ಕಂಪ್ಲೀಟ್‌ ಕ್ರಿಯೇಟಿವ್‌ ಪರ್ಸನಾಲಿಟಿ ಆಗ್ಬೇಕು : ರಮೇಶ್‌ ಅರವಿಂದ್‌

By Kannadaprabha NewsFirst Published Sep 10, 2021, 10:46 AM IST
Highlights

ನಮ್ಮೊಳಗಿನ ಒಂದೊಂದೇ ಭಾವನೆಯನ್ನು ಹೆಕ್ಕಿ ತೆಗೆದು ಮಾತಾಡಿಸಿದಂತೆ ರಮೇಶ್‌ ಅರವಿಂದ್‌ ಅವರ ಪಾತ್ರಗಳು. ಚಿರ ವಿರಹಿ, ಪ್ರೇಮಿ, ವ್ಯಾಮೋಹಿ, ನಗಿಸುವ ಕಿಲಾಡಿಯಾಗೆಲ್ಲ ಹತ್ತಿರವಾಗುವ ರಮೇಶ್‌ ಅವರಿಗೆ 56. ಆಡುವ ಪ್ರತೀ ಮಾತನ್ನೂ ತನಗೂ ಇತರರಿಗೂ ಸ್ಛೂರ್ತಿಯಾಗುವಂತೆ ಆಡುವುದು ರಮೇಶ್‌ ಕ್ರಮ. ಬತ್‌ರ್‍ಡೇ ಹುಡುಗನ ಹುಮ್ಮಸ್ಸಿನ ಮಾತುಗಳು ಇಲ್ಲಿವೆ.
 

ಪ್ರಿಯಾ ಕೆರ್ವಾಶೆ

- ಈ ಬಾರಿಯ ಬತ್‌ರ್‍ಡೇ ವಿಶೇಷ ಅಂದ್ರೆ ಶಿವಾಜಿ ಸುರತ್ಕಲ್‌ 2 ಪೋಸ್ಟರ್‌ ಲಾಂಚ್‌ ಆಗ್ತಿದೆ. 100 ಚಿತ್ರ ಕನ್ನಡ, ತೆಲುಗಿನಲ್ಲಿ ಬಿಡುಗಡೆಗೆ ಸಿದ್ಧವಿದೆ. ವೆಬ್‌ಸೀರೀಸ್‌ ಬಹುಶಃ ಕನ್ನಡ ಓಟಿಟಿಯಲ್ಲಿ ಮುಂದಿನ ಎಪ್ರಿಲ್‌ನಲ್ಲಿ ಬಿಡುಗಡೆ ಆಗುತ್ತೆ. ಉಳಿದಂತೆ ಬತ್‌ರ್‍ಡೇ ಸೆಲೆಬ್ರೇಶ್‌ ಅಂತೆಲ್ಲ ಮಾಡಲ್ಲ. ಮನೆಮಂದಿಯ ಜೊತೆಗೆ ಖುಷಿಯಿಂದ ಕಾಲ ಕಳೆಯೋದು, ಈಗ ಅಳಿಯನೂ ಬಂದು ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆಯಾಗಿದೆ.

- ಜನ್ಮದಿನದಂದು ನನಗೆ ನಾನೇ ಕೊಡುವ ಗಿಫ್ಟ್‌ ಅಂದರೆ ನನ್ನ ಬೆಳವಣಿಗೆ. ಹಿಂದಿನ ಬತ್‌ರ್‍ಡೇಗಿಂತ ಈ ಬತ್‌ರ್‍ಡೇಗೆ ಬಂದಾಗ ಹೊಸದಾಗಿ ಏನೋ ಕಲಿಯೋದು, ನನ್ನನ್ನು ನಾನು ಬೆಳೆಸೋದು. ನಾವು ಸ್ಕೂಲಲ್ಲಿದ್ದಾಗ ಪ್ರತೀವರ್ಷ ಮುಂದಿನ ಕ್ಲಾಸ್‌ಗೆ ಪ್ರಮೋಶನ್‌ ಸಿಕ್ತಾ ಹೋಗುತ್ತೆ. ಆದರೆ ಆ ಬಳಿಕ ಇದ್ದಲ್ಲೇ ಇದ್ದು ಬಿಡೋ ಅಪಾಯ ಇರುತ್ತೆ. ಅದು ಒಳ್ಳೇದಲ್ಲ. ಕಷ್ಟಪಟ್ಟಾದರೂ ಮುಂದೆ ಹೆಜ್ಜೆ ಇಡಲೇ ಬೇಕು. ಅದೇ ಸಹಜ.

