ನಿರ್ದೇಶನ ನನ್ನ ಕನಸು, ನಟನೆ ನನ್ನ ಪ್ಯಾಷನ್‌: ರಾಘು ಶಿವಮೊಗ್ಗ

Kannadaprabha News   | Asianet News
Published : Jan 07, 2021, 09:19 AM IST
ನಿರ್ದೇಶನ ನನ್ನ ಕನಸು, ನಟನೆ ನನ್ನ ಪ್ಯಾಷನ್‌: ರಾಘು ಶಿವಮೊಗ್ಗ

ಸಾರಾಂಶ

ನಿರ್ದೇಶಕರು ಕೂಡ ತೆರೆ ಮೇಲೆ ಕಾಣಿಸಿಕೊಳ್ಳುವ ಪರಂಪರೆಗೆ ಹೊಸ ಸೇರ್ಪಡೆ ರಾಘು ಶಿವಮೊಗ್ಗ. ನಿರ್ದೇಶಕರಾಗಿ ‘ಚೂರಿಕಟ್ಟೆ’ ಚಿತ್ರದ ಮೂಲಕ ಗಮನ ಸೆಳೆದ ರಾಘು, ಈಗ ನಟನೆಯತ್ತ ಹೆಚ್ಚು ಒಲವು ತೋರುತ್ತಿರುವುದರ ಹಿಂದಿನ ಗುಟ್ಟೇನು ಎಂಬುದು ಅವರೇ ಹೇಳಿದ್ದಾರೆ ಓದಿ.

ಆರ್‌.ಕೇಶವಮೂರ್ತಿ

ಇದ್ದಕ್ಕಿದ್ದಂತೆ ನಟನೆ ಕಡೆ ಮುಖ ಮಾಡಿದ್ದೀರಲ್ಲ?

ಮೊದಲಿನಿಂದಲೂ ನನಗೆ ನಟನೆ ಮಾಡಬೇಕು ಎಂಬುದು ಆಸೆ. ನಟನೆ ನನ್ನ ಪ್ಯಾಷನ್‌. ಸಿನಿಮಾ ನಿರ್ದೇಶಿಸುವುದು ನನ್ನ ಕನಸು. ಮೊದಲಿಗೆ ಕನಸು ಕೈ ಹಿಡಿಯಿತು. ಈಗ ಪ್ಯಾಷನ್‌ಕಡೆ ಹೆಜ್ಜೆ ಹಾಕಿದ್ದೇನೆ.

ಹೊಂಬಾಳೆ ಫಿಲ್ಮ್ಸ್‌ ಜತೆ ಸಿನಿಮಾ ಮಾತುಕತೆ ಆಗಿಲ್ಲ: ರಕ್ಷಿತ್‌ ಶೆಟ್ಟಿ 

ಮುಂದೆ ನಿರ್ದೇಶನ ಮಾಡುವುದಿಲ್ಲವೇ?

ನಿರ್ದೇಶನ ಯಾವತ್ತಿಗೂ ಕೈ ಬಿಡಲ್ಲ. ನಿರ್ದೇಶಿಸುತ್ತಲೇ ನನಗೆ ಸೂಕ್ತ ಎನಿಸುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ.

ನಿಮ್ಮೊಳಗಿನ ನಟನಿಗೆ ಧೈರ್ಯ ಕೊಟ್ಟಿದ್ದು ಯಾರು?

ಮಂಸೋರೆ ನಿರ್ದೇಶನದ ‘ಆಕ್ಟ್ 1978’. ಈ ಚಿತ್ರದಲ್ಲಿ ನಾನು ಮಾಡಿದ ಅಟೆಂಡರ್‌ ಪಾತ್ರವೇ ನನ್ನೊಳಗಿನ ನಟನನ್ನು ಗುರುತಿಸಿತು. ನಟನೆಗೆ ಧೈರ್ಯ ಮತ್ತು ವಿಶ್ವಾಸ ತುಂಬಿತು.

ವಿಭಿನ್ನ ಕಥೆ ಹೊಂದಿರುವ 'ಚೂರಿಕಟ್ಟೆ' ಇಂದು ತೆರೆಗೆ; ಈ ಚಿತ್ರದ ವಿಶೇಷತೆಗಳೇನು ಗೊತ್ತಾ? 

ಯಾವೆಲ್ಲ ಚಿತ್ರಗಳಲ್ಲಿ ನಟಿಸುತ್ತಿದ್ದೀರಿ?

ಒಟ್ಟು ಐದು ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ನೀನಾಸಂ ಭಾಸ್ಕರ್‌ ನಿರ್ದೇಶನದ ಚಿತ್ರ. ಶ್ರೇಯಸ್‌ ನಿರ್ದೇಶಿಸುತ್ತಿರುವ ಚಿತ್ರ. ಗುರು ದೇಶಪಾಂಡೆ ನಿರ್ದೇಶನದ ‘ಪೆಂಟಗನ್‌’ ಹಾಗೂ ಪವನ್‌ಕುಮಾರ್‌ ತಂಡದ ಐದು ಜನ ನಿರ್ದೇಶಕರ ಚಿತ್ರಗಳ ಪೈಕಿ ಜಯತೀರ್ಥ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದಕ್ಕೆ ಬಹುಶಃ ‘ಆದ್ದರಿಂದ’ ಎನ್ನುವ ಹೆಸರಿಡಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್
ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು