ಸಂಜು ವೆಡ್ಸ್‌ ಗೀತಾ 2 ಸಿನಿಮಾದಲ್ಲಿ ಮಂಗ್ಲಿ ಹಾಡಿಗೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಡಾನ್ಸ್‌

By Kannadaprabha News  |  First Published Oct 11, 2024, 2:32 PM IST

‘ಸಂಜು ವೆಡ್ಸ್‌ ಗೀತಾ 2’ ಸಿನಿಮಾದ ‘ಹಬೀಬಿ ಹಬೀಬಿ’ ಹಾಡು ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಖ್ಯಾತ ದಕ್ಷಿಣ ಭಾರತೀಯ ಗಾಯಕಿ ಮಂಗ್ಲಿ ಹಾಡಿರುವ ಈ ಹಾಡಿಗೆ ರಾಗಿಣಿ ದ್ವಿವೇದಿ, ರಚಿತಾ ರಾಮ್‌ ಹೆಜ್ಜೆ ಹಾಕಿದ್ದಾರೆ. 


‘ಸಂಜು ವೆಡ್ಸ್‌ ಗೀತಾ 2’ ಸಿನಿಮಾದ ‘ಹಬೀಬಿ ಹಬೀಬಿ’ ಹಾಡು ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಖ್ಯಾತ ದಕ್ಷಿಣ ಭಾರತೀಯ ಗಾಯಕಿ ಮಂಗ್ಲಿ ಹಾಡಿರುವ ಈ ಹಾಡಿಗೆ ರಾಗಿಣಿ ದ್ವಿವೇದಿ, ರಚಿತಾ ರಾಮ್‌ ಹೆಜ್ಜೆ ಹಾಕಿದ್ದಾರೆ. ಈ ಕುರಿತು ನಿರ್ದೇಶಕ ನಾಗಶೇಖರ್‌, ‘ಇದು ಜನರನ್ನು ಸಿನಿಮಾದತ್ತ ಸೆಳೆಯುವ ಹಾಡು. ಭರ್ಜರಿ ಮನರಂಜನೆ ಹಾಡಿನಲ್ಲಿದೆ. ರಾಗಿಣಿ ಹಾಗೂ ನಾಯಕಿ ರಚಿತಾ ರಾಮ್‌ ಇಬ್ಬರೂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಆರ್ಗ್ಯಾನಿಕ್‌ ವೀಕ್ಷಣೆ ಸಿಗಲಿ ಎಂಬ ಉದ್ದೇಶದಿಂದ ಹೆಚ್ಚು ಪ್ರಚಾರ ಮಾಡಿಲ್ಲ. 

ಸದ್ಯ ಸಿನಿಮಾ ರೀರೆಕಾರ್ಡಿಂಗ್‌ ಹಂತದಲ್ಲಿದೆ. ಡಿಸೆಂಬರ್‌ 6ಕ್ಕೆ ರಿಲೀಸ್‌ ಮಾಡುವ ಸಾಧ್ಯತೆ ಇದೆ’ ಎಂದಿದ್ದಾರೆ. ಈ ಹಾಡಿಗೆ ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜನೆ ಇದೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಜ್ಞಾನಪ್ರಕಾಶ ಸ್ವಾಮೀಜಿ ಹಾಡನ್ನು ಬಿಡುಗಡೆ ಮಾಡಿದರು. ಛಲವಾದಿ ಕುಮಾರ್‌ ನಿರ್ಮಾಪಕರು. ಶ್ರೀನಗರ ಕಿಟ್ಟಿ ನಾಯಕ, ರಚಿತಾ ರಾಮ್‌ ಚಿತ್ರದ ನಾಯಕಿ. ರಾಗಿಣಿ ದ್ವಿವೇದಿ ನೆಗೆಟಿವ್‌ ಶೇಡ್‌ನಲ್ಲಿ ನಟಿಸಿದ್ದಾರೆ.

Tap to resize

Latest Videos

ರೇಷ್ಮೆ ಬೆಳೆಗಾರನ ಪಾತ್ರದಲ್ಲಿ ಬರುತ್ತಿದ್ದೇನೆ: ‘ಸಂಜು ಮತ್ತು ಗೀತಾಳ ಪ್ರೇಮ ಕತೆಯ ಸಿನಿಮಾ. ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆಯಲ್ಲಿ ಕತೆ ಸಾಗುತ್ತದೆ. ಈ ಕಾಲದ ಪ್ರೇಮಕತೆ ಜತೆಗೆ ಸರ್ಪ್ರೈಸ್‌ ಅಂಶಗಳು ಚಿತ್ರದಲ್ಲಿದೆ’ - ಹೀಗೆ ಹೇಳಿದ್ದು ನಿರ್ದೇಶಕ ನಾಗಶೇಖರ್. ಶ್ರೀನಗರ ಕಿಟ್ಟಿ ಹಾಗೂ ರಚಿತಾರಾಮ್‌ ಜೋಡಿಯ ‘ಸಂಜು ವೆಡ್ಸ್‌ ಗೀತಾ 2’ ಚಿತ್ರಕ್ಕೆ ಶೂಟಿಂಗ್‌ ಮುಗಿದಿರುವ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಿರ್ಮಾಪಕ ಛಲವಾದಿ ಕುಮಾರ್‌, ‘ಏನೂ ತೊಂದರೆ ಆಗದಂತೆ ಚಿತ್ರೀಕರಣ ಮಾಡಿದ್ದೇವೆ. 

ಪ್ರಿಯಾಂಕ ಉಗ್ರಾವತಾರ ಇಲ್ಲೀವರೆಗೂ ನಾನೊಬ್ಬನೇ ನೋಡಿದ್ದೆ: ಉಪೇಂದ್ರ

ಚಿತ್ರದ ಮೂರು ಹಾಡುಗಳನ್ನು ಬೇರೆ ಬೇರೆ ಊರುಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್‌ ಇದೆ’ ಎಂದರು. ನಟ ಶ್ರೀನಗರ ಕಿಟ್ಟಿ, ‘ಸಂಭ್ರಮದಿಂದ ಶೂಟಿಂಗ್‌ ಮುಗಿಸಿದ್ದೇವೆ. ಪಾರ್ಟ್‌ 1ಗೆ ಬಂದ ಯಶಸ್ಸು ಪಾರ್ಟ್‌ 2ಗೂ ಬರಲಿದೆ ಎನ್ನುವ ನಂಬಿಕೆ ಇದೆ. ನಾನು ಚಿತ್ರದಲ್ಲಿ ರೇಷ್ಮೇ ಬೆಳೆಗಾರನ ಪಾತ್ರ ಮಾಡಿದ್ದೇನೆ’ ಎಂದರು. ರಚಿತಾರಾಮ್‌, ‘ನೆನಪಿನಲ್ಲಿ ಉಳಿಯುವಂತಹ ಚಿತ್ರದಲ್ಲಿ ನಟಿಸಿದ್ದೇನೆಂಬ ಖುಷಿ ಇದೆ’ ಎಂದರು. ಛಾಯಾಗ್ರಾಹಕ‌ ಸತ್ಯ ಹೆಗ್ಡೆ, ಸಾಧು ಕೋಕಿಲ, ತಬಲಾ ನಾಣಿ, ಮೂಗು ಸುರೇಶ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಮುಂತಾದವರು ಹಾಜರಿದ್ದರು.

click me!