ವೆಬ್ ಸೀರೀಸ್ ಈ ಕಾಲದ ಅದ್ಭುತ ಮಾಧ್ಯಮ : ರಮೇಶ್ ಅರವಿಂದ್

- ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ, ಬರಹಗಾರ, ಮೋಟಿವೇಶನಲ್‌ ಸ್ಪೀಕರ್‌, ಸಿನಿಮಾ ರಸಿಕ ಆಗಿ ಗುರುತಿಸಿಕೊಂಡಿದ್ದೇನೆ. ಕಂಪ್ಲೀಟ್‌ ಫಿಲಂ ಪರ್ಸನಾಲಿಟಿ ಆಗ್ಬೇಕು, ಒಬ್ಬ ಪರಿಪೂರ್ಣ ಕ್ರಿಯೇಟರ್‌ ಆಗುವತ್ತ ಬೆಳೆಯೋದು ನನ್ನ ಖುಷಿ. ಜೊತೆಗೆ ಮಾನವೀಯತೆ ಮೆರೆಯಬೇಕು ಎಂಬುದು ನನ್ನ ತುಡಿತ.

ನನ್ನ ಬೆಳೆಸಿದ 5 ಅಂಶಗಳು

1. ಗಂಡನಾಗಿ, ನಟನಾಗಿ, ವ್ಯವಹಾರಿಕವಾಗಿ ಒಪ್ಪಿಕೊಂಡ ಕೆಲಸ, ಜವಾಬ್ದಾರಿ, ನಿರೀಕ್ಷೆಯನ್ನು ಶೇ.100 ಅಥವಾ ಅದಕ್ಕಿಂತ ಹೆಚ್ಚು ಪೂರೈಸಿದ್ದೀನಿ.

2. ಸತತ ಕಲಿಕೆ ನನ್ನ ಬೆಳೆಸಿದೆ. ಮೊಬೈಲ್‌ಗೆ ಒಂದು ವಿಷಯ ಬಂದು ಬಿತ್ತು ಅನ್ನೋ ಕಾರಣಕ್ಕೆ ತೆರೆದು ನೋಡುವ ಬದಲು, ನನಗೆ ಬೇಕಾದ್ದನ್ನು ಹುಡುಕಿಕೊಂಡು ಹೋಗಿ ಕಲಿಯೋದು ನನಗಿಷ್ಟ.

3. ಸಮಸ್ಯೆ ಬಗೆಹರಿಸಲು ಎರಡು ದಾರಿಯಿದೆ. ಒಂದು ಪ್ರೀತಿ, ಇನ್ನೊಂದು ದ್ವೇಷ. ನನ್ನದು ಪ್ರೀತಿಯ ದಾರಿ. ಇದು ಪ್ರತೀ ಹೆಜ್ಜೆಯಲ್ಲೂ ನನ್ನ ಮುನ್ನಡೆಸಿದೆ.

ಕಮೆಂಟ್ ಮಾಡುವವರ ಎದುರು ಥಂಬ್ ತೋರಿಸಿ.. ಮಗಳ ಮದುವೆ ನಂತರ ರಮೇಶ್  ಮಾತು!

4. ಕಂಪ್ಲೇಂಟ್‌ ಮಾಡೋದು, ಕೊರಗೋದು ನನ್ನ ಜಾಯಮಾನ ಅಲ್ಲ. ನಾನು ಯೋಚಿಸಿದಂತೆ ಜಗತ್ತಿದೆ ಎಂದು ಭಾವಿಸುತ್ತೇನೆ. ಅದು ಸತ್ಯವಾಗಿದೆ.

5. ಪಾಸಿಟಿವಿಟಿ ಅಂದರೆ ಸಕಾರಾತ್ಮಕ ಚಿಂತನೆಗಳು ನನ್ನ ಕೈ ಹಿಡಿದು ಮುನ್ನಡೆಸಿವೆ.

ಸೋಲಿಂದ ಮೇಲೆ ಬರೋ ದಾರಿ

ನಮ್ಮ ಮನೆಯಲ್ಲೊಬ್ಬ ಹುಡುಗ ಸಖತ್ತಾಗಿ ಕಾಮಿಡಿ ಮಾಡ್ತಾನೆ. ಇದನ್ನು ಇನ್‌ಸ್ಟಾದಲ್ಲಿ ರೀಲ್‌ ಮಾಡು ಅಂದ್ರೆ ಮಾಡ್ತೀನಿ ಅಂತಾನೆ, ಹಾಗಂದು ಆರು ತಿಂಗಳಾಯ್ತು, ಇನ್ನೂ ಮಾಡಿಲ್ಲ. ಕಾರಣ ಯಾರಾದ್ರೂ ಟೀಕೆ ಮಾಡಿದ್ರೆ, ಅವಮಾನ ಆದ್ರೆ ಅನ್ನುವ ಭಯ. ಸೋಲಿನ ಕಾರಣಕ್ಕೆ ಪ್ರಯತ್ನ ಮಾಡದೇ ಇರಬಾರದು. ನನ್ನದೇ ಉದಾಹರಣೆ ಹೇಳೋದಾದ್ರೆ ಒಂದೂವರೆ ವರ್ಷದಿಂದ ವೇದಿಕೆಯಲ್ಲಿ ಮಾತಾಡದ ಕಾರಣ ಸಣ್ಣ ಸ್ಟೇಜ್‌ ಫಿಯರ್‌ ಶುರುವಾಗಿತ್ತು. ಇತ್ತೀಚೆಗೆ ಚೆನ್ನೈಗೆ ಹೋಗಿದ್ದಾಗ ಶಾಲೆಯಲ್ಲಿ ಚೀಫ್‌ ಗೆಸ್ಟ್‌ ಆಗಿ ಕರೆದರು. ಸ್ಟೇಜ್‌ ಫಿಯರ್‌ ನೆನೆಸಿ ಕೊಂಚ ಕಸಿವಿಸಿ ಆದರೂ ಮರ್ಯಾದೆ ಹೋದ್ರೆ ಮಕ್ಕಳ ಮುಂದೆ ತಾನೇ ಅಂದುಕೊಂಡು ಹೋದೆ. ಪುಣ್ಯಕೆ ಭರ್ಜರಿ ಚಪ್ಪಾಳೆ ಬಿತ್ತು. ನನ್ನ ಆತ್ಮವಿಶ್ವಾಸ ಮತ್ತೆ ಬೆಳೆಯಿತು. ಅಂಥಾ ಸ್ಥಿತಿಯಲ್ಲಿ ಲಕ್ಷಾಂತರ ಜನರ ಮುಂದೆ ಮಾತಾಡೋ ಬದಲು ಇಂಥ ಕಡೆ ಮಾತಾಡಿ ಮುಂದೆ ಲಕ್ಷಾಂತರ ಜನರೆದುರು ಮಾತಾಡೋದು ಜಾಣತನ.

ಅಮೇರಿಕಾ ಅಮೇರಿಕಾದ ಸೂರ್ಯನೇ ನಾನು

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಅಮೇರಿಕಾ ಅಮೇರಿಕಾ ಚಿತ್ರದ ಸೂರ್ಯನ ಪಾತ್ರಕ್ಕೂ ನನ್ನ ಸ್ವಭಾವಕ್ಕೂ ಎಷ್ಟುಹೋಲಿಕೆ ಇದೆ ಅಂದರೆ ಅವನೇ ನಾನು ಅನಿಸುತ್ತೆ. ನಂಗೂ ಅಮೆರಿಕಾ ಇಷ್ಟಇರಲಿಲ್ಲ. ಹುಡುಗೀರಿಗೆ ಪ್ರೊಪೋಸ್‌ ಮಾಡೋದು ಬಿಡಿ, ಅವರ ಜೊತೆಗೆ ಮಾತಾಡೋದೂ ಆ ವಯಸ್ಸಲ್ಲಿ ಕಷ್ಟಆಗ್ತಿತ್ತು. ನನ್ನ ಸ್ವಭಾವಕ್ಕೆ ತದ್ವಿರುದ್ಧ ಅಮೃತವರ್ಷಿಣಿಯ ಅಭಿಷೇಕ್‌ ಪಾತ್ರ. ಅದನ್ನು ನಿರ್ವಹಿಸೋದು ಕಷ್ಟಆದರೂ ಆಮೇಲೆ ಸಿಕ್ಕ ಖುಷಿ ಅಷ್ಟಿಷ್ಟಲ್ಲ.

