ರಾಜಸ್ಥಾನದಲ್ಲಿ ರಾಕಿಂಗ್ ಜೋಡಿ; ಯಶ್-ರಾಧಿಕಾ ಪ್ರೇಮಿಗಳ ದಿನದ ಸಂಭ್ರಮ ಹೇಗಿತ್ತು? ರೊಮ್ಯಾಂಟಿಕ್ ಫೋಟೋ ವೈರಲ್

Published : Feb 15, 2023, 10:46 AM ISTUpdated : Feb 15, 2023, 11:08 AM IST
ರಾಜಸ್ಥಾನದಲ್ಲಿ ರಾಕಿಂಗ್ ಜೋಡಿ; ಯಶ್-ರಾಧಿಕಾ ಪ್ರೇಮಿಗಳ ದಿನದ ಸಂಭ್ರಮ ಹೇಗಿತ್ತು? ರೊಮ್ಯಾಂಟಿಕ್ ಫೋಟೋ ವೈರಲ್

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ರಾಜಸ್ಥಾನಕ್ಕೆ ತೆರಳಿದ್ದು ಅಲ್ಲಿಯೇ ಪ್ರೇಮಿಗಳ ದಿನವನ್ನು ಸಂಭ್ರಮಿಸಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಅತ್ಯಂತ ಪ್ರೀತಿ ಪಾತ್ರವಾದ ಜೋಡಿಗಳಲ್ಲಿ ಒಂದು. ಇಬ್ಬರೂ ಪ್ರೀತಿಸಿ ಮದುವೆಯಾದವರು. ಈ ಕ್ಯೂಟ್ ಕಪಲ್ ಅನೇಕರಿಗೆ ಮಾದರಿ. ಈ ಸುಂದರ ಸ್ಟಾರ್ ಕಪಲ್ ಅಷ್ಟೇ ಸುಂದರವಾಗಿ ಪ್ರೇಮಿಗಳ ದಿನವನ್ನು ಸಂಭ್ರಮಿಸಿದ್ದಾರೆ. ಯಶ್ ಮತ್ತು ರಾಧಿಕಾ ಇಬ್ಬರೂ ಪ್ರೇಮಿಗಳ ದಿನಕ್ಕೆ ರಾಜಸ್ಥಾನಕ್ಕೆ ತೆರಳಿದ್ದಾರೆ. ಇಬ್ಬರು ಖಾಸಗಿ ಜೆಟ್ ನಲ್ಲಿ ರಾಜಸ್ಥಾನಕ್ಕೆ ಹಾರಿದ್ದು ಜೈಪುರದಲ್ಲಿ ವ್ಯಾಲಂಟೈನ್ ಡೇ ಆಚರಿಸಿದ್ದಾರೆ. ಇಬ್ಬರೂ ಖಾಸಗಿ ಜೆಟ್ ನಲ್ಲಿ ಪ್ರಯಾಣ ಬೆಳೆಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ವಿಶೇಷ ದಿನವನ್ನು ರಾಜಸ್ಥಾನದಲ್ಲಿ ಕಳೆದ ಫೋಟೋವನ್ನು ರಾಧಿಕಾ ಪಂಡಿತ್ ಶೇರ್ ಮಾಡಿ ಪ್ರೇಮಿಗಳ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ. ಪತಿ ಯಶ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಪೋಸ್ಟ್ ಮಾಡಿ, 'ಪ್ರೀತಿಯು ದೊಡ್ಡ ಪ್ರತಿಧ್ವನಿಯನ್ನು ಹೊಂದಿದೆ. ಪ್ರೇಮಿಗಳ ದಿನದ ಶುಭಾಶಯಗಳು' ಎಂದು ಹೇಳಿದ್ದಾರೆ. ಅರಮನೆ, ಬ್ಯಾಡ್ರೌಂಡ್ ನಲ್ಲಿ ನೀರು ರಾಕಿಂಗ್ ದಂಪತಿಯ ರೊಮ್ಯಾಂಟಿಕ್ ಫೋಟೋ ಅಭಿಮಾನಿಗಳ ಗಮನ ಸೆಳೆದಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸ್ಟಾರ್ ಜೋಡಿಗೆ ಶುಭಕೋರುತ್ತಿದ್ದಾರೆ. 

