ಕಿರಿಕ್ ಕೀರ್ತಿ ಜೊತೆ ಖಳನಟ ಕೀರ್ತಿರಾಜ್ ಮಾತುಕಥೆ.. ಏನೆಲ್ಲಾ ಹೇಳಿದ್ರು?.. ದರ್ಶನ್-ಸುದೀಪ್ ಬಗ್ಗೆ..

Published : Feb 28, 2025, 10:29 PM ISTUpdated : Mar 01, 2025, 09:01 AM IST
ಕಿರಿಕ್ ಕೀರ್ತಿ ಜೊತೆ ಖಳನಟ ಕೀರ್ತಿರಾಜ್ ಮಾತುಕಥೆ.. ಏನೆಲ್ಲಾ ಹೇಳಿದ್ರು?.. ದರ್ಶನ್-ಸುದೀಪ್ ಬಗ್ಗೆ..

ಸಾರಾಂಶ

ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾದ ಹಿರಿಯ ಖಳನಟ ಕೀರ್ತಿರಾಜ್ ಅವರು ತಮ್ಮ ಜೀವನದ ಕಹಿ-ಸಿಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಅಂಬರೀಷ್, ದರ್ಶನ್ ಸುದೀಪ್ ಹೆಸರನ್ನು ಕೂಡ ಹೇಳಿದ್ದಾರೆ. ಅವರು ಅದೇನು ಮಾತನಾಡಿದ್ದಾರೆ ಎಂಬ ಸಹಜ ಕುತೂಹಲಕ್ಕೆ ನೀವು 'ಕಿಕೀ' ಪಾಡ್‌ಕಾಸ್ಟ್ ನೋಡಿ..

ನಟ, ಪತ್ರಕರ್ತ ಹಾಗೂ ಆಂಕರ್ ಕಿರಿಕ್ ಕೀರ್ತಿ (Kirik Keerthi) ಅವರ ಪಾಡ್‌ಕಾಸ್ಟ್‌ನಲ್ಲಿ ಅತಿಥಿ ಆಗಿ ನಟ ಕೀರ್ತಿರಾಜ್ (Keerthiraj)ಅವರು ಬಂದಿದ್ದರು. ಈ ಇಬ್ಬರು ಕೀರ್ತಿ+ಕೀರ್ತಿ ಅದೇನು ಮಾತುಕತೆ ಆಡಿದ್ದಾರೆ ಗೊತ್ತಾ? ಮಾತುಕಥೆ ಅನ್ನೋದಕ್ಕಿಂತ ಹೆಚ್ಚಾಗಿ ಬಿಗ್ ಬಾಸ್ ಖ್ಯಾತಿಯ ನಟ-ನಿರೂಪಕ ಕಿರಿಕ್ ಕೀರ್ತಿ ಅವರು ಖ್ಯಾತ ಖಳನಟ ಕೀರ್ತಿರಾಜ್ ಅವರನ್ನು ಸಂದರ್ಶನ ಮಾಡಿದ್ದಾರೆ. ಆದರೆ, ಎಲ್ಲೂ ತಮ್ಮ ಹೆಸರು ಉಳಿಸಿಕೊಳ್ಳಲು ಕಿರಿಕ್ ಮಾಡಿಲ್ಲ!

