
ರಾಕಿಂಗ್ ಕಪಲ್ ರಾಧಿಕಾ ಪಂಡಿತ್ ಹಾಗೂ ಯಶ್‌ಗೆ ಎಷ್ಟು ಅಭಿಮಾನಿಗಳಿದ್ದಾರೋ ಅದಕ್ಕೂ ಡಬಲ್ ಐರಾ ಹಾಗೂ ಯಥರ್ವ್‌ಗೆ ಫ್ಯಾನ್ಸ್ ಇದ್ದಾರೆ ಅಂದ್ರೆ ಸುಳ್ಳಾಗಲ್ಲ. ಇದಕ್ಕೆ ಸಾಕ್ಷಿ ಅವರ ಹೆಸರಿನಲ್ಲಿರುವ ಸೋಷಿಯಲ್ ಮೀಡಿಯಾ ಫ್ಯಾನ್ ಪೇಜ್. ಸ್ಟಾರ್ ಕಿಡ್ಸ್ ಪಟ್ಟಿಯಲ್ಲಿ ಟಾಪ್ ಇರುವ ರಾಕಿಂಗ್ ಮಕ್ಕಳು ಎಷ್ಟು ನಾಟಿ ಅಂತ ನೀವು ಈ ಫೋಟೋ ನೋಡಿದರೆ ಗೊತ್ತಾಗುತ್ತೆ....
ರಾಧಿಕಾ ಪೋಸ್ಟ್:
'ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಪ್ರೀತಿ, ಸಂತೋಷ ಹಾಗೂ ಕೊಂಚ ತುಂಟಾಟ ತುಂಬಿರಲಿ. ಆರ್ಡರ್‌ನಲ್ಲಿದೆ ಇವರಿಬ್ಬರ ತುಂಟಾಟ. ಈ ವರ್ಷ ಅದ್ಭುತವಾಗಿರಲಿದೆ,' ಎಂದು ರಾಧಿಕಾ ಬರೆದಿದ್ದಾರೆ.
ಬೀಚ್ ಬಳಿ ಕೇಕ್ ಸ್ಮ್ಯಾಶ್ ಮಾಡಿದ ಯಥರ್ವ್; ರಾಧಿಕಾ ಶೇರ್ ಮಾಡಿದ ವಿಡಿಯೋ ವೈರಲ್!
ಮೊದಲ ಫೋಟೋದಲ್ಲಿ ಐರಾ ಹಾಗೂ ಯಥರ್ವ್ ಪೋಸ್ ನೀಡಿದ್ದಾರೆ. ಎರಡನೇ ಫೋಟೋದಲ್ಲಿ ಐರಾ ತಮ್ಮನ್ನನ್ನು ಕಚ್ಚಲು ಹೋಗಿದ್ದಾಳೆ, ಮೂರನೇ ಫೋಟೋದಲ್ಲಿ ಅಕ್ಕ ನಗುತ್ತಿದ್ದರೆ, ತಮ್ಮ ಅಳುತ್ತಿದ್ದಾನೆ. ಮೊದಲ ಬಾರಿ ರಾಧಿಕಾ ಈ ರೀತಿಯ ಪೋಟೋ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು ಸಖತ್ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ. ರಾಧಿಕಾ ಮನೆಯಲ್ಲಿ ಪ್ರತಿ ಹಬ್ಬವನ್ನೂ ಆಚರಿಸುತ್ತಾರೆ. ಸಂಭ್ರಮದ ಕ್ಷಣಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಾರೆ.
ಹೊಸ ಡಿಮ್ಯಾಂಡ್:
ರಾಧಿಕಾ ಮತ್ತು ಯಶ್‌ನನ್ನು ಜಾಹೀರಾತಿನಲ್ಲಿ ಕಂಡ ಅಭಿಮಾನಿಗಳು ಈಗ ಹೊಸ ಡಿಮ್ಯಾಂಡ್‌ವೊಂದನ್ನು ಇಟ್ಟಿದ್ದಾರೆ. ಅದುವೇ ನಾಲ್ಕೂ ಜನರೂ ಒಟ್ಟಿಗೆ ಇರುವ ಫೋಟೋವನ್ನು ಅಪ್ಲೋಡ್ ಮಾಡಿ ಎಂದು. ಯಥರ್ವ್ ಹುಟ್ಟುಹಬ್ಬದಲ್ಲಿ ಸೆರೆ ಹಿಡಿದ ಫೋಟೋನೇ ಬೇಕೆಂಬುದು ಮತ್ತೊಂದು ಡಿಮ್ಯಾಂಡ್.
It's great: ಜಾಹೀರಾತು ಲೋಕದಲ್ಲಿ ಮೋಡಿ ಮಾಡಿದ ರಾಕಿಂಗ್ ಕಪಲ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.