ಚಿಕ್ಕ ವಯಸ್ಸಲ್ಲೇ ಹಾಡಿದ್ದ ಅಪ್ಪು, ಆ ಹಾಡು ಕೇಳಿ ಶಿವಣ್ಣ ಮಾಡಿದ್ದೇನು? ಸೀಕ್ರೆಟ್ ಓಡಾಡ್ತಿದೆ ಈಗ..!

Published : Feb 28, 2025, 09:45 PM ISTUpdated : Feb 28, 2025, 09:53 PM IST
ಚಿಕ್ಕ ವಯಸ್ಸಲ್ಲೇ ಹಾಡಿದ್ದ ಅಪ್ಪು, ಆ ಹಾಡು ಕೇಳಿ ಶಿವಣ್ಣ ಮಾಡಿದ್ದೇನು? ಸೀಕ್ರೆಟ್ ಓಡಾಡ್ತಿದೆ ಈಗ..!

ಸಾರಾಂಶ

 ಪುನೀತ್ ರಾಜ್‌ಕುಮಾರ್ ಅವರು ತುಂಬಾ ಚಿಕ್ಕ ವಯಸ್ಸಿನಲ್ಲೇ ಹಾಡು, ನಟನೆ ಎಲ್ಲವನ್ನೂ ಮಾಡಿ ಮೆಚ್ಚುಗೆ ಪಡೆದವರು. ದೊಡ್ಡವರಾದ ಮೇಲೆ ಕನ್ನಡದ ಸ್ಟಾರ್ ನಟರಾಗಿ ಕರ್ನಾಟಕವನ್ನೂ ಮೀರಿ ಜನಪ್ರಿಯತೆ ಪಡೆದವರು. ಚಿಕ್ಕ ವಯಸ್ಸಿನಲ್ಲೇ ಇಹಲೋಕವನ್ನೂ..

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ (Shivarajkumar) ಅವರು ತಮ್ಮ ಸಹೋದರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಬಗ್ಗೆ ಹೃದಯಾಂತರಾಳದಿಂದ ಮಾತನ್ನಾಡಿದ್ದಾರೆ. ಅಪ್ಪು ಬಗ್ಗೆ ಹೇಳುತ್ತ ನಟ ಶಿವಣ್ಣ ಅವರು 'ನಮ್ಮ ಅಪ್ಪುಗೆ ಹಾಡೋದು, ನಟನೆ ಎಲ್ಲವೂ ಹುಟ್ಟಿನಿಂದಲೇ ಬಂದುಬಿಟ್ಟಿದೆ. ಯಾಕೆ ಅಂದ್ರೆ ಅವ್ನು 3-4 ವರ್ಷದವನಿದ್ದಾಗಲೇ ಚಲಿಸುವ ಮೋಡಗಳು ಚಿತ್ರಕ್ಕೆ 'ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ..' ಹಾಡನ್ನ ಹಾಡಿದ್ದ.. ಎಂದು ಹೇಳಿ ಸಾಕಷ್ಟು ಎಮೋಶನಲ್ ಆದರು ಅಂದೇ ನಟ ಶಿವರಾಜ್‌ಕುಮಾರ್.

ಆ ಹಾಡನ್ನು ಕೇಳಿ ನಾವೆಲ್ಲಾ ಕಣ್ಣೀರು ಹಾಕಿದ್ದೇವೆ. ಅಪ್ಪು ಜೊತೆನಲ್ಲಿ ನಮಗೆ ಎಮೋಶನಲ್ ಟಚ್ ಇತ್ತು. ನಾವು ಎಲ್ಲರ ತರ ಇರೋ ಬದಲು ಅವ್ನ ಜೊತೆ ತುಂಬಾ ಭಾವನಾತ್ಮಕ ಸಂಬಂಧ ಇತ್ತು. ಹೀಗಾಗಿಯೇ ಅವ್ನು ಬಂದ್ರೆ, ಹೋದ್ರೆ ಎಲ್ಲವೂ ನಮಗೆ ಕೌಂಟ್ ಆಗ್ತಾ ಇತ್ತು.. ಅವ್ನು ಒಂಥರಾ ರಾಯಲ್, ರಾಯಲ್ ಆಗಿ ಇದಾನೆ, ಯಾವಾಗ್ಲೂ ರಾಯಲ್ ಆಗಿಯೇ ಇರ್ತಾನೆ. ಯಾವತ್ತೂ ಅವ್ನು ನಗುನಗುತ್ತಲೇ ಇರ್ತಿದ್ದ, ಹಾಡ್ತಿದ್ದ, ಡಾನ್ಸ್ ಮಾಡ್ತಿದ್ದ.. ಚಿಕ್ಕಿಂದಿನಲ್ಲೇ ಹಾಗೆ ಇದ್ದ' ಎಂದಿದ್ದಾರೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್. 

ಡಾ ರಾಜ್‌ಕುಮಾರ್ ಆತ್ಮಹತ್ಯೆಗೆ ಪ್ರಯತ್ನಿಸಿದ್ಧೇಕೆ..? ಮತ್ತೆ ಬದುಕುಳಿದಿದ್ಧೇಕೆ..? ಸೀಕ್ರೆಟ್ ಸ್ಟೋರಿ!

ಅಷ್ಟು ಚಿಕ್ಕ ವಯಸ್ಸಲ್ಲಿ ಹಾಡೋಕೆ ಬಂದ್ರೂ ಕೂಡ ಕರೆದ ತಕ್ಷಣ ಹೋಗಿ ಹಾಡೋದು ಕಷ್ಟನೇ ಅಲ್ವ? ಆದ್ರೆ, ಅಪ್ಪುಗೆ ಅಷ್ಟು ಚಿಕ್ಕ ವಯಸ್ಸಲ್ಲಿ ಕೂಡ ಸಂಗೀತ ಕಲಿಯದೇನೂ ಚೆನ್ನಾಗಿ ಹಾಡೋ ಪ್ರತಿಭೆ ಇತ್ತು. ಜೊತೆಗೆ, ಚಿಕ್ಕವನಿರುವಾಗ್ಲೇ ನಟನೆ ಕೂಡ ಮಾಡಿದ್ದ. ಒಂದು ವರ್ಷದ ಮಗು ಆಗಿದ್ದಾಗಲೇ ಅಪ್ಪಾಜಿ ಜೊತೆ ತೆರೆಯಲ್ಲಿ ಕಾಣಿಸ್ಕೊಂಡ. ಜೊತೆಗೆ, 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ನಟನೆ ಕೂಡ ಮಾಡಿ ಪ್ರಶಸ್ತಿ ಕೂಡ ಪಡೆದುಕೊಂಡ' ಎಂದಿದ್ದಾರೆ ಶಿವಣ್ಣ.

ಹೌದು, ಪುನೀತ್ ರಾಜ್‌ಕುಮಾರ್ ಅವರು ತುಂಬಾ ಚಿಕ್ಕ ವಯಸ್ಸಿನಲ್ಲೇ ಹಾಡು, ನಟನೆ ಎಲ್ಲವನ್ನೂ ಮಾಡಿ ಮೆಚ್ಚುಗೆ ಪಡೆದವರು. ದೊಡ್ಡವರಾದ ಮೇಲೆ ಕನ್ನಡದ ಸ್ಟಾರ್ ನಟರಾಗಿ ಕರ್ನಾಟಕವನ್ನೂ ಮೀರಿ ಜನಪ್ರಿಯತೆ ಪಡೆದವರು. ಚಿಕ್ಕ ವಯಸ್ಸಿನಲ್ಲೇ ಇಹಲೋಕವನ್ನೂ ತ್ಯಜಿಸಿ ತಮ್ಮ ಅಭಿಮಾನಿಗಳ ಪಾಲಿನ 'ಪರಮಾತ್ಮ' ಎನ್ನಿಸಿಕೊಂಡವರು. ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಲಾಗಿದೆ. 

ಕಾರು ಕೇಳಿದ ಶಿವಣ್ಣಗೆ ಹೀಗೆ ಹೇಳಿದ್ದ ಅಪ್ಪು.. ಈಗ ಬೇಕಾ ಇವೆಲ್ಲಾ ಅಂದ್ರೂ ಯಾರೋ ಬಿಡ್ತಿಲ್ಲ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