ನಟ ಎನ್ನುವುದು ಬ್ಯೂಟಿಫುಲ್‌ ರೋಲ್‌; ರಮೇಶ್‌ ಅರವಿಂದ್‌ ಸ್ಫೂರ್ತಿ ಕಥೆ!

ರಮೇಶ್‌ ನೀಡುವ 5 ಟಿಫ್ಸ್‌

1. ಹೊಸ ನಿರ್ದೇಶಕರಿಗೆ :

ಘಟನೆಯನ್ನು ದೃಶ್ಯದ ಮೂಲಕ ಹೇಗೆ ಹೇಳಬೇಕು ಅನ್ನುವ ವಿಷ್ಯುವಲ್‌ ಲಿಟರೆಸಿ ಬೆಳೆಸಿಕೊಳ್ಳಬೇಕು. ಸಿನಿಮಾದಲ್ಲಿ ಬರುವ 60-70 ಮನಸ್ಥಿತಿಗಳ ಸೈಕಾಲಜಿ ಅರಿತುಕೊಂಡು ಹ್ಯಾಂಡಲ್‌ ಮಾಡುವ ಜಾಣ್ಮೆ ಬೇಕು. ಎಲ್ಲಕ್ಕಿಂತ ಮುಖ್ಯ ಕತೆ ಹೇಳುವ ಕಲೆ ತಿಳಿಯಬೇಕು.

2. ನಟರಿಗೆ:

ಇಂಥಾ ಘಟನೆಗೆ ಈ ಪಾತ್ರ ಹೇಗೆ ಪ್ರತಿಕ್ರಿಯಿಸಬಹುದು ಅನ್ನುವ ಗ್ರಹಿಕೆ. ಫೋಕಸ್‌ ಆಗಿದ್ದೇ ಆರಾಮವಾಗಿಯೂ ಇದ್ದರೆ ಡೈಲಾಗ್‌ ತಪ್ಪಲ್ಲ. ಜೊತೆಗೆ ಈ ಪಾತ್ರಕ್ಕೆ ಈ ಕ್ಷಣಕ್ಕೂ ಮೊದಲು ಏನಾಗಿತ್ತು ಅಂತ ಕಂಡುಕೊಂಡು ಬಳಿಕ ನಟನೆ ಮುಂದುವರಿಸಬೇಕು.

3. ಬರಹಗಾರನಿಗೆ

ಸಿನಿಮಾ ಬರಹಗಾರನಿಗೆ ಬರವಣಿಗೆಯಲ್ಲಿ ಫ್ರೆಶ್‌ನೆಸ್‌ ಬೇಕು. ಏಕತಾನತೆ ಅನಿಸಿದರೆ ಅದನ್ನು ಬ್ರೇಕ್‌ ಮಾಡಿ ಮತ್ತೆ ಕಟ್ಟುತ್ತಾ ಹೋಗಬೇಕು. ಕುತೂಹಲವನ್ನು ಕೊನೇವರೆಗೆ ಹಿಡಿದಿಟ್ಟುಕೊಳ್ಳೋದು ಗೊತ್ತಿರಬೇಕು. ಎಮೋಶನ್‌ಅನ್ನು ಕೊನೇವರೆಗೂ ಬಿಡಬಾರದು. ಇಲ್ಲಿ ಬುದ್ಧಿವಂತಿಕೆಗಿಂತಲೂ ಭಾವನೆ ಜನರಿಗೆ ಹೆಚ್ಚು ಕನೆಕ್ಟ್ ಆಗುತ್ತೆ.

5. ನಿರೂಪಕನಿಗೆ

ನನ್ನೆದುರು ಕೂತ ವ್ಯಕ್ತಿಯ ಜೊತೆಗೆ ಒಂದು ಕನೆಕ್ಷನ್‌ ಬೆಳೆಯುವಂತೆ ನೋಡಿಕೊಳ್ಳಬೇಕು. ಆ ಕ್ಷಣ ಮನಸ್ಸು ದೇಹ ಎಲ್ಲ ಅಲ್ಲೇ ಇದ್ದರೆ ಸ್ಪಾಂಟೆನಿಟಿಗೆ ಧಕ್ಕೆ ಆಗಲ್ಲ.

click me!