
ಸ್ಯಾಂಡಲ್‌ವುಡ್ ಸಿಂಡ್ರೆಲಾ, ಸೂಪರ್ ಮಾಮ್ ರಾಧಿಕಾ ಪಂಡಿತ್ ತಮ್ಮ ಹೊಸ ಮನೆಯಲ್ಲಿ ಗೌರಿ ಗಣೇಶ ಹಬ್ಬವನ್ನು ಸಾಂಪ್ರಾದಾಯಿಕ, ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ, ಸಂಭ್ರಮ, ಸಡಗದರದಿಂದ ಆಚರಿಸಿದ್ದಾರೆ. ಇಬ್ಬರು ಮುದ್ದಾದ ಮಕ್ಕಳ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ.
'ಇಲ್ಲಿ ನಮಗೆ ಪೂಜೆಗೆ ಸಹಾಯ ಮಾಡಲು ಪುಟ್ಟ ಗಣೇಶ ಇದ್ದಾನೆ. ಆದರೆ ನಮ್ಮ ಪುಟ್ಟ ಗೌರಿ ಪೂಜೆಗೂ ಮುನ್ನವೇ ಪ್ರಸಾದ ಸೇವಿಸಬೇಕಂತೆ. ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಹಬ್ಬ ನಿಮಗೆ ಸಂತೋಷ ಹಾಗೂ ಒಳ್ಳೆ ಆರೋಗ್ಯ ಕೊಡಲಿ,' ಎಂದು ರಾಧಿಕಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹೊಸ ಮನೆಯ ಬೆಳ್ಳಿ ಗಣಪತಿ ಮುಂದೆ ಯಥರ್ವ್ ಹಾಗೂ ರಾಧಿಕಾ ಪೋಟೋಗೆ ಪೋಸ್ ಕೊಟ್ಟಿದ್ದಾರೆ. ಯಶ್ ದೇವರಿಗೆ ಪೂಜೆ ಸಲ್ಲಿಸುತ್ತಿದ್ದರೆ, ಯಥರ್ವ್ ಗಂಟೆ ಹೊಡೆಯುತ್ತಿದ್ದಾನೆ, ಅಜ್ಜನ ಜೊತೆ ಐರಾ ಹಠ ಮಾಡುತ್ತಿದ್ದಾಳೆ. ಎರಡನೇ ಪೋಟೋದಲ್ಲಿ ತಾತ-ಅಜ್ಜಿ ಮನೆಯಲ್ಲಿ ಈ ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ಹಬ್ಬ ಆಚರಿಸಿದೆ. ರಾಧಿಕಾ ಅಪ್ಪ-ಅಮ್ಮ ಫೋಟೋದಲ್ಲಿದ್ದಾರೆ. ಅಜ್ಜಿ ಬಳಿ ಪ್ರಸಾದ ಕೇಳಿ ತಿನ್ನುತ್ತಿರುವ ಐರಾಳನ್ನು ತಮ್ಮ ನೋಡುತ್ತಿದ್ದಾನೆ.
'ನಿಮ್ಮ ಮಕ್ಕಳು ಅದೃಷ್ಟವಂತರು. ಎಲ್ಲಾ ರೀತಿಯ ಸಂಸ್ಕಾರ ಹೇಳಿ ಕೊಡುತ್ತಿದ್ದೀರಿ. ಯಾವ ಹಬ್ಬವನ್ನೂ ಮಿಸ್ ಮಾಡದೇ ಆಚರಿಸುತ್ತಿದ್ದೀರಿ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.