೋಕೆ ಕಾಯುತ್ತಿದ್ದ ಫ್ಯಾನ್ಸ್‌ಗೆ ಬಿಗ್ ಶಾಕ್! 

- ಪ್ರತಿಯೊಂದು ಚಿತ್ರಕ್ಕೂ, ಸಿನಿಮಾ ಮಂದಿಗೂ ಥಿಯೇಟರ್‌ ಅನ್ನೋದು ದೇವಾಲಯ ಇದ್ದಂತೆ. ಇಂಥ ದೇವಾಲಯಗಳು ಆದಷ್ಟುಬೇಗ ಎಂದಿನಂತೆ ಚೇತರಿಸಿಕೊಳ್ಳಲಿ. ಸಿನಿಮಾಗಳು ಎಲ್ಲೋ ಕಳೆದು ಹೋಗೋದು ಬೇಡ. ಥಿಯೇಟರ್‌ಗಳಿಗೆ ಬರಲಿ. ಅಲ್ಲೇ ಬಿಡುಗಡೆ ಮಾಡಿ, ಖುಷಿಯಾಗಿ ಎಲ್ಲರು ಚಿತ್ರವನ್ನು ದೊಡ್ಡ ಪರದೆ ಮೇಲೆ ನೋಡೋಣ. ‘ಐರಾವನ್‌’ ಚಿತ್ರದ ಟೀಸರ್‌ ತುಂಬಾ ಚೆನ್ನಾಗಿ ಮಾಡಿದ್ದಾರೆ. ಜೆಕೆ ಹಾಗೂ ವಿವೇಕ್‌ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರವನ್ನು ನಾವು ಚಿತ್ರಮಂದಿರದಲ್ಲೇ ನೋಡೋಣ. ಅಂಥದ್ದೊಂದು ಶುಭಗಳಿಗೆ ಆದಷ್ಟುಬೇಗ ಬರಲಿ.

"

- ಕೆಲವು ವರ್ಷಗಳ ಹಿಂದಿನಿಂದ ನಾನು ಮಾತು ಆರಂಭಿಸುತ್ತೇನೆ. ಆಗ ನಾನು ಜೆಕೆ ಸ್ಥಾನದಲ್ಲಿ ಇದ್ದೆ ಅಂದುಕೊಳ್ಳಿ. ಆಗಷ್ಟೆಚಿತ್ರರಂಗಕ್ಕೆ ಬರುತ್ತಿದೆ. ಆಗ ನಮಗೆ ಪರಿಚಯ ಇದ್ದಿದ್ದು ರಾಕ್‌ಲೈನ್‌ ವೆಂಕಟೇಶ್‌ ಅವರಂತಹ ಕೆಲವೇ ಗಣ್ಯರು ಮಾತ್ರ. ಇವತ್ತು ಅವರ ಮಗ ಯತೀಶ್‌ ನನ್ನ ಮುಂದೆ ನಿಂತುಕೊಂಡು ಐರಾವನ್‌ ಸಿನಿಮಾದ ಪ್ರಸೆಂಟೇಷನ್‌ ಮಾಡಿದ್ದು ನೋಡಿ ಯಾಕೋ ನನಗೆ ಮೊದಲ ಬಾರಿಗೆ ವಯಸ್ಸಾಯಿತಲ್ಲ ಎನ್ನುವ ಫೀಲ್‌ ಬಂತು. ಚಿಕ್ಕ ಹುಡುಗರು ನಮ್ಮ ಮುಂದೆ ಬಂದಾಗ ಹೀಗೆ ನಾವು ಹಿರಿಯರಾಗಿದ್ದೇವೆ ಅನಿಸುತ್ತದೆ. ಯತೀಶ್‌, ಒಳ್ಳೆಯ ಬ್ಯುಸಿನೆಸ್‌ಮ್ಯಾನ್‌ ಆಗ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?