ಹೌದು, ಕಿರಿಕ್ ಕೀರ್ತಿ ಅವರು ತಮ್ಮ ಪಾಡ್‌ಕಾಸ್ಟ್‌ನಲ್ಲಿ (Kirik Keethi Podcast) ಹಲವಾರು ತಾರೆಯರ ಇಂಟರ್‌ವ್ಯೂ ಮಾಡಿರೋದು ನಿಮಗೆಲ್ಲ ಗೊತ್ತೇ ಇದೆ. ಇಂದು ಪೋಸ್ಟ್ ಆಗಿರುವ 'ಕಿಕೀ ಪಾಡ್‌ಕಾಸ್ಟ್‌'ನಲ್ಲಿ ಅವರು ಕೀರ್ತಿರಾಜ್‌ ಅವರನ್ನು ಮಾತುಕಥೆಗೆ ಆಮಂತ್ರಿಸಿ ಅವರೊಂದಿಗೆ ಮಾತುಕತೆ, ಚರ್ಚೆ, ಹರಟೆ, ಹಾಡು ಹೀಗೆ ಸಾಕಷ್ಟು ಸಂಗತಿಗಳ ಅನಾವರಣ ಮಾಡಿದ್ದಾರೆ. ಕಿರಿಕ್ ಕೀರ್ತಿಗೆ ಶಾರ್ಟ್ ಅಂಡ್ ಸ್ವೀಟ್‌ ಆಗಿ 'ಕಿಕೀ' ಎಂದರೆ ಕೋಪ ಬರುತ್ತೋ ಏನೋ..!? ಸಿಟ್ಟೇನಾದ್ರೂ ಬಂದ್ರೆ ಕಿರಿಕ್ ಮಾಡೋದು ಗ್ಯಾರಂಟಿ ಅನ್ಸುತ್ತೆ..!

ಕೊನೆಗೂ ಡಿವೋರ್ಸ್ ಗುಟ್ಟು ಬಿಚ್ಚಿಟ್ಟ ಕಿರಿಕ್ ಕೀರ್ತಿ; ಹೇಗಿದ್ಯಂತೆ ಈಗಿನ ಮನಸ್ಥಿತಿ.., ಪರಿಸ್ಥಿತಿ?

ಇರ್ಲಿ, ಹಿರಿಯ ನಟ ಕೀರ್ತಿರಾಜ್ ಅವರು ಬಿಗ್ ಬಾಸ್ ಕನ್ನಡ 11ರ ಖ್ಯಾತಿಯ ನಟ ಧರ್ಮ ಕೀರ್ತಿರಾಜ್ ಅವರ ತಂದೆ ಎಂಬುದು ಬಹುತೇಕರಿಗೆ ಗೊತ್ತು.. ಗೊತ್ತಿಲ್ಲ ಅನ್ನೋರಿಗೆ 'ನಟ ಕೀರ್ತಿರಾಜ್ ಅವರ ಮಗನೇ ಧರ್ಮ ಕೀರ್ತಿರಾಜ್..' ಅಂತ ಇಂಟ್ರೊಡ್ಯೂಸ್ ಮಾಡೋದು ಬೆಟರ್.. ಏನಂತೀರಾ? ಕಿರಿಕ್ ಕೀರ್ತಿಯವರ ಪಾಡ್‌ಕಾಸ್ಟ್‌ನಲ್ಲಿ ನಟ ಕೀರ್ತಿ ಅವರು 'ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು' ಸೇರಿದಂತೆ, 'ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ..' ಎಂದೂ ಕೂಡ ಹಾಡಿಬಿಟ್ಟಿದ್ದಾರೆ ಈ ಅತಿಥಿ..!

ಅಂದಹಾಗೆ, ಈ ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾದ ಹಿರಿಯ ಖಳನಟ ಕೀರ್ತಿರಾಜ್ ಅವರು ತಮ್ಮ ಜೀವನದ ಕಹಿ-ಸಿಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಅಂಬರೀಷ್, ದರ್ಶನ್ ಸುದೀಪ್ ಹೆಸರನ್ನು ಕೂಡ ಹೇಳಿದ್ದಾರೆ. ಅವರು ಅದೇನು ಮಾತನಾಡಿದ್ದಾರೆ ಎಂಬ ಸಹಜ ಕುತೂಹಲಕ್ಕೆ ನೀವು 'ಕಿಕೀ' ಅಂದ್ರೆ ಕಿರಿಕ್ ಕೀರ್ತಿ ಪಾಡ್‌ಕಾಸ್ಟ್ ಈಗ್ಲೇ ನೋಡಿ..

ಡಾ ರಾಜ್‌ಕುಮಾರ್ ಆತ್ಮಹತ್ಯೆಗೆ ಪ್ರಯತ್ನಿಸಿದ್ಧೇಕೆ..? ಮತ್ತೆ ಬದುಕುಳಿದಿದ್ಧೇಕೆ..? ಸೀಕ್ರೆಟ್ ಸ್ಟೋರಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