
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಫ್ಯಾಮಿಲಿ ಕೆಲ ದಿನಗಳ ಕಾಲ ಮಾಲ್ಡೀವ್ಸ್ ಪ್ರವಾಸ ಮಾಡಿದ್ದರು. ಮಕ್ಕಳ ಜೊತೆ ಇದು ಮೊದಲ ಇಂಟರ್‌ನ್ಯಾಷನಲ್ ಟ್ರಿಪ್ ಆದ ಕಾರಣ ಸಖತ್ ಮೆಮೋರಬಲ್ ಆಗಿರಬೇಕೆಂದು ಐಷಾರಾಮಿ ಹೋಟೆಲ್‌ನಲ್ಲಿ ವಾಸವಿದ್ದು, ಸಾಮಾನ್ಯರಂತೆ ಮಣ್ಣಿನಲ್ಲಿ ಆಟವಾಡಲು ಬಿಟ್ಟರು. ಇಷ್ಟು ದಿನ ಐರಾ ಹಾಗೂ ಯಥರ್ವ್ ಫೋಟೋಗಳನ್ನು ನೋಡುತ್ತಿದ್ದ ನಮಗೆ ಇದೇ ಮೊದಲು ಅಮ್ಮ-ಮಗಳು ಡಾಲ್ಫಿನ್ ಜಂಪ್ ಎಂಜಾಯ್ ಮಾಡುತ್ತಿರುವ ವಿಡಿಯೋನ ಸರ್ಪ್ರೈಸ್ ಆಗಿ ಅಪ್ಲೋಡ್ ಮಾಡಿದ್ದಾರೆ.
'ನಾವು ಎಗ್ಸೈಟ್ ಆದಷ್ಟೆ ಎಗ್ಸೈಟ್ ಆಗಿದ್ದ ಡಾಲ್ಫಿನ್‌ಗಳಿವು. ಹಳೆ ನೆನೆಪುಗಳ ವಿಡಿಯೋ' ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಐರಾ ಹಾಗೂ ರಾಧಿಕಾ ಹಡಗಿನಲ್ಲಿ ಕುಳಿತು ಡಾಲ್ಫಿನ್ ನೋಡುತ್ತಿದ್ದರೆ ಯಶ್ ವಿಡಿಯೋ ಸೆರೆ ಹಿಡಿದಿದ್ದಾರೆ. ಡಾಲ್ಫಿನ್ ನೀರಿನಿಂದ ಹೊರಗೆ ಜಂಪ್ ಮಾಡಿದಾಗಲೆಲ್ಲಾ 'Ohooo Ohooo' ಎಂದು ಕೂಗುತ್ತಾ ಸಂಭ್ರಮಿಸುತ್ತಿದ್ದರು.
ನೀವು ಕೊಟ್ಟ ನಗು ಧಿರಿಸಿರುವೆ; ವ್ಯಾಲೆಂಟೈನ್ಸ್ ಡೇ ಆಚರಿಸಿದ ರಾಕಿಂಗ್ ದಂಪತಿ!
ಐರಾ ಹಾಗೂ ಯಥರ್ವ್ ಸೋಷಿಯಲ್ ಮೀಡಿಯಾಗೆ ಎಂಟ್ರಿ ಆದಾಗಿನಿಂದಲೂ ಅವರದ್ದೇ ಹವಾ. ರಾಧಿಕಾ ಹಾಗೂ ಯಶ್ ಮಕ್ಕಳ ಬಗ್ಗೆ ಏನೇ ಪೋಸ್ಟ್ ಮಾಡಿದರು ಕ್ಷಣದಲ್ಲಿ ವೈರಲ್ ಅಗುತ್ತದೆ. ಅದರಲ್ಲೂ ಐರಾ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಕಿಡ್. ಹೀಗೆ ಮಕ್ಕಳ ಫೋಟೋ ಹಾಗೂ ವಿಡಿಯೋ ಶೇರ್ ಮಾಡುತ್ತಿರಿ ಎಂದು ಅಭಿಮಾನಿಗಳು ಆಗಾಗ ಡಿಮ್ಯಾಂಡ್ ಮಾಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.