
‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದಲ್ಲಿ ರಾಗಿಣಿ ಮತ್ತು ಕುಮಾರ್ ಬಂಗಾರಪ್ಪ ಫೋಟೋ ನೋಡಿ ಇಬ್ಬರೂ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ರಾಗಿಣಿ, ನನ್ನ ಬಾಯ್‌ಫ್ರೆಂಡ್ ಯಾರು, ಗಂಡ ಯಾರು ಅಂತ ನನಗೇ ಗೊತ್ತಾಗಿರಲ್ಲ, ಜನರಿಗೆ ಗೊತ್ತಾಗಿರುತ್ತೆ.
ಸದ್ಯಕ್ಕಂತೂ ಯಾರೂ ಮಕ್ಕಳಾಗಿದೆ ಅಂತ ಹೇಳಿಲ್ಲ ಎಂದು ಕಾಮಿಡಿ ಮಾಡಿದ್ದಾರೆ. ಈ ಪ್ರೆಸ್‌ಮೀಟ್‌ನಲ್ಲಿ ಕುಮಾರ್ ಬಂಗಾರಪ್ಪ ರಾಗಿಣಿ ಅವರ ಆಕ್ಟಿಂಗ್ ಅನ್ನು ಹೊಗಳಿದಾಗ ರಾಗಿಣಿ ನಾಚಿ ಅವರನ್ನು ತಬ್ಬಿಕೊಂಡಿದ್ದೂ ಸೋಷಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.
ರಾಗಿಣಿ ದ್ವಿವೇದಿ, ಕುಮಾರ್ ಬಂಗಾರಪ್ಪ ನಟನೆಯ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಟ್ರೇಲರನ್ನು ಮಾಜಿ ಸಂಸದ ಶಿವರಾಮೇಗೌಡ ಬಿಡುಗಡೆ ಮಾಡಿದರು. ಜುಲೈ 31ರಂದು ಸಿನಿಮಾ ಬಿಡುಗಡೆಯಾಗಲಿದೆ. ಸಿನಿಮಾ ಬಗ್ಗೆ ರಾಗಿಣಿ, ‘ಇಡೀ ಸಿನಿಮಾವನ್ನು ಮಂಡ್ಯದ ಗ್ರಾಮೀಣ ಹಿನ್ನೆಲೆಯಲ್ಲಿ ಚಿತ್ರೀಕರಣ ಮಾಡಿದ್ದು ಒಂದೊಳ್ಳೆ ಅನುಭವ. ಈ ಚಿತ್ರ ನೋಡುಗರಿಗೆ ಮೆಸೇಜ್ ಜೊತೆಗೆ ಮನರಂಜನೆಯನ್ನೂ ನೀಡಲಿದೆ’ ಎಂದರು.
ಕುಮಾರ್ ಬಂಗಾರಪ್ಪ, ‘ದೇಶದಲ್ಲಿಯೇ ಸರ್ಕಾರಿ ನ್ಯಾಯಬೆಲೆ ಅಂಗಡಿ ಮತ್ತು ಪಡಿತರ ವ್ಯವಸ್ಥೆಯ ಬಗೆಗಿನ ಮೊದಲ ಸಿನಿಮಾವಿದು. ಬಹುಕಾಲದ ಬಳಿಕ ಇಂಥದ್ದೊಂದು ಸಾಮಾಜಿಕ ಕಳಕಳಿಯ ಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ಖುಷಿಯಿದೆ’ ಎಂದರು. ಸಾತ್ವಿಕ್ ಪವನ್ ಕುಮಾರ್ ನಿರ್ದೇಶನದ ಸಿನಿಮಾವನ್ನು ತೇಜು ಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.