ರಾಕಿಗೆ ತೋಳ್ಬಲದ ಸವಾಲ್ ಹಾಕಿದ ಪುತ್ರ: ಯಶ್‌ಗಿಂತ ಪವರ್ ಫುಲ್ ಯಥರ್ವ್

ಯಶ್​ ಮತ್ತು ರಾಧಿಕಾ ಪಂಡಿತ್​ ಸ್ಯಾಂಡಲ್​ವುಡ್​ನ ಖ್ಯಾತ ಜೋಡಿ. ಇಬ್ಬರೂ ಸಿನಿಮಾದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಧಾರಾವಾಹಿ ಮೂಲಕ ಇಬ್ಬರೂ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕಿರುತೆರೆಯಿಂದನೂ ಒಟ್ಟಿಗೆ ಪಯಣ ಪ್ರಾರಂಭಿಸಿದ ಈ ಜೋಡಿ ಇದೀಗ ಒಟ್ಟಿಗೆ ಜೀವನದ ಪಯಣವನ್ನು ಮಾಡುತ್ತಿದ್ದಾರೆ. ಯಶ್ ಮತ್ತು ರಾಧಿಕಾ ಜೋಡಿಗೆ ಇಬ್ಬರೂ ಮುದ್ದಾದ ಮಕ್ಕಳಿದ್ದಾರೆ. ಐರಾ ಮತ್ತು ಯಥರ್ವ್ ಎಂದು ಹೆಸರಿಡಲಾಗಿದೆ. 

ಯಶ್ ಮತ್ತು ರಾಧಿಕಾ ಇಬ್ಬರೂ ಜೈಪುರದಲ್ಲಿ ಜೆಟ್ ಇಳಿದು ಹೋಗುತ್ತಿರುವ ಫೋಟೋ ಕೂಡ ವೈರಲ್ ಆಗಿದೆ. ಇಬ್ಬರ ಫೋಟೋಗಳಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಯಶ್ ಮುಂದಿನ ಸಿನಿಮಾದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ರಾಧಿಕಾ ಶೇರ್ ಮಾಡಿರುವ ಫೋಟೋಗೆ ಅಭಿಮಾನಿಗಳು, 'ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂದು ಕೇಳಿ ಹೇಳಿ ಮೇಡಮ್' ಎಂದು ಕೇಳುತ್ತಿದ್ದಾರೆ.

Yash: ಮುಂಬೈನಲ್ಲಿ ರಾಕಿಭಾಯ್ ಹವಾ: ಯಶ್ ನೋಡಲು ಮುಗಿಬಿದ್ದ ಫ್ಯಾನ್ಸ್

ಕೆಜಿಎಫ್-2 ಬಳಿಕ ಯಶ್ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಹಾಗಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಯಶ್ ಮುಂದಿನ ಸಿನಿಮಾ ಯಾವುದು ಎಂದು ಕಾತರದಿಂದ ಕಾಯುತ್ತಿದ್ದಾರೆಯ ಈಗಾಗಲೇ ಯಶ್ 19ನೇ ಸಿನಿಮಾದ ಬಗ್ಗೆ ಅನೇಕ ಸುದ್ದಿಗಳು ವೈರಲ್ ಆಗಿತ್ತು. ವರು ನಿರ್ದೇಶಕ ಮಾಡ್ತಾರೆ ಇವರು ಮಾಡ್ತಾರೆ ಎನ್ನುವ ಸುದ್ದಿಗಳು ಕೇಳಿಬರುತ್ತಲೇ ಇದೆ. ಆದರೆ ಈ ಬಗ್ಗೆಯಶ್ ಇನ್ನೂ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ದೊಡ್ಡ ಮಟ್ಟದಲ್ಲಿ ಅನೌನ್ಸ್ ಮಾಡಲಿದ್ದು ಯಾವಾಗ ಎಂದು ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!