ದಾಖಲೆ ಮಟ್ಟದಲ್ಲಿ 35 ಕೋಟಿ ರು. ಬಾಕ್ಸ್‌ ಅಫೀಸ್‌ ಗಳಿಕೆ ಮಾಡುತ್ತಿರುವ ಧ್ರುವ ಸಿನಿಮಾ

Kannadaprabha News   | Asianet News
Published : Feb 22, 2021, 08:56 AM ISTUpdated : Feb 22, 2021, 09:21 AM IST
ದಾಖಲೆ ಮಟ್ಟದಲ್ಲಿ 35 ಕೋಟಿ ರು. ಬಾಕ್ಸ್‌ ಅಫೀಸ್‌ ಗಳಿಕೆ ಮಾಡುತ್ತಿರುವ ಧ್ರುವ ಸಿನಿಮಾ

ಸಾರಾಂಶ

ಧ್ರುವ ಸರ್ಜಾ ಅಭಿನಯದ ‘ಪೊಗರು’ ಸಿನಿಮಾ ನಿರೀಕ್ಷೆಗೂ ಮೀರಿ ಗಳಿಕೆ ಮಾಡುತ್ತಿದೆ. ಮೊದಲ ದಿನವೇ ರಾಜ್ಯದಲ್ಲಿ 10 ಕೋಟಿ 5 ಲಕ್ಷ ರು. ಕಲೆಕ್ಷನ್‌ ಮಾಡುವ ಮೂಲಕ ದಾಖಲೆ ಬರೆದಿದ್ದು, ಎರಡನೇ ದಿನಕ್ಕೆ ಇದರ ಗಳಿಗೆ 18.5 ಕೋಟಿ ರು. ಆಗಿದೆ. ಇದು ಹೀಗೆ ಮುಂದುವರೆದರೆ ರಾಜ್ಯದಲ್ಲೇ ‘ಪೊಗರು’ ಕಲೆಕ್ಷನ್‌ ಮೂರು ದಿನಕ್ಕೆ 28 ಕೋಟಿ ದಾಟಲಿದೆ. ಬೆಂಗಳೂರು, ಹುಬ್ಬಳಿ, ಕೋಲಾರ ಭಾಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡುತ್ತಿದೆ ಎನ್ನುತ್ತಿವೆ ಗಾಂಧೀನಗರದ ಲೆಕ್ಕಾಚಾರಗಳು.

35 ಕೋಟಿ ದಾಟಲಿದೆ

ಆಂಧ್ರ ಹಾಗೂ ತೆಲಂಗಾಣದಲ್ಲಿ 300 ಚಿತ್ರಮಂದಿರಗಳಲ್ಲಿ ಪೊಗರು ಬಿಡುಗಡೆಯಾಗಿದ್ದು, ಎರಡು ದಿನಕ್ಕೆ 3 ಕೋಟಿ ರು. ಗಳಿಕೆ ಮಾಡಿದೆ. ತಮಿಳುನಾಡಿನಲ್ಲಿ 250 ಚಿತ್ರಮಂದಿರಗಳಲ್ಲಿ ತೆರೆಕಂಡು, ಎರಡು ದಿನದಲ್ಲಿ 1.5 ಕೋಟಿ ರು. ಗಳಿಕೆ ದಾಖಲಿಸಿದೆ. ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರ- ತೆಲಂಗಾಣದಲ್ಲಿ ಮೂರು ದಿನದ ಗಳಿಕೆ 35 ಕೋಟಿ ರು. ದಾಟುವ ನಿರೀಕ್ಷೆ ಇದೆ ಎನ್ನುತ್ತಾರೆ ನಿರ್ಮಾಪಕರು. ‘ನಮ್ಮ ಸಿನಿಮಾ ಈ ಮಟ್ಟಕ್ಕೆ ಗಳಿಕೆ ಮಾಡುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಮೊದಲ ದಿನವೇ ಕನ್ನಡದಲ್ಲಿ 10 ಕೋಟಿ ದಾಟಿದೆ. ಇದೇ ಮೊದಲ ಬಾರಿಗೆ ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದಲ್ಲಿ ಮೊದಲ ದಿನವೇ 10 ಲಕ್ಷ ಕಲೆಕ್ಷನ್‌ ಆಗಿದೆ. ಮಹಾರಾಷ್ಟ್ರ ಭಾಗದಲ್ಲಿ ಪ್ರತಿ ದಿನ 40 ಪ್ರದರ್ಶನ ಕಾಣುತ್ತಿದೆ. ಕನ್ನಡ, ತೆಲುಗು, ತಮಿಳಿನಲ್ಲಿ ಸೋಮವಾರದವರೆಗೂ ಹೀಗೆ ಕಲೆಕ್ಷನ್‌ ಮುಂದುವರಿದರೆ 35 ಕೋಟಿ ರು. ದಾಟಲಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದೊಡ್ಡ ಮೊತ್ತದ ಗಳಿಕೆಯೇ’ ಎನ್ನುತ್ತಾರೆ ನಿರ್ಮಾಪಕ ಬಿ ಕೆ ಗಂಗಾಧರ್‌.

ಪೊಗರು ನೋಡಲು ನಿರ್ದೇಶಕ ಕೊಟ್ಟ 10 ಕಾರಣಗಳು! 

"

ಡಬ್ಬಿಂಗ್‌ ಹಾಗೂ ಟೀವಿ ರೈಟ್ಸ್‌

ಸಿನಿಮಾ ಒಳ್ಳೆಯ ಕಲೆಕ್ಷನ್‌ ಮಾಡುತ್ತಿರುವಾಗಲೇ ಇತ್ತ ‘ಪೊಗರು’ ಚಿತ್ರದ ಡಿಜಿಟಲ್‌ ಮಾರುಕಟ್ಟೆಯ ವ್ಯಾಪಾರವೂ ಜೋರಾಗಿ ನಡೆಯುತ್ತಿದೆ. ಈಗಾಗಲೇ ಹಿಂದಿ ಡಬ್ಬಿಂಗ್‌ ರೈಟ್ಸ್‌ ಅನ್ನು 7.20 ಕೋಟಿ ರು. ಗೆ ಮಾರಾಟ ಮಾಡಲಾಗಿದೆ. ತೆಲುಗು ಹಾಗೂ ತಮಿಳಿನಲ್ಲಿ ಟೀವಿ ಪ್ರಸಾರ ಹಕ್ಕುಗಳಿಗೆ ಭಾರೀ ಬೇಡಿಕೆ ಬರುತ್ತಿದೆ. ಕನ್ನಡದಲ್ಲಿ ಸ್ಯಾಟಲೈಟ್‌ ಹಕ್ಕುಗಳನ್ನು 6.30 ಕೋಟಿ ರು.ಗೆ ಮಾರಾಟ ಮಾಡಲಾಗಿದೆ. ಥಿಯೇಟರ್‌ ಹಾಗೂ ಡಿಜಿಟಲ್‌ ಮಾರಾಟದಿಂದ ‘ಪೊಗರು’ ಬ್ಯುಸಿನೆಸ್‌ ಸುಮಾರು 50 ಕೋಟಿ ರು. ಆಗಲಿದೆ ಎನ್ನುವ ಲೆಕ್ಕಾಚಾರ ಚಿತ್ರತಂಡದ್ದು.

ಕೆಜಿಎಫ್‌ ನಂತರ ತೆಲುಗು, ತಮಿಳಿನಲ್ಲಿ ಹಿಟ್ ಆಗಿದ್ದು ಪೊಗರು ಚಿತ್ರನೇ! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Darshan The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ ದರ್ಶನ್‌ ಮೆಸೇಜ್
ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು